ಮಹಿಷ ಚಿತ್ರವಿರುವ ರಂಗೋಲಿಯನ್ನು ತುಳಿದು ವಿಕೃತಿ ಮೆರೆದಿದ್ದಾರೆಂದು ಮಾಲೇಶ್ ಎಂಬುವರರಿಂದ ಪ್ರಕರಣ ದಾಖಲಾಗಿದೆ.
ಮೌಢ್ಯಪ್ರತಿಬಂಧಕ ಕಾಯ್ದೆ ಜಾರಿಯಲ್ಲಿದ್ದರೂ ಮೌಢ್ಯ ಬಿತ್ತಿದ್ದಾರೆ.ಮೌಢ್ಯಾಚರಣೆ ಆಚರಿಸಿದ್ದಾರೆಂದು ಪ್ರಕರಣ ದಾಖಲು. ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಪಿಲೇಶ್, ಅನಂತ್, ಕಿರಣ್, ರಾಜು, ರವಿ, ಗಿರೀಶ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಬಳಿ ಮಂಗಳವಾರ ರಾತ್ರಿ ಅಂಧಕಾಸುರನ ಸಂಹಾರ ಕಾರ್ಯಕ್ರಮ ಇತ್ತು. ಮಹಿಷನ ಚಿತ್ರದ ಫ್ಲೆಕ್ಸ್ ಅಳವಡಿಸಿ ರಂಗೋಲಿ ಬಿಡಿಸಿ ಸಂಹಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದನ್ನು ಮಾಲೇಶ್, ನಾರಾಯಣ್ ಹಾಗೂ ಇತರರು ವಿರೋಧಿಸಿದ್ದರು.

ಈ ವೇಳೆ ದೇವಾಲಯದ ಇಓ ಜಗದೀಶ್ ಕುಮಾರ್ ರವರು ಮೌಢ್ಯಾಚರಣೆ ಆಚರಿಸುವುದಿಲ್ಲವೆಂದು ನಂಬಿಸಿದ್ದರು. ನಂತರ ಮಹಿಷನ ಚಿತ್ರವಿರುವ ರಂಗೋಲಿಯನ್ನು ಕೆಲವು ಆಗಮಿಕರು ಹಾಗೂ ಪುರೋಹಿತರು ತುಳಿದು ಅಳಿಸಿ ಹಾಕಿದ್ದಾರೆ.
ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ದೂರಿನಲ್ಲಿ ಆರೋಪ.






