ಟೀಂ ಇಂಡಿಯಾ(Team India) ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಮತ್ತೊಮ್ಮೆ ಅಪ್ಪನಾಗಿದ್ದಾರೆ. ವಿರುಷ್ಕ ದಂಪತಿಗೆ ಪುತ್ರ ಜನನವಾಗಿದೆ. ಸ್ಟಾರ್ ಜೋಡಿ ಮನೆಗೆ ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ವಿರಾಟ್ ಪತ್ನಿ ಅನುಷ್ಕಾ ಶರ್ಮಾ(Anushka Dharma) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಖುದ್ದು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಫೆ.15 ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಚಾರ ಹಂಚಿಕೊಳ್ಳಲು ಸಂತಸವಾಗಿದೆ. ನಮ್ಮ ಬದುಕಲ್ಲಿ ಸಂಭ್ರಮ ಇಮ್ಮಡಿಯಾಗಿದೆ. ನಿಮ್ಮ ಶ ಹಾರೈಕೆ ನಮ್ಮ ಜೊತೆ ಇರಲಿ.ನಮ್ಮ ಪ್ರೈವೆಸಿಯನ್ನು ಗೌರವಿಸಿ ಅಂತ ಬರೆದುಕೊಂಡಿದ್ದಾರೆ. ಅಲ್ಲದೆ ಪುತ್ರಿ ವಮಿಕ ಪ್ರಪಂಚಕ್ಕೆ ಪುಟ್ಟ ತಮ್ಮನ ಆಗಮನವಾಗಿದೆ ಎಂದು ಹೇಳಿಕೊಂಡಿದ್ದಾರೆ.ಈ ಸುದ್ದಿಯನ್ನು ಮಂಗಳವಾರ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮಗುವಿಗೆ ಈಗಾಗಲೇ ‘ಅಕಾಯ್’ ಎಂದು ಹೆಸರಿಟ್ಟಿದ್ದೇವೆ ಅಂತ ಪೋಸ್ಟ್ ನಲ್ಲಿ ಹೇಳಿದ್ದಾರೆ.
#ViratKohli #TeamIndia #AnushkaShrma #KingKohli #Babyboy






