ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ಹಿಂದಿನ 2013-18 ರ ಅವಧಿಯಲ್ಲಿ ಸಿಎಂ ಆಗಿದ್ದಾಗ ತಮ್ಮ ಆಪ್ತ ಸ್ನೇಹಿತ ಕಿಂಗ್ಸ್ ಕೋರ್ಟ್ ವಿವೇಕ್ ಎಂಬುವವರಿAದ ಹಣ ಪಡೆದ ಪ್ರಕರಣಕ್ಕೆ ಸಂಬAಧಿಸಿದAತೆ ಲೋಕಾಯುಕ್ತ ಪೋಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ “ಬಿ – ರಿಪೋರ್ಟ್” ಅನ್ನು ರದ್ದುಗೊಳಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಲಯ ಮುಂದುವರೆದು ಹೊಸದಾಗಿ ತನಿಖೆ ಪ್ರಾರಂಭಿಸಿ, ಆರು ತಿಂಗಳ ಒಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಲೋಕಾಯುಕ್ತ ಪೋಲೀಸರಿಗೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶಿಸಿದ್ದು ಮುಂದಿನ ವಿಚಾರಣೆಯನ್ನು ಆಗಸ್ಟ್ 22 ಕ್ಕೆ ಮುಂದೂಡಿದರು.
ಸಿದ್ದರಾಮಯ್ಯನವರು ಚೆಕ್ ರೂಪದಲ್ಲಿ ಪಡೆದು ಬೆಂಗಳೂರು ಟರ್ಫ್ ಕ್ಲಬ್ ನಲ್ಲಿನ ಆಯಕಟ್ಟಿನ ಸ್ಥಾನವಾದ ಸ್ಟೀವಾರ್ಡ್ ಹುದ್ದೆ ಮತ್ತು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನವನ್ನು ತಮ್ಮ ಆದೇಶದ ಮೂಲಕ ದಯಪಾಲಿಸಿದ್ದರು. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ತಮ್ಮ ರಕ್ತ ಸಂಬAಧಿಗಳಿಗಾಗಲೀ ಅಥವಾ ಆತ್ಮೀಯರಿಗಾಗಲೀ ಯಾವುದೇ ಲಾಭದಾಯಕ ಹುದ್ದೆ ನೀಡುವಂತಿಲ್ಲ. ಈ ವಿಚಾರಕ್ಕೆ ಸಂಬAಧಿಸಿದAತೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಬೆಂಗಳೂರಿನ ನಗರ ಬಿಜೆಪಿ ಘಟಕ ವಕ್ತಾರರ ಎನ್.ಆರ್.ರಮೇಶ್ (NR Ramesh) ದಾಖಲಿಸಿದ್ದರು.
2023 ರಲ್ಲಿ ಸಿದ್ಧರಾಮಯ್ಯನವರು ಪುನಃ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದ ಲೋಕಾಯುಕ್ತ (Lokayuktha) ಪೋಲೀಸರು ನ್ಯಾಯಾಲಯಕ್ಕೆ “ಬಿ – ರಿಪೋರ್ಟ್” ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬAಧಿಸಿದ ಮತ್ತಷ್ಟು ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು. ಈ ಕಿಕ್ ಬ್ಯಾಕ್ ಪ್ರಕರಣದಲ್ಲಿ ಸತ್ಯಾಂಶ ಇರುವುದನ್ನು ಕಂಡುಕೊAಡ ನ್ಯಾಯಾಲಯವು ಪೋಲೀಸರು ಸಲ್ಲಿದಿದ್ದ “ಬಿ-ರಿಪೋರ್ಟ್” ಅನ್ನು ರದ್ದು ಪಡಿಸಿ ಆದೇಶಿಸಿದೆ, ಎಂದರು.
#CM #Siddaramaiah #LokayukthaPolice #TurfClub #case #investigation #Court #Kickback #BJP #Congress #