ಲೋಕಸಭಾ(Loka Saba) ಎಲೆಕ್ಷನ್(Election) ಹತ್ತಿರವಾಗ್ತಿದ್ದಂತೆ ಕಾಂಗ್ರೆಸ್(Congress) ಹಾಗೂ ಬಿಜಪಿ(BJP) ನಡುವೆ ವಾಕ್ಸಮರ ಜೋರಿದೆ. ಕೇಸರಿಪಡೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ(Priyanka Kharge) ಸಖತ್ತಾಗಿಯೇ ಕೌಂಟರ್ ಕೊಟ್ಟಿದ್ದಾರೆ. ಕಳೆದ ವರ್ಷ ಪ್ರಧಾನಿ(Prime Minister) ಮೋದಿಯವರ ಕರ್ನಾಟಕ ಪ್ರವಾಸಕ್ಕೆ ಸರ್ಕಾರ 18,248 ಲಕ್ಷಗಳನ್ನು ಖರ್ಚು ಮಾಡಿದೆ. ಕರ್ನಾಟಕದಲ್ಲಿ ವಿಶ್ವಗುರುವಿನ ಪ್ರತಿಮೆಯನ್ನು ವೈಭವೀಕರಿಸಲು ಸುಮಾರು 182 ಕೋಟಿ ಖರ್ಚು ಮಾಡಿದ್ದು ಲಾಭಾಂಶವನ್ನು ನೀಡಲಿಲ್ಲ, ಕೇವಲ ಬೊಕ್ಕಸಕ್ಕೆ ನಷ್ಟವಾಗಿದೆ.
ಇವು ಜಾಹೀರಾತುಗಳನ್ನು ಒಳಗೊಂಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ . ಈ ಮೂಲಕ ಬಿಜೆಪಿಯವ್ರಿಗೆ ಹಾಗೂ ಪಿಎಂ ಮೋದಿಗೆ ಪ್ರಿಯಾಂಕ್ ಖರ್ಗೆ ಡಿಚ್ಚಿ ನೀಡಿದ್ದಾರೆ .
ಇದೀಗ ಪ್ರಧಾನಿ ಮೋದಿಯವರ ಕರ್ನಾಟಕ(Karnataka) ಪ್ರವಾಸಕ್ಕೆ ಹಿಂದಿನ ಬಿಜೆಪಿ ಸರ್ಕಾರ 18,248 ಲಕ್ಷಗಳನ್ನು ಖರ್ಚು ಮಾಡಿದೆ ಎಂದಿದ್ದ ಪ್ರಿಯಾಂಕ್ ಖರ್ಗೆ ಟ್ವೀಟ್ಗೆ ಬಿಜೆಪಿ ಕೌಂಟರ್ ಟ್ವೀಟ್ ಕೊಟ್ಟಿದೆ. ಹೇ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ, ಹೆಸರಷ್ಟೇ ಅಲ್ಲ, ನೀವು ಗಾಂಧಿ ಕುಟುಂಬದೊಂದಿಗೆ ಅದೇ ಬುದ್ಧಿಮತ್ತೆಯ ಪ್ರಮಾಣ ಮಟ್ಟವನ್ನು ಸಹ ಹಂಚಿಕೊಳ್ಳುತ್ತೀರಿ. ವಿಷಯವು ನಿಮ್ಮ ತಿಳುವಳಿಕೆಯ ಸಾಮರ್ಥ್ಯವನ್ನು ಮೀರಿದೆಯಾದರೂ ನಾವು ಸರಳಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ನೀವು ಕೆಳಗೆ ಉಲ್ಲೇಖಿಸಿರುವ ಮೊತ್ತವನ್ನು ಭಾರತದ ಪ್ರಧಾನಮಂತ್ರಿಯವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರೋಟೋಕಾಲ್ ಪ್ರಕಾರ ಕಾನೂನುಬದ್ಧವಾಗಿ ಖರ್ಚು ಮಾಡಿದ್ದಾರೆ. ನಿಮ್ಮ ಪಕ್ಷವು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಕರ್ನಾಟಕ ರಾಜ್ಯದ ಸಂಪತ್ತಿನಿಂದ ಹಣವನ್ನು ಕಳುಹಿಸುತ್ತಿದೆ ಎಂದು ಬಿಜೆಪಿ ಹೇಳಿದೆ.
#Congress #PriyankaKharge #Minister #NarendraModi #PMofIndia