
ಬಹುನಿರೀಕ್ಷಿತ ಏಷ್ಯಾಕಪ್ (Asia cup) 2023ಗೆ ತೆರೆಬಿದ್ದಿದ್ದು, 2023ರ ಏಷ್ಯಾ ಕಪ್ (Asia Cup 2023) ಪ್ರಶಸ್ತಿಯನ್ನು ಭಾರತ (inidia)ತಂಡ ಮುಡಿಗೇರಿಸಿಕೊಂಡಿದೆ. ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ (IND vs SL Final) ನಡುವಿನ ಫೈನಲ್ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆಧರೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಲಂಕಾ ಪಡೆ ಈ ಎಲ್ಲಾ ನಿರೀಕ್ಷೆಗಳನ್ನೂ ಬುಡಮೇಲು ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು ಭಾರತೀಯ ಬೌಲರ್‌ಗಳ ದಾಳಿಗೆ ಅಲ್ಪಮೊತ್ತಕ್ಕೆ ಸರ್ವಪತನಗೊಂಡಿತು. ಶ್ರೀಲಂಕಾ ತಂಡವು 15.2 ಓವರ್‌ಗೆ 50 ರನ್‌ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 51 ರನ್‌ಗಳ ಕಡಿಮೆ ಮೊತ್ತದ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ ಕೇವಲ 6.1 ಓವರ್‌ಗೆ 51 ರನ್ ಗಳಿಸುವ ಮೂಲ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ 8ನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು, ಶ್ರೀಲಂಕಾ ನೀಡಿದ ಟಾರ್ಗೆಟ್‌ನ್ನು ಭಾರತ ತಂಡದ ಆರಂಭಿಕರು ಕೇವಲ 6.1 ಓವರ್‌ಗೆ ತಲಪುವ ಮೂಲಕ ದಾಖಲೆಯ ಗೆಲುವನ್ನು ಸಾಧಿಸಿದರು. ಭಾರತದ ಪರ ಇಶಾನ್ ಕಿಶನ್ 18 ಎಸೆತದಲ್ಲಿ 3 ಬೌಂಡರಿ ಸಹಿತ 23 ರನ್ ಮತ್ತು ಶುಭ್‌ಮನ್ ಗಿಲ್ 19 ಎಸೆತದಲ್ಲಿ 6 ಬೌಂಡರಿ ಮೂಲಕ 27 ರನ್ ಸಿಡಿಸಿದರು.
ಈ ಸುದ್ದಿಯನ್ನು ಸಹ ಓದಿ: ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ: ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ
ಏಕದಿನ ಕ್ರಿಕೆಟ್‌ನಲ್ಲಿ ಸಿರಾಜ್ ಶ್ರೇಷ್ಠ ಸಾಧನೆ:ಇನ್ನಿಂಗ್ಸ್‌ನ ಎರಡನೇ ಓವರ್ ಎಸೆಯಲು ಬಂದ ಮೊಹಮ್ಮದ್ ಸಿರಾಜ್ ಲಂಕಾದ ಬ್ಯಾಟರ್‌ಗಳನ್ನು ಅಕ್ಷರಶಃ ಕಾಡಿದರು. ಸಿರಾಜ್ ಅವರ ಬೆಂಕಿಯಂತಹ ಎಸೆತಗಳನ್ನು ಮುಟ್ಟಲು ಹಿಂದೇಟು ಹಾಕಿದರು. ಧೈರ್ಯ ಮಾಡಿ ಸಿರಾಜ್ ಎಸೆತಗಳನ್ನು ಮುಟ್ಟಿದರೆ ಸಾಕು ವಿಕೆಟ್ ಖಚಿತ ಆ ಮಟ್ಟಿಗೆ ಮಾರಕ ಬೌಲಿಂಗ್ ನಡೆಸಿದರು. ಪಾತುಮ್ ನಿಸ್ಸಾಂಕ (2), ಕುಸಾಲ್ ಮೆಂಡಿಸ್ (17), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0), ಧನಂಜಯ ಡಿ ಸಿಲ್ವ (4), ನಾಯಕ ಶನಕ (0) ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಸಿರಾಜ್ 7 ಓವರ್‌ಗಳಲ್ಲಿ 1 ಮೆಡಿನ್ ಸೇರಿ 21 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು.