ಸೌಜನ್ಯಾ ಪ್ರಕರಣ ನೈಜ ಆರೋಪಿಗಳ ಪತ್ತೆಗೆ ಹೆಚ್ಚಿದ ಒತ್ತಡ. ಇಡೀ ರಾಜ್ಯಾದ್ಯಂತ ನಡೆದಿದೆ ಸಾಲು ಸಾಲು ಪ್ರತಿಭಟನೆ ಹೋರಾಟಗಳ ಬಳಿಕ ಸೌಜನ್ಯ ಪರ ನ್ಯಾಯಕ್ಕಾಗಿ ಇಂದು ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ. ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸಮಾವೇಶ ಆರಂಭ
ಪ್ರತಿಭಟನೆಗೆ ಅಧಿಕ ಸಂಖ್ಯೆಯಲ್ಲಿ ಸೇರಿದ ಜನರು. ನ್ಯಾಯಾಲಯದ ಸುಪರ್ದಿಯಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಪ್ರತಿಭಟನೆ. ಅಂತರಾಜ್ಯ ಹಾಗೂ ರಾಜ್ಯದ ನಾನಾ ಮೂಲೆಯಿಂದ ಪ್ರತಿಭಟನಾಕಾರರ ಆಗಮನ.
ಸಮಾವೇಶದಲ್ಲಿ ಸೌಜನ್ಯ ತಾಯಿ ಕುಸುಮಾವತಿ, ತಮ್ಮಣ್ಣ ಶೆಟ್ಟಿ ಸೇರಿದಂತೆ ಅನೇಕರು ಭಾಗಿ. ಬೆಳ್ತಂಗಡಿ ಸೌಜನ್ಯ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ
ಸೌಜನ್ಯಗೆ ನ್ಯಾಯ ಸಿಗಬೇಕು ಅನ್ನೋರಿಗೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲವಿದೆ. ಸೌಜನ್ಯ ಎಂಬ ಹೆಸರು ನಿಮಿತ್ತ, ಲಕ್ಷಾಂತರ ಸೌಜನ್ಯ ಮೇಲೆ ಅತ್ಯಾಚಾರ ಆಗ್ತಿದೆ. ಕರ್ನಾಟಕದಲ್ಲಿ ಮೂರೇ ವರ್ಷದಲ್ಲಿ 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ. ಮೂರೇ ವರ್ಷದಲ್ಲಿ 45 ಸಾವಿರ ಅಪ್ರಾಪ್ತ ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಇದೆಲ್ಲವುದಕ್ಕೆ ನ್ಯಾಯ ಸಿಗಲು ಸೌಜನ್ಯ ಪ್ರತಿನಿಧಿಯಾಗಿ ನಾವು ಸೇರಿದ್ದೇವೆ
ಸಂತೋಷ್ ರಾವ್ ಅಪರಾಧಿ ಎನ್ನಲು ಸಾಕ್ಷ್ಯ ಇಲ್ಲ ಅಂತ ಕೋರ್ಟ್ ಇಲಾಖೆಗೆ ಚಪ್ಪಲಿಯಲ್ಲಿ ಹೊಡೆದಿದೆ. ಇಲಾಖೆಯನ್ನ ಬೆತ್ತಲೆ ಮಾಡಿದ್ದಾರೆ ತೀರ್ಪು ಕೊಟ್ಟ ಜಡ್ಜ್ ಪ್ರಾಮಾಣಿಕ ಧ್ವನಿ, ಸಿಟ್ಟಿನ ಧ್ವನಿಯನ್ನ ಹೇಳಲು ಇವತ್ತು ನಮಗೆ ಮೈದಾನ ಕೊಡಲಿಲ್ಲ. ನಾವು ಕತ್ತಿ, ತಲವಾರು, ಬಾಂಬ್ ಹಿಡಿದುಕೊಂಡು ಬಂದಿದ್ದೇವಾ? ಎಲ್ಲರಿಗೂ ಹೆಣ್ಮಕ್ಕಳು ಇರ್ತಾರೆ, ನಿಮ್ಮಲ್ಲಿ ಆಗಿದ್ರೆ ಮುಚ್ಚಿ ಹಾಕ್ತಾ ಇದ್ರಾ? ನಿಮ್ಮ ಮಕ್ಕಳ ಮೇಲೆ ಈ ರೀತಿ ಆದಾಗ ಮಾತ್ರ ನಿಮಗೆ ಗೊತ್ತಾಗೋದು. ಸಿದ್ದರಾಮಯ್ಯ, ಗೃಹಮಂತ್ರಿ ಅವಸರದ ಹೇಳಿಕೆ ಕೊಡಬೇಡಿ. ನೀವು ಮರು ತನಿಖೆಗೆ ಕೊಡದೇ ಇದ್ರೆ ನಾವು ಬಿಡಲ್ಲ. ದ.ಕ ಜಿಲ್ಲೆಯಲ್ಲಿ ಹೊತ್ತುಕೊಂಡ ಕಿಡಿ ಉತ್ತರ ಕರ್ನಾಟಕ ಭಾಗದಲ್ಲೂ ಹೊತ್ತಲಿದೆ. ಇಡೀ ರಾಜ್ಯದ ತುಂಬಾ ಇದರ ಹೋರಾಟ ಆಗಲಿದೆ ಯಾಕೆ ಮರು ತನಿಖೆ ಆಗಲ್ಲ, ನ್ಯಾಯವಾದಿಗಳೇ ಆಗುತ್ತದೆ ಅಂದಿದಾರೆ
ಸೌಜನ್ಯ ಮತ್ತು ಸಂತೋಷ್ ರಾವ್ ಕುಟುಂಬ ಧೈರ್ಯದಿಂದ ಬದುಕಬೇಕು. ಅವರ ಎರಡೂ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಕೊಡಬೇಕು. ದ.ಕ ಮತ್ತು ಉಡುಪಿ ಜಿಲ್ಲೆಯ ಎಂಎಲ್ಎ, ಎಂಪಿಗಳು ಪ್ರತಿಯೊಬ್ಬರು ಇಬ್ಬರ ಮನೆಗೂ ಐದು ಲಕ್ಷ ಕೊಡಬೇಕು. ಕೋಟಿ ಕೋಟಿ ಲೂಟಿ ಹೊಡೆದ ನೀವು ಕೊಡಲೇ ಬೇಕು. ನಾನು ಸಂತೋಷ್ ರಾವ್ ಮನೆಗೆ ಹೋದೆ, ಆದರೆ ಅವರ ಎಂಎಲ್ ಎ ಎಲ್ಲಿದ್ದಾನೋ ಗೊತ್ತಿಲ್ಲ. ಸುನೀಲ್ ಕುಮಾರ್ ಅವರ ಮನೆಗೆ ಹೋಗಿ, ಸುಖ ದುಃಖ ಕೇಳಿ. ನೀವಷ್ಟೇ ಹತ್ತು ಕೋಟಿ ಮನೆ ಕಟ್ಟೋದಲ್ಲ ಸುನೀಲ್ ಕುಮಾರ್. ಮಹೇಶ್ ತಿಮರೋಡಿ ಮೇಲೆ ನಿನ್ನೆ ರಾತ್ರಿ ಮತ್ತೊಂದು ಕೇಸ್ ಹಾಕಿದ್ದಾರೆ. ಸಾವಿರ ಕೇಸ್ ಹಾಕಿದ್ರೂ ಬಗ್ಗುವ ವ್ಯಕ್ತಿಗಳು ನಾವಲ್ಲ. ತಿಮರೋಡಿಗೆ ಹೆದರಿಸೋದು ಬಿಡಿ, ನ್ಯಾಯ ಕೊಡಿಸೋದು ಯೋಚಿಸಿ. ಇನ್ಮುಂದೆ ಈ ವಿಚಾರದಲ್ಲಿ ಇಡೀ ರಾಜ್ಯ ಹೊತ್ತಿಕೊಳ್ಳುತ್ತೆ. ಮರು ತನಿಖೆ ಮಾಡಿ, ಖಂಡಿತಾ ಸೌಜನ್ಯಗೆ ನ್ಯಾಯ ಸಿಗಲಿದೆ. ಅಣ್ಣಪ್ಪ ತಿಮರೋಡಿಯವರೇ ನಿಮ್ಮ ಜೊತೆ ಲಕ್ಷ ಲಕ್ಷ ಯುವಕರಿದ್ದಾರೆ.
ಬೆಳ್ತಂಗಡಿ ಸೌಜನ್ಯ ಪ್ರತಿಭಟನೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂಥ ಕಾನೂನು ಇದ್ಯಾ ಅಂತ ನಮಗೆ ನಾಚಿಗೆ ಆಗ್ತಿದೆ.
ಫಂಡಮೆಂಟರ್ ರೈಟ್ಸ್ ಇಲ್ವಾ? ಎಲ್ಲಾ ಮೆಂಟಲ್ ಗಳೇ ಇರೋದು. ನಮ್ಮ ಮನೆ ಮಗಳನ್ನ ಕೊಂದವರ ಬಗ್ಗೆ ಮಾತನಾಡೋಕೆ ನಾವು ಪರ್ಮಿಷನ್ ತೆಗೋಬೇಕಾ? ನಾವು ಟ್ಯಾಕ್ಸ್ ಕಟ್ಟಿ ಸಾಕುವ ಪಾಪಿಗಳು ನಾವು ಏನು ಮಾತನಾಡಬೇಕು ಅಂತ ಹೇಳಬೇಕಾ? ಪೊಲೀಸರು, ಇಲ್ಲಿನ ಪಾಪಿ ರಾಜಕಾರಣಿಗಳು ಜನರು ನಕ್ಸಲೈಟ್ ಯಾಕೆ ಆಗ್ತಾರೆ ಅಂತ ಯೋಚಿಸಲಿ. ಒಬ್ಬ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಗ್ಯಾಂಗ್ ರೇಪ್ ಆಗಿರೋ ಕ್ಷೇತ್ರ ಪಾಕಿಸ್ತಾನದಲ್ಲಿ ಇದ್ಯಾ? ಈ ದೇಶದಲ್ಲಿ ಸ್ವಾತಂತ್ರ್ಯ ಇಲ್ವಾ? ಬ್ರಿಟಿಷರು ಇನ್ನೂ ಇದಾರಾ ಇಲ್ಲಿ. ಇವತ್ತು ಹೊಸ ಸಂಗ್ರಾಮ ಆರಂಭವಾಗಿದೆ, ಹನ್ನೊಂದು ವರ್ಷದಿಂದ ಸೌಜನ್ಯ ಹೋರಾಟ ಆರಂಭವಾಗಿದೆ. ತುಳುನಾಡಿನ ದೈವದ ನಡೆಯಲ್ಲಿ ಹನ್ನೆರೆಡು ವರ್ಷದಲ್ಲಿ ನ್ಯಾಯ ತೀರ್ಮಾನ ಸಿಕ್ಕಿದೆ ಎಂದು ಹೇಳಿದರು.
ಕಾಮುಕರನ್ನ ಕಾಮಾಂಧರು ಎನ್ನದೇ ಬೇರೆ ಏನು ಎನ್ನಬೇಕು ನೀವು ಹೆಸರು ಹೇಳ ಬಾರದು ಅಂತ ಹೇಳಿದ್ರೆ ನಾನು ಹೇಳದೇ ಕೂರಲ್ಲ. ನಾನು ನನ್ನ ಮನೆಯ ಊಟ ಮಾಡೋದು, ನೀವು ನಮ್ಮ ಹಣದ ಹಣ ಊಟ ಮಾಡೋದು. ಇವರಿಗೆ ಮಾತನಾಡಲು ದಾಖಲೆ ಬೇಕು, ನಾವು ದಾಖಲೆ ಕೊಡ್ತೇವೆ. ಸೌಜನ್ಯ ಕೇಸ್ನಲ್ಲಿ ಮುಚ್ಚಿಟ್ಟ ಸತ್ಯದ ದಾಖಲೆಗಳು ಎಲ್ಲಿವೆ. ಈ ಪಾಪಿ ಪೊಲೀಸರ ತಪ್ಪಿನಿಂದಾಗಿ ಈ ರೀತಿ ಆಗಿದೆ. ಸೌಜನ್ಯ ಅತ್ಯಾಚಾರ ಆದಾಗ ಇದ್ದ ಪಾಪಿ ಪೊಲೀಸರು ಈಗಲೂ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇದ್ದಾರೆ.
