ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಮೊದಲ ಲಘು ಯುದ್ಧ ವಿಮಾನ (LCA) ಟ್ವಿನ್-ಸೀಟರ್ ಟ್ರೈನರ್ ಆವೃತ್ತಿಯ ವಿಮಾನವನ್ನು ಬುಧವಾರ ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಗೆ (IAF) ಹಸ್ತಾಂತರಿಸಲಿದೆ.
ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಎಲ್ ಸಿಎ ತೇಜಸ್ ವಿಭಾಗದ ಸ್ಥಾವರಕ್ಕೆ ಆಗಮಿಸಲಿದ್ದು, ಈ ಐತಿಹಾಸಿಕ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಟ್ವಿನ್ ಸೀಟರ್ ರೂಪಾಂತರಗಳಿಂದ ಫೈಟರ್ ಪೈಲಟ್‌ಗಳವರೆಗೆ ಉದಯೋನ್ಮುಖ ಪೈಲಟ್‌ಗಳಿಗೆ ತರಬೇತಿ ನೀಡುವ ಕಾರ್ಯತಂತ್ರದ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ.

ಎಲ್‌ಸಿಎ ವಿಮಾನ ತೇಜಸ್ ಭಾರತದಲ್ಲಿ ಇದುವರೆಗೆ ಕೈಗೊಂಡ ಅತಿ ದೊಡ್ಡ ಆರ್ ಅಂಡ್ ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ಕಾರ್ಯಕ್ರಮವಾಗಿದ್ದು, ಇದು 2001 ರಲ್ಲಿ ತನ್ನ ಮೊದಲ ಹಾರಾಟವನ್ನು ಮಾಡಿತು ಮತ್ತು ಅಂದಿನಿಂದ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಇದು ಮುಂಬರುವ ವರ್ಷಗಳಲ್ಲಿ ಭಾರತೀಯ ವಾಯುಪಡೆಗೆ ಬೆನ್ನೆಲುಬಾಗಲಿದೆ. ಆದ್ದರಿಂದ ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಬೆಂಗಳೂರಿನ ಎಚ್‌ಎಎಲ್ ಈಗಾಗಲೇ 123 ವಿಮಾನಗಳ ನಿರ್ಮಾಣಕ್ಕೆ ಆದೇಶವನ್ನು ಸ್ವೀಕರಿಸಿದೆ. ಅದರಲ್ಲಿ 32 ಯುದ್ಧವಿಮಾನಗಳನ್ನು ಭಾರತೀಯ ವಾಯಪಡೆಗೆ ಸರಬರಾಜು ಮಾಡಲಾಗಿದೆ. ಎರಡು ಸ್ಕ್ವಾಡ್ರನ್‌ಗಳು ಈಗಾಗಲೇ ಭಾರತೀಯ ವಾಯುಪಡೆಯೊಂದಿಗೆ (ಐಎಎಫ್) ಸುಲೂರ್ ವಾಯನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು.





