ಬೆಂಗಳೂರು: ಶಾಸಕರ ಉಪಸ್ಥಿತಿಯಲ್ಲೇ ಜನರಿಗೆ ಸಾರಾಯಿ ಹಂಚಿಕೆ ಮಾಡಿರುವ ಪ್ರಸಂಗ ನಡೆದಿದೆ. ಬೆಂಗಳೂರಿನ ಆರ್.ಆರ್. ನಗರ ಶಾಸಕ ಮುನಿರತ್ನ ಕ್ಷೇತ್ರದಲ್ಲಿ ಬಹಿರಂಗವಾಗಿ ಸಾರಾಯಿ ಹಂಚಿಕೆ ಮಾಡಲಾಗಿದ್ದು, ಮಕರ ಸಂಕ್ರಾಂತಿ ಹಬ್ಬಕ್ಕೆ ಮುನಿರತ್ನ ಬೆಂಬಲಿಗರು ಸಾರಾಯಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಕ್ಷ್ಮೀ ದೇವಿ ನಗರ ವಾರ್ಡ್ ನಲ್ಲಿ ಬಿಜೆಪಿ ಮುಖಂಡರು ಸಾರಾಯಿ ಹಂಚಿದ್ದು, ಮಾಜಿ ಸಚಿವ ಮುನಿರತ್ನ ಅವರ ಸಹಚರ ವಸಂತ್ ಎಂಬಾತನಿಂದ ಸಾರಾಯಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಿಂದೆ ಸೀರೆ-ಕುಕ್ಕರ್‌ಗೆ ಫೇಮಸ್ ಆಗಿದ್ದ ಆರ್.ಆರ್ ನಗರದಲ್ಲಿ ಇದೀಗ ಸಾರಾಯಿ ಸುರಿಮಳೆ ನಡೆದಿದ್ದು, ಸಾರಾಯಿ ಹಂಚುವ ವೇಳೆ ಶಾಸಕ ಮುನಿರತ್ನ ಕೂಡ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.