ಸುಂದರ್ ಶೆಟ್ಟಿ ಮತ್ತು ಕೃಷ್ಣ ಎಂಬ ಇಬ್ಬರು ಪೊಲೀಸರು ಇಲ್ಲೇ ಇದ್ದಾರೆ. ಸುಂದರ್ ಶೆಟ್ಟಿ ಸೌಜನ್ಯ ಕೇಸ್ ಆದಾಗ ಎಸ್ಸೈ ಯೋಗೀಶ್ ಕುಮಾರ್ ಬಂಟನಾಗಿದ್ದ. ಇನ್ನೊಬ್ಬ ಕೃಷ್ಣ ಅಂತ ಪೊಲೀಸರು, ಅವನನ್ನ ಇಂಟಲಿಜೆನ್ಸ್ ನಲ್ಲಿ ಇಟ್ಟಿದ್ದಾರೆ. ಮತ್ತೊಬ್ಬ ನವೀನ್, ಇವರು ಮಾಡಿದ ತಪ್ಪುಗಳು ತುಂಬಾ ಇದೆ. ಅತ್ಯಾಚಾರ ಮಾಡಿದವರ ಜೊತೆ ಇರೋ ಕಾಮಾಂಧರು ಯಾರು? ನಾವು ಯಾರ ಕೈಯಾಳುಗಳೂ ಇಲ್ಲ, ಅಣ್ಣಪ್ಪ, ಮಂಜುನಾಥನ ಕೈಯ್ಯಾಳುಗಳು. ಮುಂದಿನ ದಿನಗಳಲ್ಲಿ ಈ ಬೆಂಕಿ ಇಡೀ ರಾಷ್ಟ್ರಕ್ಕೆ ಬೀಳ್ತದೆ. ಕ್ಷೇತ್ರದಲ್ಲಿ ನಿಂತವರು ನಾಳೆ ಬೀದಿಗೆ ಬರಬೇಕು. ನನ್ನತ್ರ ಮತ್ತೊಂದು ದಾಖಲೆ ಇದೆ, ಅದನ್ನ ಮತ್ತೊಂದು ಸಭೆ ಮಾಡಿ ಬಿಚ್ಚಿಡ್ತೇನೆ. ಇವರ ಮನೆ ಮಕ್ಕಳು ಅಮೆರಿಕಾದಲ್ಲಿ ಇದ್ರು ಅಂತ ಹೇಳ್ತಾರಲ್ಲ. ಆದರೆ ಇವರ ಮನೆ ಮಗ ಎಲ್ಲಿದ್ದ ಅಂತ ನಮಗೆ ದಾಖಲೆ ಸಿಕ್ಕಿದೆ. ಐಎಎಸ್ ಮಾಡಿದ ಜಿಲ್ಲಾಧಿಕಾರಿಗೆ ತಲೆಯಲ್ಲಿ ಮೆದುಲಿಲ್ವಾ? ಪ್ರತಿಭಟನೆ ಮಾಡಲು ಒಂದು ಮೈದಾನ ಕೊಡಲಿಲ್ಲ ಇವರು. ಡಿಸಿ, ಸಿಎಂ ಯಾರು ಬಂದರೂ ನಾವು ಮೈದಾನದಲ್ಲೇ ಮಾಡ್ತಾ ಇದ್ದೆವು. ಆದರೆ ಸತ್ಯ ಧರ್ಮದ ಹೋರಾಟ ಇದು, ಹಾಗಾಗಿ ಮೈದಾನಕ್ಕೆ ನುಗ್ಗಲಿಲ್ಲ. ಗೃಹಮಂತ್ರಿಗಳೇ ನಿಮಗೆ ಆಗಲ್ಲಂದ್ರೆ ನೀವು ಲಾಯಕ್ಕಿಲ್ಲ ಅಂತ ಆಗುತ್ತದೆ. ಇಡೀ ಪ್ರಕರಣವನ್ನ ಆವತ್ತು ಬಿಜೆಪಿ ನಾಶ ಮಾಡಿತು, ಈಗ ಕಾಂಗ್ರೆಸ್ ಮಾಡ್ತಿದೆ. ನಿಮ್ಮ ಡಿಸಿಗೆ ಹೇಳಿ ನಮಗೆ ಒಂದು ಮೈದಾನ ಕೊಡಿಸಲು ನಿಮಗೆ ಆಗಿಲ್ಲ. ಮುಖ್ಯಮಂತ್ರಿಗಳೇ ನಮ್ಮ ಹೋರಾಟ ಹತ್ತಿಕ್ಕಿದ್ರೆ ನಿಮಗೆ ಅಣ್ಣಪ್ಪ ಸ್ವಾಮಿಯ ಶಾಪ ಕಟ್ಟುತ್ತೆ. ಅವರ್ಯಾರೋ ಗುಂಡೂರಾವ್ ಅಂತೆ, ಆ ದೊಣ್ಣೆ ನಾಯಕನಿಗೆ ಹೇಳಿದ್ರೂ ಮೈದಾನ ಸಿಗಲಿಲ್ಲ. ಅಲ್ಲಿ ನ್ಯಾಯ ಸಿಗದೇ ಇದ್ರೆ ಏನರ್ಥ, ರಾಜಕೀಯ, ಹಿಂದೂ ಮುಖಂಡರು ಎಲ್ಲಿ ಸತ್ತಿದಾರೆ ಎಂದು ಪ್ರಶ್ನಿಸಿದರು.
ಬರುವ ದಿನಗಳಲ್ಲಿ ಈ ಹೋರಾಟ ರಾಜ್ಯ ಮಟ್ಟದಲ್ಲಿ ಆರಂಭವಾಗಲಿದೆ. ಒಂದೂವರೆ ತಿಂಗಳಲ್ಲಿ ದೆಹಲಿಗೂ ಹೋಗಿ ಪ್ರತಿಭಟನೆ ಮಾಡ್ತೇವೆ. ಮುಂದೊಂದು ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾಲ ಸನ್ನಿಹಿತವಾಗ್ತಾ ಇದೆ. ಆವತ್ತು ನಿಮ್ಮ ಯಾವ ಕಾನೂನು ಕೂಡ ನಮ್ಮನ್ನ ತಡೆಯಲು ಆಗಲ್ಲ. ಜನರು ದಂಗೆ ಎದ್ರೆ ಅದಕ್ಕೆ ಕಾರಣ ಆಡಳಿತ, ಅಧಿಕಾರಿಗಳು ಮತ್ತು ಜನ ನಾಯಕರು
ಗ್ರಾಮಾಭಿವೃದ್ಸಿ ಯೋಜನೆಯಲ್ಲಿ ಕೆಲಸ ಮಾಡುವ ತಾಯಂದಿರಿಗೆ ಸತ್ಯ ಅರ್ಥ ಆಗ್ತಿಲ್ಲ.
ಸೌಜನ್ಯ ಪ್ರತಿಭಟನಾ ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಹೇಳಿಕೆ
ನಾವೂ ಯಾಕೆ ಕ್ಷೇತ್ರದ ವಿರುದ್ಧ ಮಾತನಾಡಬಾರದು
ಸಿಬಿಐ ಯವರು ಮೊದಲು ಸಂತ್ರಸ್ತೆ ಮನೆಗೆ ಭೇಟಿ ನೀಡದೆ ಯಾಕೆ ಕ್ಷೇತ್ರಕ್ಕೆ ಭೇಟಿ ನೀಡಬೇಕು
ನಾವೂ ಮಾತನಾಡಿದ್ರೆ ನಮಗೆ ಮಾತ್ರ ಕೋರ್ಟ್ ಸ್ಟೇ ತರ್ತಾರೆ
ನ್ಯಾಯಾಂಗ ತನಿಖೆ ಮಾಡಬೇಕು ಯಾಕೆ ಕೋರ್ಟ್ ಸುಮ್ಮನಿದೆ
ಸರಕಾರ ಮತ್ತು ನ್ಯಾಯಾಂಗಕ್ಕೆ ಗೊತ್ತಿಲ್ವಾ
ಎಷ್ಟು ವರ್ಷಾ ಕಾಯಬೇಕು ನಾವೂ ತನಿಖೆಗೆ
ನಿಮಗೆ ತಾಕತ್ತಿದ್ರೆ ಬೇಗ ತನಿಖೆ ಮಾಡಿಸಿ
ರಾಜ್ಯಸಭಾ ಸದಸ್ಯರೇ ಈಗ ನೀವು ಮರು ತನಿಖೆಗೆ ಅಗ್ರಹಿಸುತ್ತಿದ್ದೀರಾ.
ನೀವು ಯಾವುದೇ ಕೇಸ್ ಹಾಕಿ ನಮ್ಮ ಹೋರಾಟ ಮುಂದುವರೆಯುತ್ತದೆ
ಈಗ ರಾಜರ ಕಾಲದ ಆಡಳಿತ ನಡೆಯುತ್ತಿಲ್ಲ..ಸಂವಿಧಾನ ಎನ್ನೋದು ಇದೆ
ನೀವು ರಾಜ್ಯಸಭಾ ಸದಸ್ಯರು ಮೊದಲು ನಿಮ್ಮ ತಮ್ಮನನ್ನು ಹೊರಗೆ ಕಳಿಸಿ
ನಿಮ್ಮ ತಮ್ಮ ಯಾವುದೇ ಅತ್ಯಾಚಾರ ಅನಾಚಾರ ಭಾಗಿಯಾಗಿಲ್ಲ ಎಂದು ಅಣ್ಣಪ್ಪನ ಮುಂದೆ ಪ್ರಮಾಣ ಮಾಡಲಿ
ನಾನು ಆ ಪ್ರಮಾಣಕ್ಕೆ ಬರುತ್ತೇನೆ. ಮಂಗಳೂರಿನಲ್ಲಿ ನಾವು ಸಭೆ ಮಾಡಿದೆವು. ಚುನಾವಣಾ ಬಹಿಷ್ಕಾರ ಮಾಡ್ಬೇಕು ಎಂದಿದ್ದೆವು. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು.
ರಾಜಕೀಯದವ್ರಿಗೆ ನಾವೂ ಹಿಂದುತ್ವವನ್ನ ಕೊಟ್ಟಿಲ್ಲ
ಎರಡು ಪಕ್ಷದವರಿಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ
ನೀವು ಪಾರ್ಟಿ ಫಂಡ್ ಗೋಸ್ಕರ ಅಲ್ಲಿ ಹೋಗಿ ಲಂಚ ತೆಗೆದುಕೊಳ್ಳುತ್ತೀರ
ಪ್ರತಿಭಟನೆಗೆ ಗ್ರೌಂಡ್ ಪರ್ಮಿಷನ್ ಕೊಡದ ನೀವು
ಸೌಜನ್ಯ ತಾಯಿಯನ್ನು ಮೋದಿಯಲ್ಲಿಗೆ ಕರೆದುಕೊಂಡು ಹೋಗುತ್ತೀರಾ..?
ಎಲ್ಲಿದ್ದಾನೆ ನಮ್ಮ ಎಂ ಎಲ್ ಎ ಹರೀಶ್ ಪೂಂಜ
ಅವನು ಮೊದಲು ಗ್ರೌಂಡ್ ಪರ್ಮಿಷನ್ ಕೊಡಿಸ್ಬೇಕಿತ್ತು
ಸೌಜನ್ಯ ತಾಯಿಗೆ ಕರೆ ಮಾಡಿ ಹೇಳುತ್ತಾನೆ ನಾವೂ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರನ್ನ ಭೇಟಿ ಮಾಡುವ ಎಂದು
ನೀನ್ ಯಾಕೆ ಕರೆದುಕೊಂಡು ಹೋಗಬೇಕು
ನಾವೂ ತಾಯಂದಿರು ಕರೆದುಕೊಂಡು ಹೋಗುತ್ತೇವೆ
ವಿಶ್ವ ಹಿಂದೂ ಪರಿಷದ್ ನವರಿಗೆ ನನ್ನ ಪ್ರಶ್ನೆ ಇದೇ
ನಾನು ಎಲ್ಲಾ ಸಭೆಯಲ್ಲೂ ನೋಡುತ್ತಾ ಇದ್ದೇನೆ ನಾಯಕರು ಯಾರು ಮಾತನಾಡುತ್ತಿಲ್ಲ
ಕಾರ್ಯಕರ್ತರು ಮಾತ್ರ ಹೋರಾಟ ಮಾಡುತ್ತಿದ್ದಾರೆ
ಪ್ರತಿಭಟನಾ ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಹೇಳಿಕೆ
ಸೌಜನ್ಯ ಪ್ರತಿಭಟನಾ ಸಮಾವೇಶದಲ್ಲಿ ಆದಿ ಚುಂಚನಗಿರಿ ಶಾಖಾ ಮಠ ಮಂಗಳೂರಿನ ಶ್ರೀ ನಧರ್ಮ ಪಾಲನಾಥನ ಸ್ವಾಮೀಜಿ ಹೇಳಿಕೆ
ಸತ್ಯ ನ್ಯಾಯದ ಹೋರಾಟಕ್ಕೆ ಆದಿ ಚುಂಚನಗಿರಿ ಮಠದ ಬೆಂಬಲವಿದೆ
ಮೂರು ಅಂಶಗಳನ್ನ ಯೋಚನೆ ಮಾಡಬೇಕು
ಸಂತೋಷ ರಾವ್ ಗೆ ಮರಳಿ ಜೀವನವನ್ನ ನೀಡಲು ಸಾಧ್ಯ ಇಲ್ಲ
ಸರಕಾರ ಅವನ ಬದುಕಿಗೆ ಏನಾದ್ರು ವ್ಯವಸ್ಥೆ ಮಾಡಬೇಕು
ಕುಸುಮಾವತಿ ಕುಟುಂಬಕ್ಕೆ ಸರಕಾರ ರಕ್ಷಣೆ ನೀಡಬೇಕು
ಶವ ಪರೀಕ್ಷೆ ಮಾಡಿದ ವೈದ್ಯ ತನಿಖಾಧಿಕಾರಿಯನ್ನ ಮೊದಲು ವಿಚಾರಣೆ ಮಾಡಬೇಕು
ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು
ಹಿರಿಯ ಸ್ವಾಮೀಜಿಗಳು ಮಾತನಾಡಿದ್ದಾರೆ… ಸಭೆ ಕರೆದಿದ್ದಾರೆ
ಎಲ್ಲರನ್ನ ಒಪ್ಪಿಕೊಂಡ ಅಪ್ಪಿಕೊಂಡ ಮಠ ಶ್ರೀ ಆದಿ ಚುಂಚನಗಿರಿ ಮಠ
ಸೌಜನ್ಯ ಸ್ತ್ರೀ ಸ್ವರೂಪ ತೊರೆದು ಕಾಳಿ ಸ್ವರೂಪವನ್ನ ಪಡೆದಿದ್ದಾಳೆ
ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕು
ಸರಕಾರ ಶೀಘ್ರ ತನಿಖೆ ನಡೆಸಿ ಅವಳ ಆತ್ಮಕ್ಕೆ ಶಾಂತಿಯನ್ನ ಒದಗಿಸಬೇಕು.
