• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಮೇಶ್ವರಂ ಕೆಫೆ ಬ್ಲಾಸ್ಟ್​.. ಆರೋಪಿ ಪತ್ತೆಗೆ ಇಲ್ಲಿದೆ ಒಂದು ಮಾರ್ಗ..

Krishna Mani by Krishna Mani
March 5, 2024
in Top Story, ಕರ್ನಾಟಕ
0
ಬೇರೆ ಬ್ರಾಂಚ್ ನಲ್ಲೂ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು! ರಾಮೇಶ್ವರಂ ಕೆಫೆ ಮಾಲೀಕ
Share on WhatsAppShare on FacebookShare on Telegram

ADVERTISEMENT

-ಕೃಷ್ಣಮಣಿ

ಮಾರ್ಚ್​ 1, 2024ರ ಮಧ್ಯಾಹ್ನ 12.55ಕ್ಕೆ ಬಾಂಬ್​ ಸ್ಫೋಟ ನಡೆದಿತ್ತು. ಮಟ ಮಟ ಮಧ್ಯಾಹ್ನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಬೆಂಗಳೂರಿಗರನ್ನು ಅಷ್ಟಾಗಿ ಕಾಡದೆ ಇದ್ದರೂ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಪ್ರಕರಣ ನಡೆದು 5 ದಿನಗಳು ಕಳೆದರೂ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇನ್ನು ಇದನ್ನು ದೊಡ್ಡ ದೊಡ್ಡ ಉಗ್ರ ಸಂಘಟನೆಗಳು ಮಾಡಿಸಿರುವ ಕೃತ್ಯ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಉಗ್ರ ಸಂಘಟನೆಗಳು ಬಾಂಬ್​ ಸ್ಫೋಟ ಸೇರಿದಂತೆ ಯಾವುದೇ ಕೃತ್ಯ ನಡೆಸಿದರೂ ಅದನ್ನು ಬಹಿರಂಗ ಮಾಡಿಕೊಂಡು ಕುಖ್ಯಾತಿ ಪಡೆಯುವ ಹಂಬಲದಲ್ಲಿ, ನಾವೇ ವಿಧ್ವಂಸಕ ಕೃತ್ಯ ಎಸಗಿದ್ದು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಆದರೆ ಈ ಕೇಸ್​ನಲ್ಲಿ ಇಲ್ಲೀವರೆಗೂ ಯಾವುದೇ ಸಂಘಟನೆ ಕೃತ್ಯವನ್ನು ಒಪ್ಪಿಕೊಳ್ಳಲು ಮುಂದೆ ಬಂದಿಲ್ಲ.

NIA ತನಿಖೆಯಲ್ಲಿ ಆರೋಪಿ ಸಿಕ್ಕಿ ಬೀಳ್ತಾನಾ..?

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (Notional Investigation Agency) ವಹಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಆಗಿರುವ ಕಾರಣಕ್ಕೆ ಆರೋಪಿ ಪತ್ತೆ ಹಚ್ಚುವ ಸಲುವಾಗಿ NIA ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಕೇಂದ್ರ ಗೃಹ ಇಲಾಖೆ ಸೂಚನೆ ಅನ್ವಯ FIR ದಾಖಲು ಮಾಡಿಕೊಂಡಿರುವ NIA ಅಧಿಕಾರಿಗಳು, ಈಗಾಗಲೇ ಸ್ಫೋಟ ನಡೆದ ಸ್ಥಳಕ್ಕೆ ಆಗಮಿಸಿ ಹೆಚ್ಎಎಲ್ ಪೊಲೀಸ್​ ಠಾಣಾ ಇನ್ಸ್‌ಪೆಕ್ಟರ್ ಅಲ್ಲಾವುದ್ದೀನ್ ಬಳಿ ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಥಳ ಮಹಜರು ಕೂಡ ನಡೆಸಿದ್ದಾರೆ. ಆದರೆ ಆರೋಪಿ ಮಾಡಿರುವ ಮಾಸ್ಟರ್​ ಪ್ಲ್ಯಾನ್​ ತನಿಖೆಗೆ ಹಿನ್ನಡೆ ತಂದೊಡ್ಡಿದೆ ಎನ್ನುವುದು ತನಿಖಾ ಹೊಣೆ ಹೊತ್ತಿದ್ದ ಸಿಸಿಬಿ ಪೊಲೀಸ್​ ಮೂಲಗಳ ಮಾಹಿತಿ.

ಬೆಂಗಳೂರಲ್ಲಿ ಸಿಸಿಟಿವಿಗಳಿಗೆ ಕಡಿಮೆ ಏನಿಲ್ಲ. ಪ್ರತಿಯೊಂದು ಅಂಗಡಿ ಮಳಿಗೆಗಳು, ಮನೆಗಳಲ್ಲೂ ಹೊರಭಾಗದಲ್ಲಿ ಸಿಸಿಟಿವಿ ಹಾಕಿರುತ್ತಾರೆ. ರಸ್ತೆಗಳಲ್ಲಿ ಪೊಲೀಸ್ರು ಹಾಕಿರುವ ಸಿಸಿಟಿವಿಗಳು ಕೂಡ ದೃಶ್ಯಗಳನ್ನು ಸೆರೆ ಹಿಡಿದಿರುತ್ತವೆ. ಆದರೂ ಬಾಂಬರ್​ ಎಂದು ಶಂಕಿಸಲಾದ ವ್ಯಕ್ತಿ ಮೂರ್ನಾಲ್ಕು ಕಡೆಗಳಲ್ಲಿ ಮಾತ್ರ ಸೆರೆ ಸಿಕ್ಕಿದ್ದಾನೆ. ಅದೂ ಕೂಡ ಅಸ್ಪಷ್ಟ ಚಿತ್ರ. ಎಲ್ಲಿಯೂ ಸ್ಪಷ್ಟ ಮುಖಚರ್ಯೆ ಸಿಗದಂತೆ ಎಚ್ಚರಿಕೆ ವಹಿಸಿದ್ದಾನೆ. ಇನ್ನು ನೂರಾರು ಸಿಸಿಟಿವಿ ಪರಿಶೀಲಿಸಿದರೂ ಆತನ ಸುಳಿವಿಲ್ಲ. ಬಸ್​ ನಿಲ್ದಾಣದ ಕಡೆಗೆ ಹೋದವನು ಮುಂದೆ ಎಲ್ಲಿ ಹೋದ ಅನ್ನೋದೇ ತಿಳಿಯದಾಗಿದೆ. ಬಿಎಂಟಿಸಿ ಬಸ್​ನಲ್ಲಿ ಸಂಚಾರ ಮಾಡಿರಬಹುದು ಎನ್ನಲಾಗ್ತಿದೆ. ಆದರೆ ಸಿಸಿಟಿವಿ ಇಲ್ಲದ ಬಸ್​ನಲ್ಲಿ ಹೋಗಿರುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೂ ಆತನ ಪತ್ತೆಗೆ ಇಲ್ಲೊಂದು ಮಾರ್ಗವಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ಲಕ್ಷಾಂತರ ಮಂದಿಯಲ್ಲಿ ಸಾವಿರಾರು ಜನರ ವಾಹನದ ಡ್ಯಾಷ್​ಬೋರ್ಡ್​ ಹಾಗು ಹೆಲ್ಮೇಟ್​ನಲ್ಲಿ ಕ್ಯಾಮೆರಾ ಹಾಕಿಕೊಂಡಿರುತ್ತಾರೆ. ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಮಾರ್ಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30 ರ ಒಳಗೆ ಓಡಾಡಿರುವ ವಾಹನ ಮಾಲೀಕರನ್ನು ಸಂಪರ್ಕ ಮಾಡಿ, ಕಾರಿನ ಡ್ಯಾಷ್​ಬೋರ್ಡ್​ನಲ್ಲಿರುವ ಕ್ಯಾಮೆರಾ ಪರಿಶೀಲಿಸಬೇಕಿದೆ. ಈ ಬಾಂಬರ್​ ರಾಮೇಶ್ವರಂ ಕೆಫೆಗೆ ಬಾಂಬ್​ ಇಡುವ ಮೂರ್ನಾಲ್ಕು ತಿಂಗಳ ಮುಂಚಿತವಾಗಿಯೇ ಬಂದು ಎಲ್ಲವನ್ನು ಗಮನಿಸಿ ಹೋಗಿರುವ ಸಾಧ್ಯತೆಯಿದೆ. ಅದೇ ಕಾರಣದಿಂದ ಪೊಲೀಸರಿಗೆ ಈ ಹಿಂದಿನ ಸಿಸಿಟಿವಿಗಳು ಲಭ್ಯ ಇಲ್ಲದೆ ಇರಬಹುದು. ಇನ್ನು ಎಲ್ಲಾ ಸಿಸಿಟಿವಿಗಳನ್ನು ಗಮನಿಸಿಯೇ ಆತ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದಾನೆ. ಎಲ್ಲಿ ಕ್ಯಾಮೆರಾ ಇದೆ.. ಎಲ್ಲಿ ಕ್ಯಾಮೆರಾ ಇಲ್ಲಾ ಅನ್ನೋದನ್ನು ನೋಡಿಯೇ ಬ್ಲ್ಯೂ ಪ್ರಿಂಟ್​ ಮಾಡಿರುವ ಸಾಧ್ಯತೆಯಿದೆ. ಆದರೆ ವಾಹನದಲ್ಲಿ ಇರುವ ಕ್ಯಾಮೆರಾ ಬಗ್ಗೆ ಆತ ಏನನ್ನೂ ಮಾಡಲು ಸಾಧ್ಯವಿಲ್ಲ. ಕುಂದಲಹಳ್ಳಿ ಮುಂಭಾಗ ಓಡಾಡಿರುವ ಜನರನ್ನು ಆಹ್ವಾನಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದರೆ ಅನುಕೂಲ ಆದೀತು.

Previous Post

ಯಾವುದೇ ಕಾರಣಕ್ಕೂ ಟ್ರಯಲ್‌ ಬ್ಲಾಸ್ಟ್‌ ನಡೆಸಲು ಬಿಡಲ್ಲ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿಕೆ

Next Post

ಲೋಕಸಭಾ ‌ಚುನಾವಣೆ ಫಲಿತಾಂಶ ಆಧರಿಸಿ ವಿಧಾನಸಭೆ ಹೊಂದಾಣಿಕೆ ಬಗ್ಗೆ ತೀರ್ಮಾನ: ಎಚ್‌.ಕೆ. ಕುಮಾರಸ್ವಾಮಿ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
Next Post
ಲೋಕಸಭಾ ‌ಚುನಾವಣೆ ಫಲಿತಾಂಶ ಆಧರಿಸಿ ವಿಧಾನಸಭೆ ಹೊಂದಾಣಿಕೆ ಬಗ್ಗೆ ತೀರ್ಮಾನ: ಎಚ್‌.ಕೆ. ಕುಮಾರಸ್ವಾಮಿ

ಲೋಕಸಭಾ ‌ಚುನಾವಣೆ ಫಲಿತಾಂಶ ಆಧರಿಸಿ ವಿಧಾನಸಭೆ ಹೊಂದಾಣಿಕೆ ಬಗ್ಗೆ ತೀರ್ಮಾನ: ಎಚ್‌.ಕೆ. ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada