• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿರಾಜ್‌ ಮಾರಕ ದಾಳಿಗೆ ಶ್ರೀಲಂಕಾ ಧೂಳೀಪಟ: ಭಾರತದ ಮುಡಿಗೆ ಏಷ್ಯಾಕಪ್​..!

Any Mind by Any Mind
September 17, 2023
in Top Story, ಇದೀಗ, ಕ್ರೀಡೆ
0
ಸಿರಾಜ್‌ ಮಾರಕ ದಾಳಿಗೆ ಶ್ರೀಲಂಕಾ ಧೂಳೀಪಟ: ಭಾರತದ ಮುಡಿಗೆ ಏಷ್ಯಾಕಪ್​..!

ವಿಕೆಟ್‌ ಪಡೆದ ಸಂಭ್ರಮದಲ್ಲಿ ಮೊಹಮ್ಮದ್‌ ಸಿರಾಜ್‌

Share on WhatsAppShare on FacebookShare on Telegram

ADVERTISEMENT

ಬಹುನಿರೀಕ್ಷಿತ ಏಷ್ಯಾಕಪ್‌ (Asia cup) 2023ಗೆ ತೆರೆಬಿದ್ದಿದ್ದು, 2023ರ ಏಷ್ಯಾ ಕಪ್‌ (Asia Cup 2023) ಪ್ರಶಸ್ತಿಯನ್ನು ಭಾರತ (inidia)ತಂಡ ಮುಡಿಗೇರಿಸಿಕೊಂಡಿದೆ. ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ (IND vs SL Final) ನಡುವಿನ ಫೈನಲ್‌ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆಧರೆ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಲಂಕಾ ಪಡೆ ಈ ಎಲ್ಲಾ ನಿರೀಕ್ಷೆಗಳನ್ನೂ ಬುಡಮೇಲು ಮಾಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಲಂಕಾ ತಂಡವು ಭಾರತೀಯ ಬೌಲರ್‌ಗಳ ದಾಳಿಗೆ ಅಲ್ಪಮೊತ್ತಕ್ಕೆ ಸರ್ವಪತನಗೊಂಡಿತು. ಶ್ರೀಲಂಕಾ ತಂಡವು 15.2 ಓವರ್‌ಗೆ 50 ರನ್‌ಗೆ ಆಲೌಟ್‌‌ ಆಗುವ ಮೂಲಕ ಭಾರತಕ್ಕೆ 51 ರನ್‌ಗಳ ಕಡಿಮೆ ಮೊತ್ತದ ಟಾರ್ಗೆಟ್‌‌ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ ಕೇವಲ 6.1 ಓವರ್‌ಗೆ 51 ರನ್‌ ಗಳಿಸುವ ಮೂಲ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ 8ನೇ ಬಾರಿಗೆ ಏಷ್ಯಾ ಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು, ಶ್ರೀಲಂಕಾ ನೀಡಿದ ಟಾರ್ಗೆಟ್‌‌ನ್ನು ಭಾರತ ತಂಡದ ಆರಂಭಿಕರು ಕೇವಲ 6.1 ಓವರ್‌ಗೆ ತಲಪುವ ಮೂಲಕ ದಾಖಲೆಯ ಗೆಲುವನ್ನು ಸಾಧಿಸಿದರು. ಭಾರತದ ಪರ ಇಶಾನ್‌ ಕಿಶನ್‌ 18 ಎಸೆತದಲ್ಲಿ 3 ಬೌಂಡರಿ ಸಹಿತ 23 ರನ್ ಮತ್ತು ಶುಭ್‌ಮನ್ ಗಿಲ್‌ 19 ಎಸೆತದಲ್ಲಿ 6 ಬೌಂಡರಿ ಮೂಲಕ 27 ರನ್ ಸಿಡಿಸಿದರು.

ಈ ಸುದ್ದಿಯನ್ನು ಸಹ ಓದಿ: ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ: ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ

ಏಕದಿನ ಕ್ರಿಕೆಟ್‌ನಲ್ಲಿ ಸಿರಾಜ್‌ ಶ್ರೇಷ್ಠ ಸಾಧನೆ:ಇನ್ನಿಂಗ್ಸ್‌ನ ಎರಡನೇ ಓವರ್‌ ಎಸೆಯಲು ಬಂದ ಮೊಹಮ್ಮದ್ ಸಿರಾಜ್ ಲಂಕಾದ ಬ್ಯಾಟರ್‌ಗಳನ್ನು ಅಕ್ಷರಶಃ ಕಾಡಿದರು. ಸಿರಾಜ್ ಅವರ ಬೆಂಕಿಯಂತಹ ಎಸೆತಗಳನ್ನು ಮುಟ್ಟಲು ಹಿಂದೇಟು ಹಾಕಿದರು. ಧೈರ್ಯ ಮಾಡಿ ಸಿರಾಜ್ ಎಸೆತಗಳನ್ನು ಮುಟ್ಟಿದರೆ ಸಾಕು ವಿಕೆಟ್ ಖಚಿತ ಆ ಮಟ್ಟಿಗೆ ಮಾರಕ ಬೌಲಿಂಗ್ ನಡೆಸಿದರು. ಪಾತುಮ್ ನಿಸ್ಸಾಂಕ (2), ಕುಸಾಲ್ ಮೆಂಡಿಸ್ (17), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0), ಧನಂಜಯ ಡಿ ಸಿಲ್ವ (4), ನಾಯಕ ಶನಕ (0) ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಸಿರಾಜ್ 7 ಓವರ್‌ಗಳಲ್ಲಿ 1 ಮೆಡಿನ್ ಸೇರಿ 21 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು.

Tags: asia cupCricketCricket NewsIndia
Previous Post

ಕಾವೇರಿ ನೀರಿನ ವಿಚಾರ ಯಡಿಯೂರಪ್ಪನವರದ್ದು ರಾಜಕೀಯ ಹೇಳಿಕೆ ; ಸಿಎಂ ಸಿದ್ದರಾಮಯ್ಯ

Next Post

ಕನ್ನಡದಲ್ಲೂ ಬಿಡುಗಡೆಯಾಗಲಿದೆ ಸಿದ್ಧಾರ್ಥ್ ಅಭಿನಯದ ‘ಚಿಕ್ಕು ’

Related Posts

ಧರ್ಮಶಾಲಾದಲ್ಲಿ ಆರ್‌ಸಿಬಿ ರಣಭೇರಿ; ಪಾಟೀದಾರ್ ಅಬ್ಬರಕ್ಕೆ ಗುಜರಾತ್ ಸಂಪೂರ್ಣ ಕುಸಿತ!
ಕ್ರೀಡೆ

ಧರ್ಮಶಾಲಾದಲ್ಲಿ ಆರ್‌ಸಿಬಿ ರಣಭೇರಿ; ಪಾಟೀದಾರ್ ಅಬ್ಬರಕ್ಕೆ ಗುಜರಾತ್ ಸಂಪೂರ್ಣ ಕುಸಿತ!

by ಪ್ರತಿಧ್ವನಿ
May 27, 2026
0

ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿ ಬಿ( Royal Challengers Bengaluru) ಬ್ಯಾಟರ್‌ಗಳು ಧರ್ಮಶಾಲಾ ಮೈದಾನದಲ್ಲಿ ರನ್ ಮಳೆ ಸುರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬೌಂಡರಿ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
Next Post
ಕನ್ನಡದಲ್ಲೂ ಬಿಡುಗಡೆಯಾಗಲಿದೆ ಸಿದ್ಧಾರ್ಥ್ ಅಭಿನಯದ ‘ಚಿಕ್ಕು ’

ಕನ್ನಡದಲ್ಲೂ ಬಿಡುಗಡೆಯಾಗಲಿದೆ ಸಿದ್ಧಾರ್ಥ್ ಅಭಿನಯದ ‘ಚಿಕ್ಕು ’

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada