• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಇಂಡಿಯಾವನ್ನೇ ಛಿದ್ರ ಮಾಡಲು ಮುಂದಾಗಿದ್ದಾರಾ ಪ್ರಧಾನಿ ನರೇಂದ್ರ ಮೋದಿ..?

ಕೃಷ್ಣ ಮಣಿ by ಕೃಷ್ಣ ಮಣಿ
September 11, 2023
in ಅಂಕಣ
0
ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

Share on WhatsAppShare on FacebookShare on Telegram

ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯ ಆಹ್ವಾನ ಪತ್ರದಲ್ಲಿ ರಿಪಬ್ಲಿಕ್​ ಆಫ್​ ಇಂಡಿಯಾ ಬದಲು ಭಾರತ್​ ರಿಪಬ್ಲಿಕ್​ ಎಂದು ಬಳಸುವ ಮೂಲಕ ಇಂಡಿಯಾ ಶಬ್ಧವನ್ನು ಕೈಬಿಡಲಾಗುತ್ತದೆ. ಭಾರತ್​ ಮಾತ್ರ ಉಳಿಸಿಕೊಳ್ಳಲಾಗುತ್ತದೆ ಎನ್ನುವ ಚರ್ಚೆ ಶುರುವಾಗಿತ್ತು. ಭಾರತ ಹಾಗು ಇಂಡಿಯಾ ಎರಡೂ ಸಮಾನ ಗೌರವ ಹೊಂದಿರುವ ಹೆಸರುಗಳು, ಇದರಲ್ಲಿ ರಾಜಕೀಯ ಬೇಡ. ಕಾಂಗ್ರೆಸ್​ ನೇತೃತ್ವದಲ್ಲಿ ವಿರೋಧ ಪಕ್ಷಗಳು ಒಕ್ಕೂಟ ರಚನೆ ಮಾಡಿಕೊಂಡು I.N.D.I.A ಎಂದು ನಾಮಕರಣ ಮಾಡಿರುವ ಕಾರಣದಿಂದಲೇ ಭಾರತ್​ ಎನ್ನುವ ಹೆಸರಿಗೆ ಮೇಲ್ಪಂಕ್ತಿ ಹಾಕುತ್ತಾ ಇಂಡಿಯಾ ಎನ್ನುವ ಹೆಸರನ್ನು ಕೈಬಿಡುವ ಕೆಲಸ ಮಾಡಲಾಗ್ತಿದೆ. ಕಾಂಗ್ರೆಸ್​ ನೇತೃತ್ವದ ಇಂಡಿಯಾ ಒಕ್ಕೂಟದ ಒಗ್ಗಟ್ಟಿನಿಂದ ಭಾರತೀಯ ಜನತಾ ಪಾರ್ಟಿ ಕಂಗಾಲಾಗಿರುವುದು ಕಾಣಿಸುತ್ತಿದೆ ಎಂದು ಕಾಂಗ್ರೆಸ್​ ಟೀಕಿಸಿತ್ತು.

ADVERTISEMENT

ದೇಶವನ್ನು ವಿಭಜನೆ ಮಾಡಲು ಬಿಜೆಪಿ ತಂತ್ರಗಾರಿಕೆ..!

ಭಾರತ – ಇಂಡಿಯಾ ಎನ್ನುವ ಹೆಸರಲ್ಲಿ ಬೇಧ ಭಾವ ಹುಡುಕುತ್ತಿರುವ ಬಿಜೆಪಿ ದೇಶವನ್ನು ವಿಭಜನೆ ಮಾಡಲು ಮೂಮದಾಗಿದೆ. ಮುಂದೊಂದು ದಿನ ಭಾರತವನ್ನು ವಿಭಜನೆಯ ಸಂಚು ಮಾಡಲಾಗಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿತ್ತು. ಆದರೆ ದೇಶವನ್ನು ವಿಭಜನೆ ಮಾಡುವ ಉದ್ದೇಶ ಭಾರತೀಯ ಜನತಾ ಪಾರ್ಟಿಗೆ ಇದೆಯೋ ಇಲ್ಲವೋ ಆದರೆ ಇಂಡಿಯಾವನ್ನು ವಿಭಜನೆ ಮಾಡುವ ತಂತ್ರಗಾರಿಕೆಯನ್ನು ಬಿಜೆಪಿ ಮಾಡಿದೆ ಎನ್ನುವುದು ಸ್ಪಷ್ಟವಾಗಿದೆ. ಜಿ-20 ಶೃಂಗಸಭೆಯಲ್ಲಿ ಭಾಗಿಯಾಗುತ್ತಲೇ ಬಿಜೆಪಿ ರಾಜಕೀಯ ಮಾಡಿದೆ ಎನ್ನುವುದು ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ಬಯಲಾಗಿದೆ. ರಾಷ್ಟ್ರ ಚಿಂತನೆ ಜೊತೆಗೆ ಪಕ್ಷದ ಬಗ್ಗೆಯೂ ಲೆಕ್ಕಾಚಾರ ಮಾಡಿದ್ದಾರೆ ಎನಿಸುತ್ತಿದೆ.

ಪ್ರತಿಪಕ್ಷದ ನಾಯಕನಿಗೆ ಆಹ್ವಾನ ಕೊಡದೆ ತಂತ್ರಗಾರಿಕೆ..!

ಜಿ-20 ಶೃಂಗಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನಿಗೆ ಆಹ್ವಾನ ಕೊಡಬೇಕಿತ್ತು. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಿಲ್ಲ. ಆದರೆ ರಾಜ್ಯಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಿದ್ದಾರೆ. ಎಐಸಿಸಿ ಅಧ್ಯಕ್ಷರೂ ಆಗಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಂದ್ರ ಸರ್ಕಾರ ಆಹ್ವಾನಿಸಬೇಕಿತ್ತು. ಜಿ-20 ಶೃಂಗಸಭೆಯ ಕೆಲವೊಂದು ಕಾರ್ಯಕ್ರಮಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಳ್ಳಬೇಕಿತ್ತು. ಕೇಂದ್ರ ಸರ್ಕಾರ ಖರ್ಗೆ ಅವರನ್ನು ಆಹ್ವಾನವನ್ನೇ ಮಾಡಿರಲಿಲ್ಲ. ಇದನ್ನು ಕಾಂಗ್ರೆಸ್​ ಕಟುವಾಗಿ ಟೀಕಿಸಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಆಹ್ವಾನ ಮಾಡಿರಲಿಲ್ಲ. ಹಾಗಾಗಿ ಕಾಂಗ್ರೆಸ್​ ಅಧ್ಯಕ್ಷರನ್ನು ಆಹ್ವಾನ ಮಾಡಿಲ್ಲ ಎಂದು ಕೇಂದ್ರ ತೇಪೆ ಹಾಕುವ ಪ್ರಯತ್ನ ಮಾಡಿದೆ.

ಆಹ್ವಾನದಲ್ಲಿ ಚಾಣಕ್ಷ್ಯತನ ಮೆರೆದ ಭಾರತೀಯ ಜನತಾ ಪಾರ್ಟಿ..!

ಇಂಡಿಯಾ ಒಕ್ಕೂಟದಲ್ಲಿ ಮುಂದಾಳು ಆಗಿರುವ ಕಾಂಗ್ರೆಸ್​ ನಾಯಕರನ್ನು ಆಹ್ವಾನ ಮಾಡದ ಕೇಂದ್ರ ಬಿಜೆಪಿ, ಆಹ್ವಾನ ವಿಚಾರದಲ್ಲಿ ರಾಜಕೀಯ ಚಾಣಕ್ಷ್ಯತನ ಮೆರೆದಿದೆ. ಇಂಡಿಯಾ ಮೈತ್ರಿಕೂಟ ಭಾಗ ಆಗಿರುವ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಂದ್ರ ಸರ್ಕಾರ ಆಹ್ವಾನ ಮಾಡಿತ್ತು. ಬಿಹಾರ ಸಿಎಂ ನಿತೀಶ್​ ಕುಮಾರ್​, ಜಾರ್ಖಂಡ್​ ಸಿಎಂ ಹೇಮಂತ್​ ಸುರೇನ್​, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​​ ಅವರನ್ನು ರಾಷ್ಟ್ರಪತಿ ಅವರು ಆಯೋಜನೆ ಮಾಡಿದ್ದ ಔತಣಕೂಟಕ್ಕೆ ಆಹ್ವಾನ ಮಾಡಿತ್ತು. ನಿತೀಶ್​ ಕುಮಾರ್​ ಹಾಗು ಹೇಮಂತ್​ ಸುರೇನ್​ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಪರಿಚಯ ಮಾಡಿಸುವ ಮೂಲಕ ತಂತ್ರಗಾರಿಕೆ ಮೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿಸಿ, ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಸೆಳೆಯುವ ಮುನ್ಸೂಚನೆ ಕೊಟ್ಟಿದ್ದಾರೆ. ಇಂಡಿಯಾ ಇಬ್ಭಾಗ ಮಾಡದೆ ರಾಜಕೀಯ ಮಾಡಿದರೆ ಸಂಕಷ್ಟ ಎನ್ನುವುದನ್ನು ಬಿಜೆಪಿ ಈ ಮೂಲಕ ತೋರಿಸುತ್ತಿದೆ ಎನ್ನಬಹುದು.

Tags: INDIA AllliancePM Narendra Modiಇಂಡಿಯಾ ಮೈತ್ರಿಕೂಟಪ್ರಧಾನಿ ನರೇಂದ್ರ ಮೋದಿ
Previous Post

ಪುಷ್ಪ 2 ರಿಲೀಸ್ ಡೇಟ್ ಫಿಕ್ಸ್ | 2024ರ ಸ್ವಾತಂತ್ರ್ಯ ದಿನಕ್ಕೆ ಅಲ್ಲು ಅರ್ಜುನ್ ಸಿನಿಮಾ ತೆರೆಗೆ

Next Post

BJP ಜೊತೆಗಿನ ಮೈತ್ರಿಯಿಂದ JDS ಲಾಭ ಆಗುತ್ತಾ..? ಅನುಮಾನ ಯಾಕೆ..?

Related Posts

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ
ಅಂಕಣ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

by ಪ್ರತಿಧ್ವನಿ
April 30, 2026
0

ಭಾರತದ ಸಾಮಾಜಿಕ ಮತ್ತು ರಾಜಕೀಯ ಭೂಪಟದಲ್ಲಿ ಕರ್ನಾಟಕವು ಸಾಮಾಜಿಕ ನ್ಯಾಯದ ಪ್ರಯೋಗಶಾಲೆ ಎಂದು ಗುರುತಿಸಲ್ಪಟ್ಟಿದೆ. ಸಹಸ್ರಾರು ವರ್ಷಗಳ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಮಾನ...

Read moreDetails
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

April 30, 2026
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಬಿಜೆಪಿ-ಜೆಡಿಎಸ್‌ ಮೈತ್ರಿ

BJP ಜೊತೆಗಿನ ಮೈತ್ರಿಯಿಂದ JDS ಲಾಭ ಆಗುತ್ತಾ..? ಅನುಮಾನ ಯಾಕೆ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada