ಬೆಂಗಳೂರು: ಆರ್ಯವೈಶ್ಯ ಸಮುದಾಯ ಶೈಕ್ಷಣಿಕವಾಗಿ ಇವತ್ತು ಎಷ್ಟು ಮುಂದುವರಿದಿದೆ ಎಂದರೆ ನನಗೆ ಇವತ್ತು ಬಹಳ ಸಂತೋಷವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂತಸ ವ್ಯಕ್ತಪಡಿಸಿದರು.
ಇಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ (Mahalakshmi Layout) ನ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ನಡೆದ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ 13ನೇ ಪ್ರತಿಭೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಶಿಕ್ಷಣ ಬಹುದೊಡ್ಡ ಬದಲಾವಣೆಯನ್ನ ನಮ್ಮ ದೇಶದಲ್ಲಿ ತಂದಿದೆ. ದೇಶದ ಅರ್ಥಿಕ ಬೆಳವಣಿಗೆ ಶಿಕ್ಷಣದ ಕೊಡುಗೆ ಬಹಳ ಮುಖ್ಯ. ಯಾವ ದೇಶ ಬಡತನದ ದೇಶವಾಗಿತ್ತು, ಇವತ್ತು ಆ ದೇಶ ಆರ್ಥಿಕತೆಯಲ್ಲಿ ಪ್ರಪಂಚಕ್ಕೆ ನಾಲ್ಕನೇ ಸ್ಥಾನಕ್ಕೆ ಬಂದಿದ್ದು ಶಿಕ್ಷಣದಿಂದ.
ಜಾತಿ, ಧರ್ಮ ನೋಡದೆ ಯುವಕರು ಹಾಗೂ ರೈತರು ದೇಶ ಕಟ್ಟಿದ್ದಾರೆ. ಕರ್ನಾಟಕ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನ ತಂದಿದೆ. ಅದರಲ್ಲೂ ವಾಸವಿ ಸಮಾಜ ಶಿಕ್ಷಣದಲ್ಲಿ ಮಾಡಿರುವ ಸಾಧನೆ ಹೆಮ್ಮೆ ವಿಚಾರ. 14 ಜನ ವಾಸವಿ ಸಮಾಜದ ವಿಜ್ಞಾನಿಗಳು ಇಸ್ರೋದಲ್ಲಿ ಇದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ತಮ್ಮ ಸಮುದಾಯದ ಪ್ರತಿಭಾನಿತ್ವದ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡುವುದು ಶ್ಲಾಘನೀಯ ಎಂದರು.