• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಉತ್ತರಖಂಡ ಯುಸಿಸಿ ಯುವಜನರ ಲೈಂಗಿಕತೆಯನ್ನು ನಿಯಂತ್ರಿಸುವ ಪ್ರಯತ್ನ ಫ್ಲೇವಿಯಾ ಅಗ್ನಿಸ್

Any Mind by Any Mind
February 20, 2024
in Top Story, ಅಂಕಣ
0
ಉತ್ತರಖಂಡ ಯುಸಿಸಿ  ಯುವಜನರ ಲೈಂಗಿಕತೆಯನ್ನು ನಿಯಂತ್ರಿಸುವ ಪ್ರಯತ್ನ ಫ್ಲೇವಿಯಾ ಅಗ್ನಿಸ್
Share on WhatsAppShare on FacebookShare on Telegram

ಮೂಲ : ಇಂಡಿಯನ್‌ ಎಕ್ಸ್‌ಪ್ರೆಸ್‌ 13 ಫೆಬ್ರವರಿ 2024
ಅನುವಾದ : ನಾ ದಿವಾಕರ

ADVERTISEMENT

Uttarakhand UCC Bill: ‘Extremely Regressive’ say Most Young People

ಉತ್ತರಖಂಡ ರಾಜ್ಯವು ಸಂವಿಧಾನದ 44 ನೇ ವಿಧಿಯ ಅಡಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಸರು ಪಡೆದುಕೊಂಡಿದೆ. ಯುಸಿಸಿ ಬುಡಕಟ್ಟು ಜನಸಂಖ್ಯೆ ಹೊರತುಪಡಿಸಿದಂತೆ ಎಲ್ಲಾ ಧರ್ಮಗಳ ಜನರಿಗೆ ಏಕರೂಪವಾಗಿ ಅನ್ವಯಿಸುತ್ತದೆ. ಸಮುದಾಯಗಳ ನಡುವೆ ಅಥವಾ ರಾಜ್ಯ ಶಾಸಕಾಂಗದಲ್ಲಿ ಸಾಕಷ್ಟು ಚರ್ಚೆ ನಡೆಸದೆಯೇ ಈ ಸಂಹಿತೆಯನ್ನು ಜಾರಿಗೊಳಿಸಿರುವುದು ಚರ್ಚಾಸ್ಪದವಾಗಿದೆ. ಹೊಸ ಸಂಹಿತೆಯ ಹಲವು ನಿಬಂಧನೆಗಳು ವಿವಾದಾತ್ಮಕವಾಗಿದ್ದರೂ, ಅತಿ ಹೆಚ್ಚು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದ ವಿಷಯವೆಂದರೆ ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿಯ ನಿಬಂಧನೆ. ಪರಸ್ಪರ ಸಮ್ಮತಿಸುವ ವಯಸ್ಕರ ನಡುವಿನ ಅನೌಪಚಾರಿಕ ಲೈಂಗಿಕ ಸಂಬಂಧಗಳನ್ನು ಔಪಚಾರಿಕಗೊಳಿಸುವ ನಿಬಂಧನೆಗಳನ್ನು ಪರಿಚಯಿಸುವ ಮೂಲಕ ಈ ಕಾಯ್ದೆಯು ಸಂಪೂರ್ಣವಾಗಿ ಹೊಸ ವಲಯವನ್ನು ಪ್ರವೇಶಿಸಿದೆ. ಹಾಗೆಯೇ ವ್ಯಕ್ತಿಗತ ಗೌಪ್ಯತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಕಾಳಜಿಗಳನ್ನು ಹೆಚ್ಚಿಸುತ್ತದೆ.

ಲಿವ್-ಇನ್ ಸಂಬಂಧಕ್ಕೆ ಪ್ರವೇಶಿಸಿದ ಒಂದು ತಿಂಗಳೊಳಗೆ ಮತ್ತು ಅದನ್ನು ಕೊನೆಗೊಳಿಸುವಾಗ ಸಹಭಾಗಿಗಳು ರಿಜಿಸ್ಟ್ರಾರ್‌ಗೆ ತಿಳಿಸಬೇಕೆಂದು ಸಂಹಿತೆ ಅಪೇಕ್ಷಿಸುತ್ತದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ತಜ್ಞರ ಸಮಿತಿಯು ಸಿದ್ಧಪಡಿಸಿದ ಈ ಯುಸಿಸಿಯಲ್ಲಿ ಲಿವ್-ಇನ್ ಸಂಬಂಧವನ್ನು ನೋಂದಾಯಿಸುವ ನಿಬಂಧನೆಗಳನ್ನು ಯಾವ ಉದ್ದೇಶಕ್ಕಾಗಿ ಸೇರಿಸಲಾಗಿದೆ ಎನ್ನುವುದು ಜಿಜ್ಞಾಸೆಯಾಗಿದೆ. ಇದು ಲಿವ್-ಇನ್ ಸಂಬಂಧದ ಉದ್ದೇಶವನ್ನು ವಿಫಲಗೊಳಿಸುತ್ತದೆ ಏಕೆಂದರೆ ಇದು ಔಪಚಾರಿಕ ಮದುವೆಗೆ ಸಮಾನವಾಗುತ್ತದೆ. ಏಕಪತ್ನಿತ್ವ, ನಿಷೇಧಿತ ಹಂತದ ಸಂಬಂಧಗಳು ಮೊದಲಾದ ವೈವಾಹಿಕ ಸಂಬಂಧಗಳ ಒಪ್ಪಂದಕ್ಕೆ ಹೋಲುವ ನಿರ್ಬಂಧಗಳನ್ನೇ ಹೋಲುತ್ತದೆ. ಅಷ್ಟೇ ಅಲ್ಲದೆ ಮದುವೆ ಮತ್ತು ವಿಚ್ಛೇದನದಂತೆಯೇ ಸಂಬಂಧವನ್ನು ಬೆಸೆಯುವ ಸಮಯದಲ್ಲಿ ಮತ್ತು ಅದರಿಂದ ನಿರ್ಗಮಿಸುವ ಸಮಯದಲ್ಲಿ ರಿಜಿಸ್ಟ್ರಾರ್‌ನೊಂದಿಗೆ ಒಪ್ಪಂದವನ್ನು ನೋಂದಾಯಿಸಬೇಕು ಎಂಬ ನಿಯಮವನ್ನೂ ಹೇರಲಾಗಿದೆ. ಹಾಗೊಮ್ಮೆ ನೋಂದಣಿ ಮಾಡದಿದ್ದರೆ 10,000 ರೂ.ಗಳ ದಂಡ ಮತ್ತು ನ ಅಥವಾ ಮೂರು ತಿಂಗಳ ಜೈಲು ಶಿಕ್ಷೆಯೊಂದಿಗೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಲಿವ್-ಇನ್ ಸಂಬಂಧದ ಪ್ರಮಾಣಪತ್ರವನ್ನು ಸಲ್ಲಿಸಲು ವಿಫಲವಾದರೆ, ಶಿಕ್ಷಾರ್ಹ ಅಪರಾಧವಾಗುವುದೇ ಅಲ್ಲದೆ 25,000 ರೂ.ಗಳ ದಂಡದ ಮೇಲೆ ಆರು ತಿಂಗಳ ಜೈಲು ಶಿಕ್ಷೆಯನ್ನು ಸೂಚಿಸಲಾಗುತ್ತದೆ. ಈ ನಿಬಂಧನೆಗಳು ಇಡೀ ಸಂಬಂಧವನ್ನು ಅನೌಪಚಾರಿಕ ಸಂಬಂಧದಿಂದ ಕಠಿಣ ಕ್ರಿಮಿನಲ್ ಕಾನೂನಿನ ಮೂಲಕ ನಿಯಂತ್ರಿಸಲ್ಪಡುವ ಸಂಬಂಧವಾಗಿ ಪರಿವರ್ತಿಸುತ್ತವೆ. ಯುವ ದಂಪತಿಗಳು ಅಂತಹ ಸಂಬಂಧಗಳಿಗೆ ಪ್ರವೇಶಿಸದಂತೆ ತಡೆಯುವುದು ಮತ್ತು ಅವರ ಲೈಂಗಿಕತೆಯನ್ನು ನಿಯಂತ್ರಿಸುವುದು ಇದರ ಸಂಪೂರ್ಣ ಉದ್ದೇಶವೆಂದು ತೋರುತ್ತದೆ ಮತ್ತು ವೈಯುಕ್ತಿಕ ಗೌಪ್ಯತೆ ಮತ್ತು ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

Young people across Uttarakhand are aghast at the forcible imposition of a registration clause for live-in relationships amongst consenting adults. This is one of the key sections in the Uniform Civil Code (UCC) Bill of Uttarakhand 2024 that was passed recently.

ಈ ಸಂಹಿತೆಯು ಈ ಭಿನ್ನಲಿಂಗೀಯ ಸಂಬಂಧವನ್ನು “ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧ” (live-in relationships. )ಎಂದು ವ್ಯಾಖ್ಯಾನಿಸುತ್ತದೆ, ಅವರು ಅಂತಹ ಸಂಬಂಧಗಳನ್ನು ನಿಷೇಧಿಸಿಲ್ಲವಾದರೆ , ಮದುವೆಯ ಸ್ವರೂಪದಲ್ಲಿನ ಸಂಬಂಧದ ಮೂಲಕ ಹಂಚಿಕೊಂಡ ಮನೆಯಲ್ಲಿ ಸಹಬಾಳ್ವೆ ನಡೆಸುತ್ತಾರೆ ಎಂದು ವ್ಯಾಖ್ಯಾನಿಸುತ್ತದೆ. ಈ ನಿಬಂಧನೆಗಳ ಬಗ್ಗೆ ಕೇಳಿದಾಗ, ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಲಿವ್-ಇನ್ ದಂಪತಿಗಳಲ್ಲಿ ಘೋರ ಅಪರಾಧಗಳ ಸಂಭವದ ಬಗ್ಗೆ ಕಾಳಜಿ ವಹಿಸುವುದು ಈ ನಿಬಂಧನೆಯ ಹಿಂದಿನ ಮೂಲ ಉದ್ದೇಶವಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. “ತಜ್ಞರ ಸಮಿತಿಯು ಸಾರ್ವಜನಿಕ ಸಮಾಲೋಚನೆಗಾಗಿ ಉತ್ತರಖಂಡದ ದೂರದ ಪ್ರದೇಶಗಳಿಗೆ ಹೋದಾಗ, ಹಲವಾರು ಘಟನೆಗಳು (ಲಿವ್-ಇನ್ ಅಪರಾಧಗಳು) ಜನರ ಮನಸ್ಸಿನಲ್ಲಿ ಉಳಿದಿದ್ದವು. ಸಾರ್ವಜನಿಕ ಸಮಾಲೋಚನೆಯ ಸಮಯದಲ್ಲಿ, ಪೋಷಕರು ಮತ್ತು ಹಿರಿಯರು, ಯುವತಿಯರನ್ನು ರಕ್ಷಿಸಲು ಕಾನೂನಿನಲ್ಲಿ ಏನಾದರೂ ಇರಬೇಕು ಎಂದು ಒತ್ತಾಯಿಸಿದರು. ವೈಯುಕ್ತಿಕ ಸ್ವಾತಂತ್ರ್ಯ ಮುಖ್ಯವಾದರೂ, ಯುವಜನರ ರಕ್ಷಣೆಯೂ ಮುಖ್ಯ. ಅದನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ಒಂದು ಮಾರ್ಗವನ್ನು ಕಂಡುಕೊಂಡಿತು.” ಎಂದು ಅಧಿಕಾರಿಗಳು ಹೇಳುತ್ತಾರೆ.

ಆದರೆ ಯುವ ವಯಸ್ಕರು ತಮ್ಮ ವೈಯುಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಈ ರೀತಿಯ ರಾಜ್ಯ ರಕ್ಷಣೆಯನ್ನು ಬಯಸದೆಯೂ ಇರಬಹುದು. ಇದು ಮದುವೆಯನ್ನು ಆಯ್ಕೆಯಾಗಿ ಪರಿಗಣಿಸದೆ ಅವರ ಖಾಸಗಿ ಜೀವನದಲ್ಲಿ ಸರ್ಕಾರಿ ಯಂತ್ರದ ಒಳನುಸುಳುವಿಕೆಯಿಲ್ಲದೆ ಒಮ್ಮತದ ಸಂಬಂಧವನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಈ ರೀತಿಯ ರಕ್ಷಣಾತ್ಮಕ ವಿಧಾನವು ಸಂಕುಚಿತ ದೃಷ್ಟಿಕೋನ ಹೊಂದಿದ್ದು ಮತ್ತು ಪಿತೃಪ್ರಧಾನವಾಗಿದೆ ಏಕೆಂದರೆ ಇದು ಪುಟ್ಟಸ್ವಾಮಿ ತೀರ್ಪಿನಲ್ಲಿ ಮೂಲಭೂತ ಹಕ್ಕು ಎಂದು ಗುರುತಿಸಲ್ಪಟ್ಟ ಖಾಸಗಿತನದ ಕ್ಷೇತ್ರವನ್ನು ಅತಿಕ್ರಮಿಸುತ್ತದೆ.

ವಿವಾಹಿತ ಮಹಿಳೆಯಂತೆಯೇ ತನ್ನ ಸಂಗಾತಿಯಿಂದ ಪರಿತ್ಯಕ್ತಳಾದ ಮಹಿಳೆಗೆ ಜೀವನಾಂಶವನ್ನು ಸಂಹಿತೆ ಒದಗಿಸುತ್ತದೆ. ಸೆಕ್ಷನ್ 388 ನಲ್ಲಿ “ಮಹಿಳೆ ತನ್ನ ಲಿವ್-ಇನ್ ಸಂಗಾತಿಯಿಂದ ಪರಿತ್ಯಕ್ತಗೊಂಡರೆ, ಅವಳು ತನ್ನ ಲಿವ್-ಇನ್ ಪಾಲುದಾರನಿಂದ ಜೀವನಾಂಶವನ್ನು ಪಡೆಯಲು ಅರ್ಹಳಾಗಿದ್ದಾಳೆ, ಇದಕ್ಕಾಗಿ ಅವರು ಕೊನೆಯದಾಗಿ ಸಹಜೀವನ ನಡೆಸಿದ ಪ್ರದೇಶದ ಮೇಲೆ ಅಧಿಕಾರ ಹೊಂದಿರುವ ಸಕ್ಷಮ ನ್ಯಾಯಾಲಯವನ್ನು ಸಂಪರ್ಕಿಸಬಹುದು.” ಎಂದು ಹೇಳಲಾಗಿದೆ.

.ಈ ಸಂಬಂಧಗಳನ್ನು ಈಗಾಗಲೇ ಕೌಟುಂಬಿಕ ಹಿಂಸಾಚಾರ ಕಾಯ್ದೆ, 2005 ರ ಅಡಿಯಲ್ಲಿ ರಕ್ಷಿಸಲಾಗಿದೆ. ಅಲ್ಲಿ ಅವುಗಳನ್ನು ಕೌಟುಂಬಿಕ ಸಂಬಂಧಗಳು ಎಂದು ಕರೆಯಲಾಗುತ್ತದೆ. ವೈವಾಹಿಕ ಸಂಬಂಧಗಳಲ್ಲಿರುವ ಮಹಿಳೆಯರು ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಿದಾಗ, ಅವರು ತಮ್ಮ ಸಂಗಾತಿಗಳಿಂದ ಜೀವನಾಂಶವನ್ನು ಪಡೆಯಲು ಅರ್ಹರಾಗಿರುತ್ತಾರೆ. ಲಿವ್-ಇನ್‌ ಸಂಬಂಧದಲ್ಲಿ ಜನಿಸಿದ ಮಗುವು ಕಾನೂನುಬದ್ಧ ಮಗು ಎಂದು ಸಂಹಿತೆ ಸ್ಪಷ್ಟವಾಗಿ ಸೂಚಿಸುತ್ತದೆ. ಇದು ಚಾಲ್ತಿಯಲ್ಲಿರುವ ಕಾನೂನು ಸ್ಥಿತಿಯಾಗಿದೆ ಆದರೆ ಈ ಯುಸಿಸಿ ಅಡಿಯಲ್ಲಿ ಇದನ್ನು ಸಂಹಿತೆಯಾಗಿ ರೂಪಿಸಲಾಗಿದೆ.

ಪ್ರಸ್ತಾವಿತ ಕಾನೂನು ಉತ್ತರಖಂಡದಲ್ಲಿ ವಾಸಿಸುವವರಿಗೆ ಮತ್ತು ಭಾರತದ ಬೇರೆಡೆ ವಾಸಿಸುವ ಉತ್ತರಖಂಡದ ನಿವಾಸಿಗಳಿಗೆ ಅನ್ವಯಿಸುತ್ತದೆ. ಸಂಹಿತೆಯ ಸೆಕ್ಷನ್ 378 ರ ಪ್ರಕಾರ ಲಿವ್-ಇನ್ ಸಂಬಂಧದಲ್ಲಿರುವವರು ಹೇಳಿಕೆಯನ್ನು ಸಲ್ಲಿಸಬೇಕಾಗುತ್ತದೆ. “ಸಹಭಾಗಿಗಳು ರಾಜ್ಯದೊಳಗೆ ಲಿವ್-ಇನ್ ಸಂಬಂಧವನ್ನು ಹೊಂದಿದ್ದ ಪಕ್ಷದಲ್ಲಿ , ಅವರು ಉತ್ತರಖಂಡದ ನಿವಾಸಿಯಾಗಿರಲಿ ಅಥವಾ ಇಲ್ಲದಿರಲಿ, ಸೆಕ್ಷನ್ 381 ರ ಉಪ-ಸೆಕ್ಷನ್ 1 ರ ಅಡಿಯಲ್ಲಿ ಲಿವ್-ಇನ್ ಸಂಬಂಧದ ಹೇಳಿಕೆಯನ್ನು ಅವರು ವಾಸಿಸುವ ರಿಜಿಸ್ಟ್ರಾರ್‌ಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ” ಎಂದು ಅದು ಸಂಹಿತೆಯಲ್ಲಿ ಹೇಳಲಾಗಿದೆ. “ಉತ್ತರಖಂಡದ ಯಾವುದೇ ನಿವಾಸಿ(ಗಳು) ರಾಜ್ಯದ ಭೂಪ್ರದೇಶದ ಹೊರಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ಪಕ್ಷದಲ್ಲಿ ಸೆಕ್ಷನ್ 381 ರ ಉಪ ಸೆಕ್ಷನ್ 1 ರ ಅಡಿಯಲ್ಲಿ ಲಿವ್-ಇನ್ ಸಂಬಂಧದ ಹೇಳಿಕೆಯನ್ನು ಅಂತಹ ನಿವಾಸಿ ಸಾಮಾನ್ಯವಾಗಿ ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿನ ರಿಜಿಸ್ಟ್ರಾರ್‌ಗೆ ಸಲ್ಲಿಸಬಹುದು” ಎಂದು ಸಂಹಿತೆ ಹೇಳುತ್ತದೆ.

ಈ ಸಂಪೂರ್ಣ ನಿಬಂಧನೆಯ ಅತ್ಯಂತ ಕಠೋರ ಭಾಗವೆಂದರೆ, ಮತಾಂತರ ವಿರೋಧಿ ಶಾಸನದಲ್ಲಿ ಮ್ಯಾಜಿಸ್ಟ್ರೇಟ್‌ಗೆ ನೀಡಲಾದ ಅಧಿಕಾರಗಳನ್ನು ಹೊಂದಿರುವ ರಿಜಿಸ್ಟ್ರಾರ್, ಪೂರ್ಣ ಪ್ರಮಾಣದ ವಿಚಾರಣೆ ನಡೆಸಬಹುದು. ಹಾಗೂ ಲಿವ್-ಇನ್ ಸಹಭಾಗಿಗಳನ್ನು ಅಥವಾ ಇತರ ಯಾವುದೇ ವ್ಯಕ್ತಿಗಳನ್ನು ಪರಿಶೀಲನೆಗಾಗಿ ಕರೆಯಬಹುದು. ಇದು ವಯಸ್ಕ ಮಹಿಳೆಯರನ್ನು ಎಳೆಬಾಲೆಯರಂತೆ ಪರಿಗಣಿಸುವಂತಾಗುವುದಲ್ಲದೆ, ಕುಟುಂಬ ಮತ್ತು ಸಮಾಜದಿಂದ ದುರುಪಯೋಗಕ್ಕೊಳಗಾಗುವುದಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಮ್ಯಾಜಿಸ್ಟ್ರೇಟ್ ಅವರಂತೆ ರಿಜಿಸ್ಟ್ರಾರ್‌ ನ್ಯಾಯಾಂಗ ಅಧಿಕಾರಿಯಾಗಿರುವುದಿಲ್ಲ. ಮತ್ತು ತನಿಖೆ ನಡೆಸುವುದರಲ್ಲಿ ಯಾವುದೇ ತರಬೇತಿ ಹೊಂದಿಲ್ಲ. ಮೇಲಾಗಿ ರಿಜಿಸ್ಟ್ರಾರ್ ದಾಖಲೆಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳುಹಿಸಬೇಕಾಗುತ್ತದೆ. ಸಂಗಾತಿಗಳಲ್ಲಿ ಒಬ್ಬರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ತಂದೆತಾಯಿಯರಿಗೆ ಅಥವಾ ಪೋಷಕರಿಗೆ ತಿಳಿಸಬಹುದು. (ವಿಪರ್ಯಾಸವೆಂದರೆ, ಪೋಷಕರ/ತಂದೆತಾಯಿಯರ ಅನುಮತಿಯಿಲ್ಲದೆ ಹುಡುಗಿ 18 ನೇ ವಯಸ್ಸಿನಲ್ಲಿ ಮದುವೆಯಾಗಬಹುದು). ಇಂತಹ ಹಲವು #Uttarakhand # UCC #Bill #Extremely #Regressive #YoungPeople #ucc #uniformcivilcode #rightwing #privacy #patriarchy #live-in relationships #uttarakhand UUC Bill

Previous Post

ಜನಸ್ಪಂದನ: 11 ದಿನದಲ್ಲಿ 4,321 ಅರ್ಜಿ ವಿಲೇವಾರಿ ಯಶಸ್ವಿ

Next Post

ಬಿಜೆಪಿಗೆ ಮುದ್ದುಹನುಮೇಗೌಡ ಗುಡ್‌ಬೈ?

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಬಿಜೆಪಿಗೆ ಮುದ್ದುಹನುಮೇಗೌಡ ಗುಡ್‌ಬೈ?

ಬಿಜೆಪಿಗೆ ಮುದ್ದುಹನುಮೇಗೌಡ ಗುಡ್‌ಬೈ?

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada