• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತೆಲಂಗಾಣ ಸಂಸದನಿಗೆ ಚೂರಿ ಇರಿದ ಪತ್ರಕರ್ತ!

ಪ್ರತಿಧ್ವನಿ by ಪ್ರತಿಧ್ವನಿ
October 30, 2023
in Top Story, ದೇಶ, ರಾಜಕೀಯ
0
ತೆಲಂಗಾಣ ಸಂಸದನಿಗೆ ಚೂರಿ ಇರಿದ ಪತ್ರಕರ್ತ!
Share on WhatsAppShare on FacebookShare on Telegram

  ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆಪ್ತ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಅವರು ಸಿದ್ದಿಪೇಟೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಸ್ಥಳೀಯ ವರದಿಗಾರನೊಬ್ಬ ಚೂರಿ ಇರಿದು ಗಾಯಗೊಳಿಸಿದ್ದಾನೆ.

ADVERTISEMENT

ಪ್ರಭಾಕರ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಯ ಬಳಿ v90 ಮಾಧ್ಯಮದ ವರದಿಗಾರ ಎಂಬ ಐಡಿ ಕಾರ್ಡ್‌ ಪತ್ತೆಯಾಗಿದೆ. ಬಿಆರ್‌ ಎಸ್‌ ಪಕ್ಷದ ಕಾರ್ಯಕರ್ತರು ಹಾಗೂ ಸಂಸದ ಅಭಿಮಾನಿಗಳು ಆರೋಪಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಕಾಲಿನಿಂದ ಒದ್ದು, ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

“ಬಿಆರ್‌ಎಸ್ ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿ ವಿ90 ನ್ಯೂಸ್‌ನ ಸ್ಥಳೀಯ ವರದಿಗಾರ ಎಂದು ವರದಿಯಾಗಿದೆ. ಆದರೆ ಆತ ನಕಲಿ ಐಡಿ ಕಾರ್ಡ್ ಮಾಡಿದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಸೌತ್‌ ಫಸ್ಟ್‌ ಪತ್ರಕರ್ತೆ ದೀಪಿಕಾ ಪಾಶಂ ಟ್ವೀಟ್‌ ಮಾಡಿದ್ದಾರೆ.

#Breaking the accused who attacked BRS MP Kotha Prabhakar Reddy with a knife is reportedly a local reporter for V90 news but police are investigating if he made a duplicate ID card.@TheSouthfirst pic.twitter.com/Oq0WGUUEGh

— Deepika Pasham (@pasham_deepika) October 30, 2023

ನವೆಂಬರ್ 30 ರಂದು ನಡೆಯಲಿರುವ ಚುನಾವಣೆಗೆ ದುಬ್ಬಾಕ್ ವಿಧಾನಸಭಾ ಕ್ಷೇತ್ರದಿಂದ ಬಿಆರ್‌ಎಸ್ ಅಭ್ಯರ್ಥಿಯಾಗಿ ಪ್ರಭಾಕರ್‌ ರೆಡ್ಡಿ ಅವರು ಕಣಕ್ಕಿಳಿದಿದ್ದಾರೆ.

“ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಸುರಕ್ಷಿತವಾಗಿದ್ದಾರೆ. ದೌಲತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅವರನ್ನು ಗಜ್ವೇಲ್‌ಗೆ ಸ್ಥಳಾಂತರಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಸಿದ್ದಿಪೇಟೆ ಕಮಿಷನರ್ ಎನ್ ಶ್ವೇತಾ ಎಎನ್‌ಐಗೆ ತಿಳಿಸಿದ್ದಾರೆ.

ಪ್ರಭಾಕರ್‌ ರೆಡ್ಡಿ ತೆಲಂಗಾಣದ ಮೇದಕ್‌ನ ಹಾಲಿ ಸಂಸದರಾಗಿದ್ದಾರೆ. 2014 ರಲ್ಲಿ ಕೆಸಿಆರ್ ಮುಖ್ಯಮಂತ್ರಿಯಾಗಲು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ನಂತರ ಮೇದಕ್‌ ಕ್ಷೇತ್ರದಿಂದ ಸಂಸದರಾದರು. ಇತ್ತೀಚೆಗಷ್ಟೇ ಅವರನ್ನು ದುಬ್ಬಾಕ್‌ನ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಅವರು ಭಾರತೀಯ ಜನತಾ ಪಕ್ಷದ ರಘುನಂದನ್ ರಾವ್ ವಿರುದ್ಧ ಸ್ಪರ್ಧಿಸಿದ್ದಾರೆ.

ಪ್ರಸ್ತುತ ಬಿಆರ್‌ಎಸ್ ಆಡಳಿತದಲ್ಲಿರುವ ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.

Tags: brscampaigningKotha Prabhakar ReddymppollSiddipetstabTelangana
Previous Post

ಚುನಾವಣಾ ಬಾಂಡ್ ನಿಧಿಯ ಮೂಲವನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇಲ್ಲ: ಕೇಂದ್ರ

Next Post

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎನ್ನುವುದು ಸರಿಯಲ್ಲ : ಚೀನಾ

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post
ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎನ್ನುವುದು ಸರಿಯಲ್ಲ : ಚೀನಾ

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎನ್ನುವುದು ಸರಿಯಲ್ಲ : ಚೀನಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada