ಬ್ಯಾರಿ ಸಮುದಾಯ ಸ್ನೇಹ, ಭಾಂದವ್ಯ ಕೊಟ್ಟುಕೊಂಡು ಬಂದಿದೆ ಎಂದು ಬ್ಯಾರಿ ಸಮುದಾಯ ಭವನ ಉದ್ಘಾಟನೆಯಲ್ಲಿ ಡಿಕೆಶಿ ಮಾತನಾಡಿದ್ದಾರೆ. ಮಂಗಳೂರು ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು.ಯುಟಿ ಖಾದರ್ ಅವರೆ ಮಂತ್ರಿ ಸ್ಥಾನ ಸಿಕ್ಲಿಲ್ಲ ಅಂತಾ ಚಿಂತೆ ಮಾಡೋದು ಬೇಡ.ಅದಕ್ಕಿಂತಲೂ ಹೆಚ್ಚಿನ ಸ್ಥಾನ ಸಿಕ್ಕಿದೆ.ಎಸ್.ಎಂ ಕೃಷ್ಣ, ಕೂಡ ಸ್ಪೀಕರ್ ಆಗಿದ್ದವರೆ.ಮುಂದೆ ನಿಮ್ಮ ಸ್ಥಾನ ಇನ್ನೂ ಎಲ್ಲಿಗೆ ಹೋಗುತ್ತೋ.ಅಧಿಕಾರದ ಪೆನ್ ಇರೋದು ಸ್ನೇಹ ಮತ್ತು ಶತೃ ಎರಡಕ್ಕೂ ಆಗಿದೆ.ನನ್ನ ಕೈಯಲ್ಲಿ ಆದಷ್ಟು ನೆರವು ನೀಡ್ತಿನಿ.ಇನ್ನೂ ನಾಲ್ಕು ಕಟ್ಟಡ ಬೆಂಗಳೂರಲ್ಲೂ ಕಟ್ಟಿ ಮಂಗಳೂರಲ್ಲೂ ಕಟ್ಟಿ, ಅದಕ್ಕೆ ನನ್ನ ಸಹಕಾರ ಇದೆ ಎಂದರು.
ಯು.ಟಿ ಖಾದರ್ ಮುಖ್ಯಮಂತ್ರಿಗಳಾಗ್ತಾರೆ ಎಂದ ಡಿಕೆಶಿ..!
ನಾನು ಬಿಜೆಪಿಯ ಸ್ನೇಹಿತರಿಗೆ ಹೇಳ್ತಿದ್ದೆ,ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ದಲ್ಲಿ ಯಾರಾದ್ರು ಬಂಡವಾಳ ಹೂಡಿಕೆ ಮಾಡಿದ್ರಾ…?.ನೀವೆಲ್ಲ, ದುಬೈಗೆ ಹೋಗ್ತಿದೀರಿ.ಜಾತಿ ವಿಷಬೀಜ ಬಿತ್ತಿ ಸಾಮರಸ್ಯ ಹಾಳುಮಾಡಿದ್ದಾರೆ,ಖಾದರ್ ಅವರೇ ನಿವೇನು ಮಂತ್ರಿ ಆಗ್ಲಿಲ್ಲ ಎಂದು ಚಿಂತೆ ಮಾಡೊದು ಬೇಡ,ಎಸ್ ಎಂ ಕೃಷ್ಣ ಅವರು ಸ್ಪೀಕರ್ ಆಗಿದ್ರು, ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಿದ್ರು. ಆಮೇಲೆ ಏನಾದ್ರು? ಯು.ಟಿ.ಖಾದರ್ ಅವರ ಹಣೆ ಬರಹ ಹೇಗೆದ್ಯೊ ಏನೊ?ಪರೋಕ್ಷವಾಗಿ ಮುಂದೆ ಸಿಎಂ ಆಗುವ ಅವಕಾಶ ಸಿಗಬಹುದು ಎಂದ ಡಿಕೆಶಿ,ಮುಂದೆ ಚುನಾವಣೆ ಬರ್ತಿದೆ, ನೀವೆಲ್ಲ ಬೆಂಗಳೂರಿನಲ್ಲಿದ್ರೆ ಪ್ರಯೋಜನ ಇಲ್ಲ,ಮಂಗಳೂರಿಗೆ ಹೋಗಿ, ಉಡುಪಿಗೆ ಹೋಗಿ ಕೆಲಸ ಮಾಡಿ,ಇಡೀ ದೇಶಕ್ಕೆ ಒಂದು ಸಂದೇಶ ಕಳುಹಿಸಿ,ಮಂಗಳೂರಿನಲ್ಲಿ, ಉಡುಪಿಯಲ್ಲಿ ನಮ್ಮವರನ್ನ ಗೆಲ್ಲಿಸಿ ಎಂದು ಮನವಿಬ್ಯಾರಿ ಸಮುದಾಯಕ್ಕೆ ಡಿಕೆಶಿ ಮನವಿ ಮಾಡಿದ್ದಾರೆ.