ವೇದಿಕೆ ಕೆಳಗಿಳಿದು ಸೇರಗೋಡ್ಡಿ ನೆರೆದವರಲ್ಲಿ ನ್ಯಾಯ ಬೇಡಿದ ಸೌಜನ್ಯ ತಾಯಿ
ಸೌಜನ್ಯ ಪ್ರತಿಭಟನಾ ಸಮಾವೇಶದಲ್ಲಿ ತಾಯಿ ಕುಸುಮಾವತಿ ಹೇಳಿಕೆ
ನನ್ನ ಮಗಳಿಗೆ ನ್ಯಾಯ ಕೊಡಿಸಲು ಇಡಿ ದೇಶವೇ ಕೂಡಿ ಬಂದಿದೆ
ನನ್ನ ಮಗಳಿಗೋಸ್ಕರ ಇಷ್ಟೊಂದು ಜನ ಸೇರಿದ್ದೀರಿ
ನಮ್ಮ ಮಗುವಿಗೋಸ್ಕರ ನ್ಯಾಯ ಕೇಳಲು ಇಂದು ನಮಗೆ ಪರ್ಮಿಷನ್ ಕೊಟ್ಟಿಲ್ಲ
ಬಜರಂಗದಳದವರೊಂದಿಗೆ ಅಣ್ಣಪ್ಪನಲ್ಲಿ ನ್ಯಾಯ ಕೇಳಲು ಹೋಗಿದ್ದೆ…ನನ್ನನ್ನ ಒಳಗೆ ಹೋಗಲು ಬಿಟ್ಟಿಲ್ಲ
ನನ್ನನ್ನು ಒಂದು ಗಂಟೆ ಹೊರಗಡೆ ಕಾಯಿಸಿದ್ದಾರೆ
ಆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿಯನ್ನ ನಾನು ಇಲ್ಲಿ ನೋಡುತ್ತಿದ್ದೇನೆ
ಖಂಡಿತಾ ನಾನು ಗಟ್ಟಿಯಾಗಿ ಇದ್ದೇನೆ
ಇಷ್ಟು ಜನರ ಶಕ್ತಿ ನನ್ನಲ್ಲಿ ತುಂಬಿದೆ
ಅದು ಎಷ್ಟು ಬಾರಿ ನನ್ನ ಮಗಳನ್ನು ಅತ್ಯಾಚಾರ ಮಾಡಿದ್ರೋ
ನನ್ನ ಮಗಳು ಎಷ್ಟು ನೋವು ತಿಂದಳು
5-6 ಜನ ಅತ್ಯಾಚಾರ ಮಾಡಿದ್ದಾರೆ
ಧೀರಜ್ ಜೈನ್ ಮಲ್ಲಿಕ್ ಜೈನ್ ಹಾಗೇ harshendra ಕುಮಾರ್ ಮಗ ನಿಶ್ಚಲ್ ಜೈನ್
ನ್ಯಾಯ ಸಿಗುತ್ತೆ ಅತ್ಯಾಚಾರಿಗಳು ಸಿಕ್ತಾರೆ ಎಂಬ ನಂಬಿಕೆ ಇದೆ
ಅಮ್ಮ ನನ್ನನ್ನು ಬದುಕಿಸು ಎಂಬ ಕೂಗು ನನಗೆ ಈಗಲೂ ಕೇಳಿಸುತ್ತೆ
ಅತ್ಯಾಚಾರ ಮಾಡಿ ಕಾಡಲ್ಲಿ ಬಿಸಾಡಿದ್ದಾರೆ
ಅತ್ಯಾಚಾರ ಮಾಡಿ ಬಿಟ್ಟಿದ್ರು ನನಗೆ ತೊಂದರೆ ಇರ್ತಿರ್ಲಿಲ್ಲ…ಆದರೆ ಕೊಂದೇ ಬಿಟ್ಟರು
ಇವತ್ತು ನಿಮ್ಮ ಕಾಲ ಬುಡಕ್ಕೆ ಬಂದು ನ್ಯಾಯ ಕೇಳುತ್ತಿದ್ದೇನೆ
ಯಾವುದೇ ಹಣದ ಆಮಿಷಕ್ಕೆ ನ್ಯಾಯವನ್ನೂ ಬಲಿ ಕೊಡಬೇಡಿ ತಾಯಂದಿರೆ ಎಂದು ಮನವಿ ಮಾಡಿದರು.