ಕೋಲ್ಕತ್ತಾ (Kolkata): ಪಶ್ಚಿಮ ಬಂಗಾಳ (west Bengal) ಮುಖ್ಯಮಂತ್ರಿ (CM) ಮಮತಾ ಬ್ಯಾನರ್ಜಿ (mamata Banerjee) ಅವರ ಹಣೆಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮನೆಯ ಆವರಣದಲ್ಲಿ ನಡೆದಾಡುತ್ತಿರುವ ವೇಳೆ ಮಮತಾ ಬ್ಯಾನರ್ಜಿ ಅವರು ಆಯತಪ್ಪಿ ಬಿದ್ದು ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಮಮತಾ ಬಿದ್ದ ರಭಸಕ್ಕೆ ಹಣೆಗೆ ಗಂಭೀರವಾದ ಗಾಯವಾಗಿದೆ. ಗಾಯದ ಪ್ರಮಾಣ ಹೆಚ್ಚಾಗಿರುವ ಕಾರಣ ಹಣೆಗೆ ಸ್ಟಿಚ್ ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಕೆಲದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮಮತಾ ಬ್ಯಾನರ್ಜಿಯನ್ನು ಎಸ್ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತ ಸ್ರಾವವಾಗಿರುವ ಕಾರಣ ಮಮತಾ ಬ್ಯಾನರ್ಜಿ ಆಸ್ವಸ್ಥಗೊಂಡಿದ್ದಾರೆ. ಆದರೆ ಯಾರೂ ಆತಂಕ ಪಡುವು ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣಾ (loksabha election) ಹಿನ್ನೆಲೆಯಲ್ಲಿ ಸತತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಕ್ಷಿಣ ಕೋಲ್ಕತ್ತಾದಲ್ಲಿರುವ (South Kolkata) ಕಾಲಿಘಾಟ್ (kalighat ) ಬಳಿಯ ನಿವಾಸಕ್ಕೆ ಆಮಿಸಿದ ಮಮತಾ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದಾರೆ. ಬಳಿಕ ನಡೆದಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ (Narendra Modi) ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ, ಮಮತಾ ದೀದಿ ಅವರು ಶೀಘ್ರ ಗುಣಮುಖರಾಗಲಿ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುವೆ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಎಕ್ಸ್ ಖಾತೆಯಲ್ಲಿ ಮಮತಾ ಅವರ ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಹಂಚಿಕೊಂಡಿದ್ದು, ನಮ್ಮ ನಾಯಕಿಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದೆ.
#westBengal #mamataBanerjee #sufferedinjury #trinamoolcongress #narendramodi