ಕಾಂಗ್ರೇಸ್ ನಲ್ಲಿ ಸಾಮೂಹಿಕ ರಾಜಿನಾಮೆ ನೀಡುತ್ತಿದ್ದಾರೆ ಇಷ್ಟು ದಿನ ರಾಜಕೀಯ ಮುಖಂಡರು ಪಕ್ಷ ತೊರೆಯುತ್ತಿದ್ರು ಆದರೇ ಇದೀಗ ಲೋಕಸಭಾ ಚುನಾವಣೆ ಸಮೀಪಿಸುರ್ತಿರುವಾಗಲೆ ಪಕ್ಷ ತೊರೆಯಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೇಸ್ ಶಾಸಕನ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಬೇಸತ್ತು ರಾಜಿನಾಮೆಗೆ ಸಿದ್ದತೆ ನಡೆಯುತ್ತಿದೆ. ಜಮಾಲ್‌ಎಂಬಾತನ ಕಿರುಕುಳಕ್ಕೆ ಬೇಸತ್ತು ಕಾಂಗ್ರೇಸ್ ಪಕ್ಷ ತೊರೆಯಲು ನಿರ್ಧಾರ ಮಾಡಿದ್ದಾರೆ. ಹಾಗಿದ್ರೆ ಯಾರು ಈ ಜಮಾಲ್..? ಅವನಿಗು ಕಾಂಗ್ರೇಸ್ ಗು ಏನು ಸಂಬಂಧ..? ಜಮಾಲ್ ನೀಡುತ್ತಿರುವ ಕಿರುಕುಳಗಳೇನು..? ಮಾಡುತ್ತಿರುವ ದಂಧೆಗಳೇನು ..?
ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಅವರೇ ಯಾರು ಈ ಜಮಾಲ್ ..? ನಾನು ಶಾಸಕ ರಿಜ್ವಾನ್ ಹರ್ಷದ್ ಅವರ ಅಕ್ಕನ ಮಗ ಅಂತಾನಂತೆ ಈ ಜಮಾಲ್ . ಶಿವಾಜಿನಗರದಲ್ಲಿ ಒಂದು ಹುಲ್ಲು ಕಡ್ಡಿ ಅಲ್ಲಾಡಬೇಕು ಅಂದ್ರು ಜಮಾಲ್ ಅಪ್ಪಣೆ ಬೇಕಂತೆ ಜಮಾಲ್ ಗಮನಕ್ಕೆ ಬಾರದೆ ಏನು ಮಾಡುವ ಹಾಗಿಲ್ಲವಂತೆ ಶಿವಾಜಿನಗರ ಕ್ಷೇತ್ರಕ್ಕೆ ಯಾವುದೇ ಇಲಾಖೆಯ ಅಧಿಕಾರಿ ಬರಬೇಕು ಅಂದ್ರು ಜಮಾಲ್ ಹುಕ್ಕುಂ ಇರಬೇಕಂತೆ ಪೊಲೀಸ್, ಬಿಬಿಎಂಪಿ, ಹೆಲ್ತ್, ಹೀಗೆ ಸರ್ಕಾರದ ಯಾವುದೇ ನೌಕರ ವರ್ಗಾವಣೆಗೆ ಜಮಾಲ್ ಹುಕ್ಕುಂ ಇದ್ರೆ ಮಾತ್ರ ಅಂತೆ ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಕಟ್ಟಡ ನಿರ್ಮಾಣ, ಓಎಫ್ ಸಿ ಕೇಬಲ್, ಗಾರ್ಬೇಜ್, ಟೆಂಡರ್, ಪ್ರಾಪರ್ಟಿ ಲಿಟಿಗೇಷನ್ ಏನೆ ಇದ್ರು ಜಮಾಲ್ ಬಳಿಯೇ ಹೋಗಬೇಕಂತೆ ಯಾರಾದ್ರು ಇವನ ಮಾತಿಗೆ ವೀರೋದ ಮಾಡಿದ್ರೆ ನಾನು ಶಾಸಕ ರಿಜ್ವಾನ್ ಅಕ್ಕನ ಮಗ ಅಂತ ಬೆದರಿಕೆ ಹಾಕ್ತಾನಂತೆ.
ದುರಂತ ಅಂದ್ರೆ ಈ ಜಮಾಲ್ ಶಿವಾಜಿನಗರ ಕ್ಷೇತ್ರದ ಮತದಾರನು ಅಲ್ಲಾ, ನಿವಾಸಿನು ಅಲ್ಲ ಆರ್ ಟಿ ನಗರದ ನಿವಾಸಿಯಾಗಿದ್ದು ಶಾಸಕ ರಿಜ್ವಾನ್ ಅಕ್ಕನ ಮಗನೆಂದುಕೊಂಡು ದಂಧೆ ನಡೆಸ್ತಿದ್ದಾನಂತೆ ತನ್ನದೆ ಪೋಲಿ ಪಟಾಲಂ ಗ್ಯಾಂಗ್ ಕಟ್ಟಿಕೊಂಡು ಓಡಾಡ್ತಾನಂತೆ ಜಮಾಲ್‌ನ ಅಕ್ರಮ ದಂಧೆಗೆ ಬೇಸತ್ತ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಮೂಹಿಕ ರಾಜಿನಾಮಗೆ ನಿರ್ಧಾರ ಮಾಡಿದ್ದು ಡಿ ಸಿ ಎಂ ಹಾಗು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಮೂಹಿಕ ರಾಜಿನಾಮೆ ನೀಡುವುದಾಗಿ ಪತ್ರದಲ್ಲಿ ಉಲ್ಲೇಖವಾಗಿದೆ.
ಜಮಾಲ್ ಕಿರುಕುಳಕ್ಕೆ ಬೇಸತ್ತು ಗೌಪ್ಯ ಸಭೆ ನಡೆಸಿ ಪತ್ರ ಬರೆದಿರುವ ಕಾರ್ಯಕರ್ತರು ಇದೀಗ ಕಾರ್ಯಕರ್ತರು ಬರೆದ ಪತ್ರ ಎಲ್ಲಾ ಕಡೆ ವೈರಲ್ ಶಿವಾಜಿನಗರದ ಶಾಸಕರು ರಿಜ್ವಾನ್ ಹರ್ಷದ್ ಅಥಾವ ಜಮಾಲ್ ಎಂಬುವವನ ಎಂದು ಜನರು ಗೊಂದಲಕ್ಕೀಡಾಗಿದ್ದಾರೆ. ಈ ಜಮಾಲ್ ಶಾಸಕರ ಅಕ್ಕನ ಮಗನಾ..? ಅಕ್ಕನ ಮಗ ಅಗಿದ್ರೆ ಜಮಾಲ್ ಮುಂದಿಟ್ಟುಕೊಂಡು ದಂಧೆ ಮಾಡ್ತಾ ಇದ್ದಾರಾ ಶಾಸಕರು..? ಇದಕ್ಕೆಲ್ಲಾ ನೀವೆ ಉತ್ತರ ಕೊಡಬೇಕಂತೆ ಮಾನ್ಯ ಶಾಸಕರೇ..? ಏನಿದು ಜನಸಾಮನ್ಯರ ಮೇಲೆ ದೌರ್ಜನ್ಯ, ಅಂದ ದರ್ಬಾರ್ ಏನು ಹೇಳ್ತಿರಾ ಡಿ ಸಿ ಎಂ ಅವರೇ ನಿಮ್ಮ ಪಕ್ಷದ ಕಾರ್ಯಾಕರ್ತರ ನೋವಿಗೆ ಮದ್ದು ಏನು..? ಎಂದು ಕೇಳಿದ್ದ್ದಾರೆ ಜಮಾಲ್ ವಿರುದ್ದ ನಿಜಕ್ಕೂ ಕ್ರಮ ಜರುಗಿಸಿ ನಿಷ್ಠಾವಂತ ಕಾರ್ಯಕರ್ತರ ಉಳಿಸಿಕೊಳ್ತಿರೊ ಇಲ್ಲಾ ಕಾರ್ಯಾಕರ್ತರು ಹೋದ್ರೆ ಹೋಗಲಿ ದಂಧೆನೆ ಮುಖ್ಯ ಅಂತೀತಾ ..? ಎಂದು ಕಾರ್ಯಕರ್ತರು ಪತ್ರದಲ್ಲಿ ಬರೆದಿದ್ದಾರೆ.