ಪ್ರವಾಸೋದ್ಯಮ ಸೇರಿದಂತೆ ಹಲವು ಕಾರಣಗಳಿಂದಾಗಿ ಕನ್ನಡಿಗರ ಜೀವನಾಡಿ ಕಾವೇರಿ ದಿನದಿಂದ ದಿನಕ್ಕೆ ಮಲಿನವಾಗುತ್ತಿದ್ದು, ಕಾವೇರಿ ನದಿಯ ಸ್ವಚ್ಛತೆ ಹಾಗೂ ಉಳಿಸುವ ಸಲುವಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಅದರಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವಕರ ತಂಡವೊಂದರ ಸದಸ್ಯರು ಕಾವೇರಿ ಹಾಗೂ ಕಪಿಲಾ ನದಿಯ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಜೀವನದಿಯ ಸ್ವಚ್ಛತೆ ಕಾಪಾಡುವ ಪ್ರಯತ್ನ ನಡೆಸಿದರು. ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತರು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ನದಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಗಮನ ಸೆಳೆದರು.

ಭಾನುವಾರ ಮುಂಜಾನೆಯೇ ಅವಳಿ ನದಿಗಳ ಸಂಗಮದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಯುವಕರೊಂದಿಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೂಡ ಸಾಥ್ ನೀಡಿದರು. ಎರಡು ದಿನಗಳ ಕಾಲ ನಡೆದ ನದಿ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾದ ಯುವ ಬ್ರಿಗೇಡ್ ಕಾರ್ಯಕರ್ತರು, ನದಿಯಲ್ಲಿ ಬಿಸಾಡಲಾಗಿದ್ದ ಪ್ಲ್ಯಾಸ್ಟಿಕ್, ಬಟ್ಟೆಗಳು, ಬೆಳೆದು ನಿಂತಿದ್ದ ಗಿಡಗಳನ್ನು ತೆರವುಗೊಳಿಸಿದರು. ತಿ.ನರಸೀಪುರದ ಸಂಗಮದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದ ಯುವ ಬ್ರಿಗೇಡ್ ಕಾರ್ಯಕರ್ತರು, ಗುಂಜಾನರಸಿಂಹಸ್ವಾಮಿ ದೇವಸ್ಥಾನ ಮುಂಭಾಗ ಕಾವೇರಿ ನದಿಗೆ ಆರತಿ ಬೆಳಗಿದರು.

#KaveriRiver #T.Narsipura #ChakravarthySulibele #YuvaBrigade #Karnataka