ಬೆಂಗಳೂರು (Bengaluru): ಲೋಕಸಭಾ ಚುನಾವಣೆಯಲ್ಲಿ (Loksabha Election) ಕೊನೆಗೂ ಎಸ್.ಪಿ.ಮುದ್ದಹನುಮೇಗೌಡರಿಗೆ (S. P. Muddahanumegowda) ಕಾಂಗ್ರೆಸ್ (Congress) ನ್ಯಾಯ ಒದಗಿಸಿದೆ.
ಲೋಕಸಭಾ ಚುನಾವಣೆಯ ಮೊದಲ ಪಟ್ಟಿಯಲ್ಲಿಯೇ ಎಸ್.ಪಿ.ಮುದ್ದಹನುಮೇಗೌಡರಿಗೆ ತುಮಕೂರು ಟಿಕೆಟ್ ಘೋಷಣೆ ಮಾಡಿ ಅವರಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿದೆ.

ಮುದ್ದಹನುಮೇಗೌಡ ಅವರು 2014 ರಲ್ಲಿ ತುಮಕೂರು (Tumakuru) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸಂಸತ್ ಪ್ರವೇಶಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ (Congress-JDS) ಮೈತ್ರಿಯಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Devegowda) ಅವರು ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಆ ಚುನಾವಣೆಯಲ್ಲಿ ಬಿಜೆಪಿಯ (BJP) ಜಿ.ಎಸ್.ಬಸವರಾಜು ವಿರುದ್ಧ ದೇವೇಗೌಡರು ಸೋಲು ಅನುಭವಿಸಿದ್ದರು. ಆ ಬಳಿಕ ಕಾಂಗ್ರೆಸ್ ಸಹವಾಸವೇ ಬೇಡ ಎಂದು ಮುದ್ದಹನುಮೇಗೌಡರು ಬಿಜೆಪಿ ಸೇರ್ಪಡೆಯಾಗಿದ್ದರು.
ಇತ್ತೀಚೆಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಮುದ್ದಹನುಮೇಗೌಡರು ಕಾಂಗ್ರೆಸ್ ಗೆ ಮರಳಿ ಸೇರ್ಪಡೆಗೊಂಡಿದ್ದರು.
ಇಂದು ಮುದ್ದಹನುಮೇಗೌಡರಿಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಿಸಿ ಈ ಹಿಂದೆ ಮೈತ್ರಿಯಿಂದ ಆಗಿದ್ದ ಎಡವಟ್ಟನ್ನು ಕಾಂಗ್ರೆಸ್ ಸರಿಪಡಿಸಿಕೊಂಡಿದೆ.
2019 ರಲ್ಲಿ ಟಿಕೆಟ್ ಮಿಸ್ ಎಂಬ ಅನುಕಂಪ, 2014 ರಿಂದ 2019 ರವರೆಗೂ ಲೋಕಸಭಾ ಸದಸ್ಯರಾಗಿ ಮಾಡಿದ ಕಾರ್ಯವನ್ನೇ ಮುಂದಿಟ್ಟುಕೊಂಡು ಮುದ್ದಹನುಮೇಗೌಡರು ಅಖಾಡಕ್ಕೆ ಇಳಿಯಲಿದ್ದಾರೆ.
#karnataka #bengaluru #loksabhaelection #SPMuddahanumegowda #tumakuru #congress