ಬೆಂಗಳೂರು: ರಾಜ್ಯದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸೆ.24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಹೈದರಾಬಾದ್‌ನ ಕಾಚೇಗುಡ-ಯಶವಂತಪುರ ನಿಲ್ದಾಣದ ನಡುವೆ ರೈಲು ಸಂಚರಿಸಲಿದೆ.
ಈ ನಿಮಿತ್ತ ರೈಲಿನ ಮೊದಲ ಪ್ರಾಯೋಗಿಕ ಸಂಚಾರ ಗುರುವಾರ ನಡೆಯಲಿದೆ. ಇದು ದಕ್ಷಿಣ ಭಾರತದ ಎರಡು ಐಟಿ ನಗರಗಳ ನಡುವಿನ ಮೊದಲ ವಂದೇ ಭಾರತ್ ಎನ್ನಿಸಿಕೊಂಡಿದೆ. ಪ್ರಯೋಗಾರ್ಥವಾಗಿ ಈ ರೈಲು ಗುರುವಾರ ಬೆಳಗ್ಗೆ ಕಾಚೇಗುಡದಿಂದ ಹೊರಟು ಮಧ್ಯಾಹ್ನ 2ಗಂಟೆಗೆ ಯಶವಂತಪುರ ನಿಲ್ದಾಣ ತಲುಪುವ ನಿರೀಕ್ಷೆಯಿದೆ. ಪುನಃ ಇಲ್ಲಿಂದ 2.45ಕ್ಕೆ ಇಲ್ಲಿಂದ ಕಾಚೇಗುಡಕ್ಕೆ ತೆರಳಲಿದೆ ಎಂದು ಬೆಂಗಳೂರು ನೈಋತ್ಯ ರೈಲ್ವೇ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.