ನಾನು ಅಷ್ಟು ಬೇಗ ಸಾಯಲ್ಲ, ನಿಮ್ಮ ಜೊತೆ ಇರ್ತೇನೆ, ಭಗವಂತ ನನಗೆ ಆಯಸ್ಸು ಕೊಡುತ್ತಾನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಹೇಳಿದರು.
ಹಾಸನ(Hassa)ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಚಿಕ್ಕ ವಯಸ್ಸಿನಿಂದಲೇ ಅರೋಗ್ಯ ಸಮಸ್ಯೆ ಇದೆ. ಈಗಾಗಲೆ ಎರಡುಬಾರಿ ಹೃದಯ ಚಿಕಿತ್ಸೆ ಆಗಿದೆ. ಈ ಮತ್ತೆ ಆಪರೇಷನ್ ಗೆ ಹೋಗಬೇಕಾದ ಪರಿಸ್ಥಿತಿಗೆ ಬಂದಿದ್ದೇನೆ. ನನಗೆ ನನ್ನ ಅರೋಗ್ಯಕ್ಕಿಂತ ಜನರ ಹಿತ ಮುಖ್ಯ. ಇನ್ನೆರಡು ದಿನದಲ್ಲಿ ನಾನು ಮತ್ತೆ ಅಸ್ಪತ್ರೆಗೆ ಸೇರಬೇಕು. ಈ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಯಿಂದಯಾವುದೇ ವ್ಯತ್ಯಾಸ ಆಗಬಾರದು. ನಾನು ಅಷ್ಟು ಬೇಗ ಸಾಯಲ್ಲ, ನಿಮ್ಮ ಜೊತೆ ಇರ್ತೇನೆ. ಭಗವಂತ ನನಗೆ ಆಯಸ್ಸು ಕೊಡ್ತಾನೆ ಎಂದು ಕುಮಾರಸ್ವಾಮಿ ಭಾವುಕರಾದರು.

ಹಾಸನದಿಂದ ಪ್ರಜ್ವಲ್(Prajwal Revanna) ಅವರೇ ಅಭ್ಯರ್ಥಿ ಎಂದು ಖಾತ್ರಿ ಪಡಿಸಿದ ಕುಮಾರಸ್ವಾಮಿ, ಮಂಡ್ಯ(Mandya)ದಲ್ಲಿ ನನ್ನ ಮಗನಿಗೆ ಆದ ಸ್ಥಿತಿ, ಹಾಸನದಲ್ಲಿ ನನ್ನ ಸಹೋದರನ ಮಗನಿಗೆ ಆಗಬಾರದು, ಉಳಿಸಿಕೊಳ್ಳಿ ಎಂದು ಮನವಿ ಮಾಡಿದ ಕುಮಾರಸ್ವಾಮಿ. ನಾನು ಹಾಸನದ ಬಿಜೆಪಿ(BJP) ಮುಖಂಡರಿಗೆ ಮನವಿ ಮಾಡ್ತೇನೆ. ದೇವೇಗೌಡರ ಹೆಸರು ಉಳಿಸಲು ಈ ಮೈತ್ರಿ ತೀರ್ಮಾನ ಮಾಡಿದ್ದೇನೆ, ಹೆಸರು ಹಾಳು ಮಾಡಲು ಅಲ್ಲ. ನಾವು ತಪ್ಪು ಮಾಡಿದ್ದರೆ ಕಾರ್ಯಕರ್ತರ ಕ್ಷಮೆ ಕೇಳ್ತೇನೆ. ಕೈ ಜೋಡಿಸಿ ಮನವಿ ಮಾಡುತ್ತೇನೆ, ಪ್ರಜ್ವಲ್ ಅಭ್ಯರ್ಥಿ ಅಲ್ಲ, ಕುಮಾರಸ್ವಾಮಿ ಎಂದು ಭಾವಿಸಿ ತೀರ್ಮಾನ ಮಾಡಿ ಎಂದು ಮನವಿ ಮಾಡಿದರು.
ನನ್ನಲ್ಲಿ ಪ್ರಜ್ವಲ್ ಅವರನ್ನು ಕಾಣಿ ಎಂದು ವಿನಂತಿಸುತ್ತೇನೆ, ಯಾವುದೇ ಅಪಪ್ರಚಾರಕ್ಕೆ ಬಲಿ ಆಗಬೇಡಿ. ಹಾಸನದಿಂದ ಪ್ರಜ್ವಲ್ ಸ್ಪರ್ದೆ ಖಚಿತಪಡಿಸಿದ ಕುಮಾರಸ್ವಾಮಿ, ನಮಗೆ ಮಂಡ್ಯ(Mandya), ಕೋಲಾರ(Kolar), ಹಾಸನ(Hassan) ಕೊಡಲು ತೀರ್ಮಾನ ಮಾಡಿದ್ದಾರೆ ಎಂದರು.
#HDKumaraswamy #FormerCM #Hassan #LokaSaba #Election2024 #BJPJDS












