ರಾಜ್ಯದಲ್ಲಿ ಜಲಕ್ಷಾಮ ತಲೆದೋರಿರುವ ಬೆನ್ನಲ್ಲೇ, ತಮಿಳುನಾಡಿಗೆ 18 ದಿನಗಳ ಕಾಲ 3,000 ಕ್ಯೂಸೆಕ್ಸ್ ನೀರು ಬಿಡುವಂತೆ ಪುನಃ ಕಾವೇರಿ ಪ್ರಾಧಿಕಾರ ಆದೇಶಿಸಿರುವುದು ಕರ್ನಾಟಕದ ಜನತೆಗೆ ಬರಸಿಡಿಲು ಬಡಿದಿದೆ. ಈ ಹಿನ್ನೆಲೆ ಕನ್ನಡ ಪರ ಸಂಘಟನೆಗಳ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರಿನ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರಕ್ಕೇ ಛೀಮಾರಿ ಹಾಕಿದ್ದಾರೆ. ಇಷ್ಟಕ್ಕೂ ಅವರು ಏನು ಮಾತನಾಡಿದ್ದಾರೆ ಅಂತ ಇಲ್ಲಿದೆ ನೋಡಿ..!
ವಾಟಾಳ್ ನಾಗರಾಜ್ ಮಾತು..!
ಇದು ಬರಸಿಡಿಲು ಬಡಿದಂತಾಗಿದೆ,ಈ ಬಗ್ಗೆ ಪುನರ್ ಪರಿಶೀಲಿಸುವುದು ಒಳ್ಳೆಯದು,ಇವತ್ತಿಂದ ನೀರು ಬಿಡೋದನ್ನ ನಿಲ್ಲಿಸಬೇಕು,ನೀರು ಬಿಟ್ಟರೇ ಕರ್ನಾಟಕಕ್ಕೆ ನೀರು ಇರೋದಿಲ್ಲ,ಪಾರ್ಲಿಮೆಂಟ್ ಸದಸ್ಯರು ಕೂಡಲೇ ರಾಜೀನಾಮೆ ಕೊಡಬೇಕು,ರಾಜೀನಾಮೆ ಕೊಟ್ಟರೇ ಪ್ರಧಾನಿಯವರಿಗೆ ನೇರವಾಗಿ ಅರ್ಥವಾಗುತ್ತೆ,ಪುನರ್ ಪರಿಶೀಲನೆ ಅರ್ಜಿಯನ್ನ ಪರೀಶೀಲಿಸಬೇಕು, ಸರ್ವಾನುಮತದ ನಿರ್ಧಾರ ಆದ್ರೆ ಅದನ್ನ ನಿರ್ಣಯ ಮಾಡಲಿ, ಸರ್ಕಾರ ಭದ್ರವಾಗಿ ನಿಂತು ಯಾವ ಕಾರಣಕ್ಕೂ ನೀರು ಬಿಡಬಾರದು, ಆ ನಿರ್ಣಯಕ್ಕೆ ಬೆಲೆ ಕೊಡಲ್ಲ ಅಂತಾ ಕಪ್ಪು ಬಾವುಟ ಪ್ರದರ್ಶನ ಮಾಡ್ತಿದ್ದೇವೆ, 3 ಸಾವಿರ ಕ್ಯೂಸೆಕ್ ನೀರು ಬಿಡೋ ಆದೇಶಕ್ಕೆ ವಿರೋಧ,ಕಪ್ಪುಬಾವುಟ ಪ್ರದರ್ಶಿಸಿ ವಾಟಾಳ್ ಪ್ರತಿಭಟನೆ,ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ,ಸಾ.ರಾ.ಗೋವಿಂದು ಸೇರಿ ಹಲವರ ಸಾಥ್ ನೀಡಿದ್ರು ಇನ್ನು ಬಸ್ ಗಳ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ, ಕಾವೇರಿ ಉಳಿಸಿ ಅಂತಾ ಘೋಷಣೆ ಕೂಗಿದ್ದಾರೆ, ಇನ್ನು ಪ್ರಧಾನಿ ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.