• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಮಾ.5ರಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಮುಂದಾಗಿರುವ ಸಹಾಯಕ ಪ್ರಾಧ್ಯಾಪಕರು

Any Mind by Any Mind
March 3, 2024
in ಇತರೆ / Others, ಇದೀಗ, ಕರ್ನಾಟಕ
0
ಮಾ.5ರಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಮುಂದಾಗಿರುವ ಸಹಾಯಕ ಪ್ರಾಧ್ಯಾಪಕರು
Share on WhatsAppShare on FacebookShare on Telegram

ಸಹಾಯಕ ಪ್ರಾಧ್ಯಾಪಕರ(Assistant Professors) ನೇಮಕಾತಿಯ ಆದೇಶದ ಗೆಜೆಟ್(gazette) ಮತ್ತು ಸ್ಥಳ ನಿಯುಕ್ತಿಯ(Placement) ವೇಳಾಪಟ್ಟಿಯನ್ನು ಹೊರಡಿಸುವಂತೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಹೋರಾಟ(Protest)ಕ್ಕೆ ಮುಂದಾಗಿದ್ದಾರೆ.

ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.5ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌(Freedom Park)ನಲ್ಲಿ ಅನಿರ್ದಿಷ್ಟಾವಧಿಯ ಸತ್ಯಾಗ್ರಹ ನಡೆಸಲು ಮುಂದಾಗಿದ್ದು, ಆ ಮೂಲಕ ತಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ನೆರವಾಗಬೇಕು ಹಾಗೂ ನೇಮಕಾತಿಯ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ADVERTISEMENT

2021ರಲ್ಲಿ ಸರ್ಕಾರಿ ಪ್ರಥಮ ದರ್ಜೆ(First Grade) ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ 26 ವಿಷಯಗಳ 1242 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಾಗಿ, ದಿನಾಂಕ: 03.03.2023 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಈ ಆಯ್ಕೆ ಪಟ್ಟಿಯಲ್ಲಿ ಒಟ್ಟು 1208 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಹೀಗೆ ವರ್ಷಾನುಗಟ್ಟಲೆ ನೆನಗುದಿಗೆ ಬಿದ್ದಿದ್ದ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು ಸರ್ಕಾರವು ದಿನಾಂಕ: 04/11/2023ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

ಉನ್ನತ ಶಿಕ್ಷಣ ಇಲಾಖೆಯು ಸಹ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಸಂಬಂಧ ದಿನಾಂಕ:26-02-2024ರಂದು ಹೊರಡಿಸಿದ (ಪತ್ರ ಸಂಖ್ಯೆ: ಕಾಶಿಇ/110/ವರ್ಗಾವಣೆ/2023-2024) ಅಧಿಕೃತ ಜ್ಞಾಪನ ಪತ್ರವನ್ನೂ ಒಂದೇ ದಿನದಲ್ಲಿ ಹಿಂಪಡೆದಿದೆ. ಇಲಾಖೆಯ ಅಧಿಕೃತ ಜ್ಞಾಪನ ಪತ್ರವನ್ನು ಹಿಂಪಡೆಯಲು ಕಾರಣವೇನು? ಮರುದಿವಸ ಅಂದರೆ, ದಿನಾಂಕ 27-02-2024 ರಂದು ಪ್ರಕಟವಾದ ಇಲಾಖೆಯ ಅಧಿಕೃತ ಜ್ಞಾಪನ ಪತ್ರದಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕರುಗಳ ಸ್ಥಳನಿಯುಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ವೇಳಾಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಸೂಚಿಸಲಾಗಿದೆ.

ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರು ಡಿಸೆಂಬರ್ ತಿಂಗಳ ಅಂತ್ಯಕ್ಕೆ, ನಂತರ ಜನವರಿ ತಿಂಗಳ ಅಂತ್ಯಕ್ಕೆ, ತದನಂತರವೂ ಫೆಬ್ರವರಿ ತಿಂಗಳ ಅಂತ್ಯಕ್ಕೆ ಆದೇಶ ಕೊಡಲಾಗುವುದು ಎಂಬ ಭರವಸೆಗಳನ್ನು ನಂಬಿಕೊಂಡಿದ್ದೇವು. ಹೀಗೆ ತಿಂಗಳಾಂತ್ಯಗಳು ಮುಗಿದವೇ ಹೊರೆತು ನಮಗೆ ನೇಮಕಾತಿ ಆದೇಶ ದೊರೆಯುತ್ತಿಲ್ಲ. ಇದರಿಂದಾಗಿ ನಮಗಂತೂ ಪ್ರತಿಕ್ಷಣವು ನರಕ ದರ್ಶನವಾಗುತ್ತಿದೆ.

ಈಗಾಗಲೇ ಅನೇಕ ಅಡೆತಡೆಗಳು ನಮ್ಮ ನೇಮಕಾತಿಯನ್ನು ಬೆಂಬಿಡದೇ ಕಾಡಿವೆ. ಈಗ 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ ಇದರಿಂದ ಮತ್ತೆ ನಮ್ಮ ಭವಿಷ್ಯ ಡೋಲಾಯಮಾನವಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಸನ್ಮಾನ್ಯರಾದ ಉನ್ನತ ಶಿಕ್ಷಣ ಸಚಿವರು ಕೊಟ್ಟ ಮಾತಿಗೆ ಇನ್ನೂ ಬದ್ಧವಾಗಿದ್ದರೆ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೆ, ಯಾವುದೇ ತೊಂದರೆ ಇಲ್ಲದ ಆದೇಶ ಪಡೆಯಲು ಸಿದ್ಧವಾಗಿರುವ 908 ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶದ ರಾಜ್ಯಪತ್ರವನ್ನು ಹೊರಡಿಸುವಂತಹ ಇಚ್ಛಾಶಕ್ತಿಯನ್ನು ತೋರಿಸಬೇಕೆಂದು ಪ್ರಾರ್ಥಿಸುತ್ತೇವೆ.

ಆದ್ದರಿಂದಾಗಿ 2021ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ  ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶದ ಗೆಜೆಟ್ ಮತ್ತು ಸ್ಥಳ ನಿಯುಕ್ತಿಯ ವೇಳಾಪಟ್ಟಿಯನ್ನು ಹೊರಡಿಸುವಂತೆ ಆಯ್ಕೆಯಾದ ಅಭ್ಯರ್ಥಿಗಳು ದಿನಾಂಕ: 05-03-2024ರ ಬೆಳಿಗ್ಗೆ 11 ಗಂಟೆಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿಯ ಪ್ರಜಾಸತ್ತಾತ್ಮಕವಾದ ಸತ್ಯಾಗ್ರಹವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

#AssistantProfessors #candidates #campaigning #Recruitment #gazette #placement #schedule.

Previous Post

ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ರಾಜ್ಯದ ಘನತೆ ಹಾಳು ಮಾಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

Next Post

ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬ ಸದಸ್ಯರು

Related Posts

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!
Top Story

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

by ಪ್ರತಿಧ್ವನಿ
March 5, 2026
0

ಬೆಂಗಳೂರು : ಇರಾನ್‌ - ಇಸ್ರೇಲ್‌ ನಡುವಿನ ಯುದ್ಧವು ಇಂದಿಗೆ 6ನೇ ದಿನಕ್ಕೆ ತಲುಪಿದೆ. ಈಗಾಗಲೇ ತನ್ನ ನಾಯಕನನ್ನು ಹೊಡೆದುರುಳಿಸಿದ ಅಮೆರಿಕ ಹಾಗೂ ಇಸ್ರೇಲ್‌ ವಿರುದ್ಧ ಇರಾನ್‌...

Read moreDetails
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

March 5, 2026
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

ಈ ತಿಂಗಳು ಲಾಂಚ್‌ ಆಗಲಿವೆ ಇಷ್ಟೆಲ್ಲಾ ಹೊಸ  ಫೋನ್‌ಗಳು! 

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
Next Post
ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬ ಸದಸ್ಯರು

ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬ ಸದಸ್ಯರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada