
ಎಲ್ಲರು ಸರ್ವಾನುಮತದಿಂದ ಮೈತ್ರಿಗೆ ಒಪ್ಪಿಗೆಕೊಟ್ಟಿದ್ದಾರೆ.ನಾಡಿನ ಜನತೆಗೆ ಮನವಿಮಾಡ್ತಿದ್ದೆನೆ , ಮೈತ್ರಿಯ ಒಡಂಬಡಿಕೆ ಮಾಡ್ತಿರೋದು ಯಾವುದೋ ಅಧಿಕಾರದ ಆಸೆಗೆ ಅಲ್ಲ.ಇದರ ಬಗ್ಗೆ ದಿನಾ ಮಾತನಾಡೋದು ಬೇಡಾ ಅಂತ ನಿರ್ಧಾರ ಮಾಡಿದ್ದೀನಿ. ಹಲವಾರು ಸಮಸ್ಯೆಗಳನ್ನ ನಮ್ಮ ನಾಡಿನ ಜನ ಎದುರಿಸುತ್ತಿದ್ದಾರೆ. ಸರ್ಕಾರಒಂದು ಕಡೆ ಹೇಳ್ತಾ ಇದೆ, 40ಲಕ್ಷ ಹೆಕ್ಟೇರ್ ಭೂಮಿ ಬೆಳೆ ನಾಶವಾಗಿದೆ ಅಂತಾ , ಇಷ್ಟು ದಿನ ಆದ್ರು ಇನ್ನು ಸಹ ಇವರು ಪತ್ರ ಬರೀತಾ ಇದ್ದೀವಿ ಅಂತಾರೆ. ಯಾವುದೊ ತಂಡ ಬರುತ್ತೆ ಅಂತೆ ಇನ್ನು ಬರಲಿಲ್ಲ, ಇಷ್ಟು ದಿನ ಬೇಕಾ ಇದಕ್ಕೆ..? ಇವತ್ತು ಕಾವೇರಿ ವಿಚಾರ ಇಟ್ಕೊಂಡು ಈ ವಿಚಾರವನ್ನ ಸರ್ಕಾರ ತಿರುಚುತ್ತಿದೆ.. ಮಳೆಯ ಕೊರತೆಯಿಂದ ಬೆಳೆ ನಾಶವಾಗಿದೆ ಅಂತಾರೆ…ಮೇಕೆದಾಟು ತಂಗೊಂಡು ಬರ್ತಿವೀ ಇದಕ್ಕೆ ಅಂತಾರೆ ಅಲ್ವಾ..?

ನಿಮಗೇನಾದರು ಕನಿಷ್ಟ ಸೌಜನ್ಯ ಇದ್ರೆ ಕೆಂಪೇಗೌಡನ ಕಾಲದಲ್ಲಿ ಕಟ್ಟಿದ ಕೆರೆಗಳಿಗೆ ಕೊಳಚೆ ನೀರು ಹರಿಸೋ ಕೆಲಸ ಮೊದಲು ನಿಲ್ಲಿಸಿ..ಒಂದು ಸಾವಿರ ಕೋಟಿ ಆ ಕೆರೆಗಳ ಮೇಲೆ ಇನ್ವೆಸ್ಟ್ ಮಾಡಿ , ಅವುಗಳನ್ನ ಪರಿಶುದ್ದಗೊಳಿಸಿ.ಆ ಕೆರಗಳನ್ನ ಇವತ್ತು ಉಳಿಸಿದ್ರೆ ನಿಮಗೆ ಸಿದ್ರಾಮಯ್ಯ, ಡಿಕೆಶಿವಕುಮಾರ್ ಇಬ್ಬರಿಗೂ ಈ ಸ್ಥಿತಿ ಬರ್ತಿರಲಿಲ್ಲಾ..ಹೆಣ್ಣುಮಕ್ಕಳು ಪಾಪ ಕಣ್ಣೀರು ಹಾಕ್ತಾರೆ , ನೀವು 2000 ಕೊಟ್ಟು ಏನು ಪ್ರಯೋಜನ..?ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಿತ್ತುಕೊಳ್ತಾ ಇದ್ದೀರಾ..

ಇವತ್ತು ಸುಮ್ನೇ ಮೇಕೆದಾಟು ಅಂತೀರಾ ..ನಮ್ಮ ರಾಜ್ಯದಲ್ಲಿ 33% ಅರಣ್ಯ ಪ್ರದೇಶ 22% ಗೆ ಇಳಿದಿದೆ .ಇದೇ ಇವತ್ತು ಮಳೆಗೆ ಕೊರತೆ ಕಾರಣ..ನಿಮ್ಮ ಈ ಚರ್ಚೆಗಳನ್ನ ತಿಳಿದವರ ಹತ್ರ ಮಾಡಿ..ಎತ್ತಿನಹೊಳೆಗೆ ಇವಾಗ 25000 ಕೋಟಿ ಬೇಕು ಅಂತ ಮಾತನಾಡ್ತಾ ಇದ್ದೀರಾ..?ಸುಮ್ನೆ ಯೋಜನೆಗಳ ಹೆಸರಿನಲ್ಲಿಹಣ ಲೂಟಿ ಮಾಡ್ತಿದೆ ಸರ್ಕಾರ. ಮೊದಲು ನಿಮ್ಮ ಕಾರ್ಯಕ್ರಮಗಳನ್ನ ನಿಲ್ಲಿಸಿ, ಜನರ ಕಷ್ಟಗಳನ್ನ ನೋಡಿ.ನಾಡಿನ ಜನತೆಯನ್ನ ರಕ್ಷಣೆ ಮಾಡೋದು ನನ್ನ ಆದ್ಯತೆ. ನಾಡಿನ ನೀರಿನ ಸಮಸ್ಯೆಗಳಿಗೆ ಪುಲ್ ಸ್ಟಾಪ್ ಇಡೋದೆ ನನ್ನ ಮೈತ್ರಿಯ ಉದ್ದೇಶ..

ಆಪರೇಶನ್ ಹಸ್ತ ವಿಚಾರ
ಏನಾದ್ರೂ ಮಾಡಿಕೊಳ್ಳಲಿ, ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಲೋದಿಲ್ಲ, ನಮ್ಮ ಪಕ್ಷದ ಯಾವುದೇ ನಾಯಕರು, ಶಾಸಕರು ಎಲ್ಲೂ ಹೋಗಲ್ಲ. ನಮ್ಮ ಧ್ಯೇಯ ಏನಿದ್ರೂ ಸಹ ಇವಾಗ ಲೋಕಸಭಾ ಚುನಾವಣೆ ಗೆಲ್ಲೋದು ಅಷ್ಟೇ ಎಂದು ಕುಮಾರಸ್ವಾಮಿ ಉತ್ತರಿಸಿದರು.


