ದ.ಕ ಜಿಲ್ಲಾ ಬಿಜೆಪಿ (BJP) ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra) ಮಾತನಾಡಿ, ನಾನು ನಿನ್ನೆ ಗುಲ್ಪರ್ಗಾ ಭಾಗದಲ್ಲಿ ಪಕ್ಷದ ಮುಖಂಡರಿಗೆ ಚಾಟಿ ಬೀಸಿ ಬಂದೆ ಆದರೆ ಮಂಗಳೂರಿನಲ್ಲಿ ಚಾಟಿ ಬೀಸೋಣ ಅಂದ್ರೆ ಎಲ್ಲರೂ ಪಾಪದವರ ಥರ ಇದೀರ ರಾಜ್ಯದಲ್ಲಿ ಕಾಂಗ್ರೆಸ್ ಗೆ (Congress) ಸಿಕ್ಕ ವಿಜಯದ ನಾಗಲೋಟದ ಅತ್ಯುತ್ಸಾಹದಲ್ಲಿ ಇತ್ತು ಕರ್ನಾಟಕ ಗೆದ್ದು ಇಡೀ ದೇಶವನ್ನೇ ಗೆದ್ದ ಭ್ರಮೆಯಲ್ಲಿ ಇತ್ತು ಆದರೆ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಬೊಗಳೆ ಗ್ಯಾರಂಟಿ ನಡೀಲಿಲ್ಲ,ಅಲ್ಲಿನ ಜನರು ಮೋದಿ ಗ್ಯಾರಂಟಿಗೆ ಓಟ್ ಹಾಕಿ ಉತ್ತರ ನೀಡಿದ್ದಾರೆ
ಇದರ ಪರಿಣಾಮ INDIA ಕೂಟದ ಒಂದೊಂದೇ ದಳಗಳು ಉದುರ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಇನ್ನು ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಜೊತೆ ಎಷ್ಟು ಜನ ಇರ್ತಾರೋ ಅನ್ನೋ ಅನುಮಾನ ಇದೆ ಮುಂದಿನ ಲೋಕಸಭಾ ಚುನಾವಣೆ ಭಾರತದ ಭವಿಷ್ಯ ರೂಪಿಸಲಿದೆ ಸದ್ಯ ಕಾಂಗ್ರೆಸ್ ಕೈಯ್ಯಲ್ಲಿ ಅಧಿಕಾರ ಇದೆ, ಅದರ ಜೊತೆಗೆ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು ನಮ್ಮ ಮೇಲೆ 40% ಕಮಿಷನರ್ ಆರೋಪ ಮಾಡಿದ್ರು ಆದರೆ ಈಗ ಅವರ ಸರ್ಕಾರದಲ್ಲೇ ಕಮಿಷನ್ ಹಣವೇ ಸಿಗ್ತಾ ಇದೆ ಭ್ರಷ್ಟಾಚಾರದ ವಿರುದ್ದ ಭಾಷಣ ಮಾಡೋ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅಹಿಂದ ಅಹಿಂದ ಅಂತ ಭಾಷಣ ಮಾಡ್ತಾರೆ ಆದರೆ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಹಿಂದೆ ಓಡ್ತಾ ಇದ್ದಾರೆ. ನಮ್ಮ ಮುಂದಿನ ಗುರಿ ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲೋದು ಗೆಲ್ಲುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
#Dakshinakannada #Vijayendra #congress #bjp #Jds #politics