• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಪ್ಪು ಹಣದ ಹೆಸರಲ್ಲಿ ಮೋದಿ ಜಾರಿಗೆ ತಂದು ಯೋಜನೆ ಹಳ್ಳ ಹಿಡಿದ್ಯಾಕೆ..?

ಕೃಷ್ಣ ಮಣಿ by ಕೃಷ್ಣ ಮಣಿ
October 7, 2023
in Top Story, ದೇಶ
0
ಕಪ್ಪು ಹಣದ ಹೆಸರಲ್ಲಿ ಮೋದಿ ಜಾರಿಗೆ ತಂದು ಯೋಜನೆ ಹಳ್ಳ ಹಿಡಿದ್ಯಾಕೆ..?
Share on WhatsAppShare on FacebookShare on Telegram

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಮಣಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದೇ ಕಪ್ಪು ಹಣದ ಹೆಸರಲ್ಲಿ. ವಿದೇಶದಲ್ಲಿರುವ ಕಪ್ಪು ಹಣವನ್ನು ತರಬೇಕೋ ಬೇಡ್ವೋ..? ಅನ್ನೋ ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದ ನರೇಂದ್ರ ಮೋದಿ, ಆ ಹಣವನ್ನು ತಂದ್ರೆ ಪ್ರತಿಯೊಬ್ಬರಿಗೂ ತಲಾ 15 ಲಕ್ಷದಂತೆ ಹಂಚಬಹುದು ಎಂದು ಕನಸನ್ನು ಬಿತ್ತಿದ್ರು. ತಂದರೆ ಹಂಚಬಹುದು ಎಂದಿದ್ದರು. ನಾನು ಕಪ್ಪು ಹಣವನ್ನು ವಾಪಸ್‌ ತರ್ತೇನೆ, ಎಲ್ಲರಿಗೂ ಹಂಚುತ್ತೇನೆ ಎಂದು ಹೇಳಿದ್ದಲ್ಲ ಅಂತಾ ಉಲ್ಟಾ ಹೊಡೆದಾಯ್ತು. ಆದರೆ ಸುಳ್ಳನ್ನೇ ಹೇಳಿ ಜನರನ್ನು ನಂಬಿಸಿದ್ದ ಮತ್ತೊಂದು ಅಧ್ಯಾಯಕ್ಕೆ ಇಂದು ತೆರೆ ಬಿದ್ದಿದೆ. ಅದೂ ಕೂಡ ಕೆಲವೇ ವರ್ಷದಲ್ಲಿ ಅನ್ನೋದು ವಿಶೇಷ.

ADVERTISEMENT

ಕಪ್ಪು ಹಣವನ್ನು ನಿರ್ನಾಮ ಮಾಡ್ಬೇಕು ಎಂದು ನೋಟ್‌ ಬ್ಯಾನ್..

ಭಾರತದಲ್ಲಿ ಸಾಕಷ್ಟು ಕಪ್ಪು ಹಣ ಸಂಗ್ರಹ ಆಗಿದೆ. ಹೀಗಾಗಿ 1000 ಹಾಗು 500 ಮುಖಬೆಲೆಯ ನೋಟುಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಏಕಾಏಕಿ ದೇಶದ ಎದುರು ಘೋಷಣೆ ಮಾಡಿದ್ದ ಪ್ರಧಾನಿ ಮೋದಿ, 2016ರಲ್ಲಿ 500 ಹಾಗು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರು. ಸಣ್ಣ ಪುಟ್ಟವನ್ನು ಕೆಲವೇ ಸಾವಿರ ರೂಪಾಯಿ ನೋಟುಗಳನ್ನು ಬದಲು ಮಾಡಿಕೊಳ್ಳಲು ಬಿಸಿಲಲ್ಲಿ ನಿಂತು ಸತ್ತರೆ, ಶ್ರೀಮಂತರು ಬಾಕ್ಸ್‌ ಬಾಕ್ಸ್‌ನಲ್ಲಿ ತಂದು ಬದಲಾವಣೆ ಮಾಡಿಕೊಂಡರು. ಕೋಟಿ ಕೋಟಿ ಬದಲಾಯಿಸಿದವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ, ಆಗೋದು ಇಲ್ಲ. ಆ ಬಳಿಕ 2000 ರೂಪಾಯಿ ನೋಟ್ ಪರಿಚಯ ಮಾಡಲಾಯ್ತು. ಹೊಸದಾಗಿ ಮತ್ತೆ 500 ಮುಖಬೆಲೆಯ ನೋಟನ್ನು ಬಣ ಬದಲಿಸಿ ಬಿಡುಗಡೆ ಮಾಡಲಾಯ್ತು. ಕಪ್ಪು ಹಣದ ವಿಚಾರ ಮಾತ್ರ ಸತ್ತು ಹೋಯ್ತು. ಇಂದಿನಿಂದ 2000 ರೂಪಾಯಿ ನೋಟು ಕೂಡ ಸತ್ತು ಹೋಯ್ತು.

2000 ನೋಟಿನ ಆಯಸ್ಸು ಕೆಲವೇ ಗಂಟೆಗಳು ಮಾತ್ರ..

2 ಸಾವಿರ ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದ ಬಳಿಕ ಕಪ್ಪು ಹಣ ಸಂಗ್ರಹ ಮಾಡುವ ಜನರು ಹೆಚ್ಚಾಗಿದ್ದಾರೆ ಅನ್ನೋ ಕಾರಣಕ್ಕೆ ನೋಟಿನ ಮುದ್ರಣ ನಿಲ್ಲಿಸಿದ್ದ ಆರ್‌ಬಿಐ, ನೋಟನ್ನು ಬ್ಯಾಂಕ್‌ಗೆ ಕೊಟ್ಟು ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್‌‌ 30ರ ತನಕ ಅವಕಾಶ ಕೊಟ್ಟಿತ್ತು. ಆ ಬಳಿಕ ನೋಟು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್‌ 7 ರ ತನಕ ಅಂದರೆ ಇಂದಿನ ತನಕ ಅವಕಾಶವ ವಿಸ್ತರಣೆ ಮಾಡಿತ್ತು. ಇಂದು ಸಂಜೆಯೊಳಗೆ ಬ್ಯಾಂಕ್​​ಗಳಿಗೆ 2000 ರೂಪಾಯಿ ನೋಟುಗಳನ್ನು ವಾಪಸ್‌ ಮಾಡಲು ಅವಕಾಶವಿದೆ. ಒಂದು ವೇಳೆ ಇಂದು ನೋಟು ಬದಲಾವಣೆ ಮಾಡಿಕೊಳ್ಳದಿದ್ದರೆ ನಾಳೆಯಿಂದ 2000 ರೂಪಾಯಿ ನೋಟನ್ನು ಮಕ್ಕಳ ಕೈಲಿ ಆಟವಾಡಲು ಕೊಡಬೇಕಾಗುತ್ತದೆ. ಕ್ಲೀನ್ ನೋಟ್ ನೀತಿಗಾಗಿ ಬದಲಾವಣೆ ಎಂದು RBI ಹೇಳಿಕೊಂಡಿದೆ. ಒಟ್ಟಾರೆ ಇಂದಿಗೆ 2 ಸಾವಿರ ಪಿಂಕ್‌ ನೋಟ್‌ ಕಥೆ ಕೂಡ ಮುಗೀತು.

ನಾವೇ ಶುರು ಮಾಡ್ತೇವೆ.. ನಾವೇ ಮುಗಿಸ್ತೇವೆ ಎಂದಿದ್ದ ಮೋದಿ..

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಒಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ರೀತಿಯ ಹೇಳಿಕೆಯೊಂದನ್ನು ನೀಡಿದ್ರು. ನಾವು ಯೋಜನೆಗಳನ್ನು ಶುರು ಮಾಡ್ತೇವೆ. ನಾವೇ ಯೋಜನೆ ಮುಗಿಸ್ತೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ರು. ಅವರ ಯೋಜನೆಗೆ ಪಿಂಕ್‌ ನೋಟ್‌‌ ಯೋಜನೆ ಕೂಡ ಸೇರಿಕೊಂಡಿದೆ ಎಂದು ಜನರು ಭಾವಿಸಬೇಕಿದೆ. 2 ಸಾವಿರ ನೋಟ್‌ ಮಾರುಕಟ್ಟೆಗೆ ಬಂದ ಬಳಿಕ ಶೇಕಡ 60 ರಷ್ಟು ನೋಟುಗಳೇ ಕಣ್ಮರೆ ಆದವು ಅನ್ನೋ ಮಾಹಿತಿ ಹೊರಬಿದ್ದಿದೆ. ಕಪ್ಪು ಹಣದ ವಿರುದ್ಧ ಅಬ್ಬರಿಸಿದ್ದ ಮೋದಿ, ಕಪ್ಪು ಹಣ ಸಂಗ್ರಹ ಮಾಡುವ ಜನರಿಗೆ 7 ವರ್ಷಗಳ ಕಾಲ ಸಾಥ್‌ ಕೊಟ್ಟಿದ್ದಾರಾ..? ಅನ್ನೋ ಪ್ರಶ್ನೆಗೆ ಉತ್ತರ ನೀವೇ ಕಂಡುಕೊಳ್ಳಬೇಕಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಆರ್​​ಬಿಐ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಒಟ್ಟು 3 ಲಕ್ಷದ 55 ಸಾವಿರ ಕೋಟಿ ಮೌಲ್ಯದ ನೋಟುಗಳಲ್ಲಿ 3 ಲಕ್ಷದ 43 ಸಾವಿರ ಕೋಟಿ ಮೌಲ್ಯದ 2000 ನೋಟುಗಳು ಬ್ಯಾಂಕ್​ಗಳಿಗೆ ವಾಪಸ್​ ಆಗಿವೆ. ಇನ್ನೂ ಒಂದು ದಿನ ಬಾಕಿಯಿದ್ದು, ಬಹುತೇಕ ಎಲ್ಲಾ ನೋಟುಗಳು ವಾಪಸ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ಮೆಚ್ಚಬೇಕಾದ ಸಂಗತಿ ಎಂದರೆ, ಮತ್ತೊಮ್ಮೆ ನೋಟ್ ಬ್ಯಾನ್ ಎಂದು ಟಿವಿ ಮುಂದೆ ಅಬ್ಬರಿಸಲಿಲ್ಲ. ಜನ ಸಾಯಲಿಲ್ಲ.

-ಕೃಷ್ಣಮಣಿ

Tags: 2000 noteblack moneyNarendra ModiRBI
Previous Post

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಡಾ.ರೇಣುಕಾ ಪ್ರಸಾದ್ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

Next Post

ಶ್ಯಾಮನೂರು ಮುನಿಸಿನ ಸಿಟ್ಟಿಗೆ ಮದ್ದೆಯುತ್ತಾ “ಕೈ” ಹೈಕಮಾಂಡ್..?

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post
ಶ್ಯಾಮನೂರು ಮುನಿಸಿನ ಸಿಟ್ಟಿಗೆ ಮದ್ದೆಯುತ್ತಾ “ಕೈ” ಹೈಕಮಾಂಡ್..?

ಶ್ಯಾಮನೂರು ಮುನಿಸಿನ ಸಿಟ್ಟಿಗೆ ಮದ್ದೆಯುತ್ತಾ “ಕೈ" ಹೈಕಮಾಂಡ್..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada