ಸಂವಿಧಾನ ತಿದ್ದುಪಡಿಯ ಬಗ್ಗೆ ಮಾತನಾಡಿ ಸಂಸದ ಅನಂತ್ ಕುಮಾರ್ ಹೆಗ್ಡೆ ಮತ್ತೊಮ್ಮ ಸುದ್ದಿಯಾಗಿದ್ದಾರೆ. ಲೋಕ ಸಮರ ಸಮೀಪಿಸ್ತಿದ್ದಂತೆ ಆಕ್ಟಿವ್ ಆಗಿರುವ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಬಾರಿ ಸದ್ದು ಮಾಡ್ತಿದ್ದಾರೆ. ಹಲಗೇರಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಈ ಬಾರಿ ಮೋದಿಯವರು 400ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು ಅಂತ ಸಂಸದ ಅನಂತಕುಮಾರ್ ಹೇಳಿದ್ರು..

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯಲ್ಲಿ ಮಾತನಾಡಿದ ಅವರು, ನಮಗೆ ಲೋಕಸಭೆಯಲ್ಲಿ ಬಹುಮತ ಇದೆ, ಆದ್ರೆ ರಾಜ್ಯಸಭೆಯಲ್ಲಿ ಸಂಪೂರ್ಣ ಬಹುಮತ ಇಲ್ಲ.. ಸಂವಿಧಾನ ತಿದ್ದುಪಡಿ ಮಾಡಬೇಕಾದ್ರೆ ರಾಜ್ಯಸಭೆಯಲ್ಲೂ ಬಹುಮತ ಅವಶ್ಯಕವಾಗಿದೆ. ಈ ಹಿಂದೆ ಕಾಂಗ್ರೆಸ್ ನವ್ರು ಸಂವಿಧಾನ ಮೂಲ ಸ್ವರೂಪವನ್ನ ಏನು ತಿರುಚಿದ್ರು, ಅದರಲ್ಲಿ ಬೇಡದೇ ಇರೋದನ್ನೆಲ್ಲ ತುರುಕಿ ಇಡೀ ಹಿಂದೂ ಸಮಾಜವನ್ನ ಹತ್ತಿಕ್ಕೋ ರೀತಿ ಕಾನೂನು ಮಾಡಿದ್ರು ಎಂದೆಲ್ಲಾ ಉಲ್ಲೇಖಿಸಿ ಕಾಂಗ್ರೇಸ್ ವಿರುದ್ಧ ಕಿಡಿಕಾರಿದ್ರು..ಈಗ ಇದೆಲ್ಲವೂ ಬದಲಾಗಬೇಕಿದ್ರೆ ಈ ಅಲ್ಪಮತದಲ್ಲಿ ಆಗುವುದಿಲ್ಲ. ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆ 2/3 ಬಹುಮತವನ್ನ ನಮಗೆ ನೀಡಬೇಕು ಎಂದು ಹೇಳಿದ್ದಾರೆ.

ಆ ಮೂಲಕ ಒಂದುವೇಳೆ ಬಿಜೆಪಿಗೆ ಲೋಕಸಭೆಯಲ್ಲಿ 400ಕ್ಕಿಂತ ಹೆಚ್ಚಯ ಸ್ಥಾನ ಲಭಿಸಿ, ರಾಜ್ಯಸಭೆಯಲ್ಲೂ ಬಹುಮತ ದೊರೆತರೆ ನಾವು ಸಂವಿಧಾನ ತಿದ್ದುಪಡಿ ಮಾಡೋ ಆಶಯ ಹೊಂದಿದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.







