ರಷ್ಯಾ: ರಷ್ಯಾ (Russia) ಮಿಲಿಟರಿ ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ 74 ಮಂದಿ ಮೃತಪಟ್ಟಿದ್ದಾರೆ.ಉಕ್ರೇನ್ (Ukraine) ಯುದ್ಧ ಕೈದಿಗಳನ್ನು ಕರೆತರುತ್ತಿದ್ದ ವಿಮಾನ ಬೆಲ್‌ಗೊರೋಡ್ ಪ್ರಾಂತ್ಯದಿಂದ ವಾಪಸ್ ಕರೆತರುತ್ತಿದ್ದ ವೇಳೆ ಪತನವಾಗಿದೆ.ಬೆಲ್‌ಗೊರೋಡ್ ಪ್ರಾಂತ್ಯವು ಉಕ್ರೇನ್ ಗಡಿಯಲ್ಲಿದ್ದು, ಡಿಸೆಂಬರ್‌ನಲ್ಲಿ ಕ್ಷಿಪಣಿ ದಾಳಿಯಿಂದ 25 ಮಂದಿ ಮೃತಪಟ್ಟಿರುವುದು ಒಳಗೊಂಡು ಹಲವು ತಿಂಗಳಿನಿಂದ ಉಕ್ರೇನ್ ಕಡೆಯಿಂದ ದಾಳಿ ನಡೆಸಲಾಗುತ್ತಿದೆ.

ಆರು ಸಿಬ್ಬಂದಿ, ಮೂವರು ಭದ್ರತಾ ಸಿಬ್ಬಂದಿಯೊಂದಿಗೆ ಉಕ್ರೇನಿನ 65 ಯುದ್ಧ ಕೈದಿಗಳನ್ನು ಸೆರೆ ಹಿಡಿದು ವಿನಿಮಯಕ್ಕಾಗಿ ಬೆಲಗೊರೋಡ್ ಪ್ರಾಂತ್ಯಕ್ಕೆ ಕರೆತರಲಾಗುತ್ತಿತ್ತು ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಉಕ್ರೇನ್ ಸೇನೆ ತನ್ನ ಸ್ವಂತ ಸೇನೆಯನ್ನೇ ಹೊಡೆದುರುಳಿಸಿದೆ. ನಮ್ಮ ಪೈಲಟ್‌ಗಳು ಮಾನವೀಯತೆಯ ಕಾರ್ಯಾಚರಣೆ ಮಾಡುತ್ತಿದ್ದ ನಮ್ಮ ಪೈಲಟ್‌ಗಳನ್ನು ಕೂಡ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಸಂಸತ್ತಿನ ಕೆಳಮನೆಯ ಸ್ಪೀಕರ್ ಆರೋಪಿಸಿದ್ದಾರೆ.

ರಷ್ಯಾ ಕ್ಷಿಪಣಿ ದಾಳಿಯಿಂದ ನಮ್ಮ ವಾಯುಪಡೆಯ 18 ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.