ಮೈಸೂರು: ನಕಲಿ(Fake) ಇನ್ವಾಯ್ಸ್(Invoice)ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ(Tax) ವಂಚಿಸಿದ್ದ ಜಾಲವನ್ನು ಕೇಂದ್ರೀಯ ತೆರಿಗೆ ಜಿಎಸ್ಟಿ(GST) ಕಚೇರಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮೈಸೂರಿನ ರಬ್ ಟ್ರೇಡರ್ಸ್ ಮಾಲೀಕ ಬಂಧಿತನಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ ವ್ಯಕ್ತಿಯು ಹೊರ ರಾಜ್ಯಗಳಿಂದ ಮೈಸೂರಿಗೆ ತರಿಸುವ ಸರಕು ಹಾಗೂ ಮೈಸೂರಿನಿಂದ ಹೊರರಾಜ್ಯಗಳಿಗೆ ಕಳುಹಿಸುವ ಸರಕುಗಳ ಸಂಬಂಧ ನಕಲಿ ಇನ್ ವಾಯ್ಸ್ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ 14 ಕೋಟಿ ರೂ.ಗೂ ಹೆಚ್ಚು ತೆರಿಗೆ ವಂಚಿಸಿದ್ದಾನೆ. ಈತ ಯಾವುದೇ ಅಧಿಕೃತ ರಶೀದಿ ಇಲ್ಲದೇ, ನಕಲಿ ಘಟಕಗಳಿಗೆ ಸರಕು ಸಾಗಣೆ ಮಾಡಿರುವಂತೆ ತೋರಿಸಿ ಕೋಟ್ಯಂತರ ರೂ. ವಹಿವಾಟು ಕೇವಲ ಕಾಗದದ ಮೇಲೆ ನಡೆಸುವ ಮೂಲಕ ವಂಚಿಸಿರುವುದು ಗೊತ್ತಾಗಿದೆ. ಈ ವಂಚನೆ ಜಾಲದಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ. ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರಿನ ಕೇಂದ್ರೀಯ ತೆರಿಗೆ ಜಿಎಸ್ಟಿ ಕಚೇರಿ ಅಧಿಕಾರಿಗಳು ವಂಚನೆಯ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದ ಮದರಸ ರೀ ಓಪನ್ – ಹಿಂದೂ ಸಂಘಟನೆ ಧಿಡೀರ್ ಸಭೆ
ಮೈಸೂರಿನ (Mysuru) ಕ್ಯಾತಮಾರನಹಳ್ಳಿ (Kyatamaranahalli) ವಿವಾದಿತ ಸ್ಥಳದಲ್ಲಿ ಮದರಸ (Madarasa) ರೀ ಓಪನ್ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ,ಈಗ ಮದರಸ ತೆರೆಯಲು ಜಿಲ್ಲಾಧಿಕಾರಿ ಅನುಮತಿ ನೀಡಿರುವ ಹಿನ್ನಲೆ,ಡಿಸಿ ಆದೇಶ...
Read moreDetails