ಲಿಬಿಯಾ ದೇಶದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗಿದೆ ಎಂದು ಸೋಮವಾರ (ಆಗಸ್ಟ್ 21) ಮಾಧ್ಯಮಗಳು ವರದಿ ಮಾಡಿವೆ.
ಮಾನವ ಕಳ್ಳಸಾಗಾಣಿಕೆಗೆ ಸಿಲುಕಿ ಲಿಬಿಯಾದಲ್ಲಿ ಸಿಲುಕಿದ್ದ ಪಂಜಾಬ್ ಮತ್ತು ಹರಿಯಾಣ ಮೂಲದವರಾದ 17 ಜನರು ಭಾನುವಾರ ಸಂಜೆ ದೆಹಲಿಗೆ ಮರಳಿದ್ದಾರೆ.
ಲಿಬಿಯಾ ಟ್ಯೂನಿಸ್‌ನಲ್ಲಿನ ಭಾರತದ ರಾಯಭಾರಿ ಕಚೇರಿಗೆ ಮನೆಯ ಸದಸ್ಯರು ನಾಪತ್ತೆಯಾಗಿರುವುದಾಗಿ ಮೇ 26ರಂದು ಕುಟುಂಬವು ಮಾಹಿತಿ ರವಾನಿಸಿತ್ತು.
ಜೂನ್ 13 ರಂದು ಜ್ವಾರ ನಗರದಲ್ಲಿ ಲಿಬಿಯನ್ ಅಧಿಕಾರಿಗಳು ಭಾರತೀಯರನ್ನು ಹಿಡಿದು, ಅಕ್ರಮವಾಗಿ ದೇಶ ನುಸುಳಿದ್ದಾರೆ ಎಂದು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು.
ಬಳಿಕ ಲಿಬಿಯಾ ದೇಶದಲ್ಲಿನ ಭಾರತ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯವು ಲಿಬಿಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಕಾರಣ ಬಿಡುಗಡೆಗೆ ಒಪ್ಪಿದ್ದರು ಎಂದು ವಾಪಸ್ಸಾದ ಭಾರತೀಯರು ಹೇಳಿದ್ದಾರೆ.
ಪಾಸ್ಪೋರ್ಟ್ ಇಲ್ಲದ ಕಾರಣ ತುರ್ತು ಪ್ರಮಾಣ ಪತ್ರ ನೀಡುವ ಮೂಲಕ ಭಾರತ ರಾಯಭಾರ ಕಚೇರಿಯು ನಮ್ಮನ್ನು ಸುರಕ್ಷಿತವಾಗಿ ತಾಯ್ಯಾಡಿಗೆ ಮರಳುವಂತೆ ಮಾಡಿದೆ ಎಂದು ಪ್ರಶಂಸಿದ್ದಾರೆ.