RCB ಫ್ಯಾನ್ಸ್ ಈ ಬಾರಿ ಡಬಲ್ ಜೋಶ್(double josh) ನಲ್ಲಿ, ಡಬಲ್ ಖುಷಿಯಲ್ಲಿದ್ದಾರೆ. ಒಂದು ಈಗಾಗಲೇ ಮಹಿಳೆಯರ ಪ್ರೀಮಿಯರ್ ಲೀಗ್ ನಲ್ಲಿ (WPL) ಈ ಸಲ ಕಪ್ ನಮ್ಮದಾಗಿರೋದು ಮತ್ತೊಂದು rcb ಅಭಿಮಾನಿಗಳ 16 ವರ್ಷಗಳ(16 years) ಕನಸು ಈ ಬಾರಿ ನನಸಾಗಲಿದೆ. ಟೀಮ್ ಹೆಸರಿನಲ್ಲಿ ಇರುವ bangalore ಬದಲು ಬೆಂಗಳೂರು (Bengaluru) ಆಗುವ ಸುಳಿವು ಕೊಟ್ಟಿದೆ rcb ಫ್ರಾಂಚೈಸಿ. ಇದು ಅಭಿಮಾನಿಗಳ ದಿಲ್ ಖುಷ್ ಆಗುವಂತೆ ಮಾಡಿದೆ.

ಆದ್ರೆ ಇಷ್ಟೆಲ್ಲಾ ಸಂತೋಷದ ನಡುವೆ ಇದೀಗ ಅಭಿಮಾನಿಗಳು ಬೇಸರಗೊಳ್ಳೋದಕ್ಕೆ ಕಾರಣ ರಶ್ಮಿಕಾ ಮಂದಣ್ಣ(rashmika mandanna). ಹೌದು rcb ನಾಲ್ಕನೇ unbox ಪ್ರೋಮೋದಲ್ಲಿ (unbox promo) ರಶ್ಮಿಕಾ ಮಂದಣ್ಣ (Rashmika mandanna) ಕಾಣಿಸಿಕೊಂಡಿರೋದು rcb ಅಭಿಮಾನಿಗಳ (rcb fans) ಕಣ್ಣನ್ನ ಕೆಂಪಾಗಿಸಿದೆ. ಹಲವು ಸಂದರ್ಭಗಳಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರು ರಶ್ಮಿಕಾಳನ್ನ (rashmika) rcb ಪ್ರೋಮೋಗೆ ಕರೆತರುವ ಅಗತ್ಯವೇನಿತ್ತು ?! ಎಂದು rcb ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.

ಮೊದಲ ಪ್ರೊಮೊದಲ್ಲಿ ರಿಷಭ್ ಶೆಟ್ಟಿ (Rishab shetty) ಕೋಣ ಓಡಿಸುವ ಮೂಲಕ , ಎರಡನೇ ಪ್ರೋಮೋದಲ್ಲಿ ಶಿವಣ್ಣ(shivarajkumar ) ಲಾಂಗ್ ಎತ್ತುವ ಮೂಲಕ , ಮೂರನೇ ಪ್ರೋಮೋದಲ್ಲಿ ಕಿಚ್ಚ ಸುದೀಪ್ (kichha Sudeep)ಇಡ್ಲಿ ಆರ್ಡರ್ ಮಾಡುವ ಮೂಲಕ ಹೆಸರು ಬದಲಾವಣೆಯ ಸುಳಿವು ಕೊಟ್ಟು ಅಭಿಮಾನಿಗಳಿಗೆ ಖುಷಿ ತಂದಿದ್ರು. ಆದ್ರೆ ನಾಲ್ಕನೇ ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣರನ್ನ (rashmika mandanna) ಕಾಸ್ಟ್ ಮಾಡುವ ಮೂಲಕ ಅಭಿಮಾನಿಗಳ ಸಂತಸವನ್ನು ಫ್ರಾಂಚೈಸಿ ಹಾಳುಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ (social media) ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ !






