ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಗೆ(mysore dasara) ಸಕಲ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 24ರಂದು ಜಂಜುಸವಾರಿ ನಡೆಯಲಿದ್ದು. ಅರಮನೆಯಲ್ಲಿ ಇದಕ್ಕೆ ಬೇಕಾದ ತಯಾರಿಗಳು ಸಹ ನಡೆದಿವೆ. ಇದರ ಮಧ್ಯೆ ಇದೀಗ ಮಹಿಷ ದಸರಾ ( mahisha dasara) ವಿವಾದ ಮುನ್ನೆಲೆಗೆ ಬಂದಿದೆ. ಹೌದು…ಈ ಬಾರಿ ಮಹಿಷ ದಸರಾ ಆಚರಣೆ ಕೆಲವರು ಮುಂದಾಗಿದ್ದಾರೆ. ಆದ್ರೆ, ಇದಕ್ಕೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದು, ಮಹಿಷ ದಸರಾ ತಡೆಯಲು ಇದೇ ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟ ಚಲೋಗೆ ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆಯಂದೇ ಚಲೋ ಚಾಮುಮಡಿ ಬೆಟ್ಟ ಜಾಥ ಹಮ್ಮಿಕೊಳ್ಳಲಾಗಿದೆ. ಮಹಿಷ ದಸರಾ ದಿನವೇ ಚಲೋ ಚಾಮುಂಡಿ ಕಾರ್ಯಕ್ರಮ ನಡೆಯಲಿದ್ದು, ಭಕ್ತರ ಭಾವನೆಗೆ ನೋವಾಗಬಾರದು ಎನ್ನುವ ಕಾರಣಕ್ಕೆ ಈ ಜಾಥ ಮಾಡಲಿದ್ದೇವೆ. ಮಹಿಷಾಸುರ ಬಳಿ ಅನಾಚಾರ ತಡೆದು ಚಾಮುಂಡೇಶ್ವರಿಗೆ ಪೂಜೆ ಮಾಡುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಮನವಿ ಮಾಡಿದ್ದೇವೆ. ಇದು ಬಿಜೆಪಿ ಕಾರ್ಯಕ್ರಮವಲ್ಲ. ಇದು ಎಲ್ಲರೂ ಸೇರಿ ಮಾಡುತ್ತಿರುವ ಜಾಥ. ನಮ್ಮ ನಂಬಿಕೆ ಆಚರಣೆ ಉಳಿಸಿಕೊಳ್ಳಲು ಈ ಜಾಥ ನಡೆಸಲಾಗುತ್ತಿದ್ದು, ಎಲ್ಲರೂ ಭಾಗವಹಿಸಲು ಕರೆ ನೀಡಿದರು.