105 ಅಡಿಗೆ ಕುಸಿತ ಕಂಡ ಕೆ.ಆರ್.ಎಸ್ ಡ್ಯಾಂ ನೀರನ ಮಟ್ಟ. ದಿನೇ ದಿನೇ ಕುಸಿಯುತ್ತಿದ್ರು ರಾಜ್ಯ ಸರ್ಕಾರ ಸರ್ಕಾರ ಕೈಕಟ್ಟಿ ಕುಳಿತಿದೆ.
ಕಾವೇರಿ ಕೊಳ್ಳದ ರೈತರಲ್ಲಿ ಮುಂದುವರೆದ ಕಾವೇರಿ ಒಡಲು ಬರಿದಾಗುವ ಆತಂಕ. ಅನ್ನದಾತರ ಮಾತಿಗು ಕ್ಯಾರೆ ಎನ್ನದ ರಾಜ್ಯ ಸರ್ಕಾರ.
ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹಲವಡೆ ಮುಂದುವರೆದಿರುವ ಪ್ರತಿಭಟನೆ.
ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹ. ಹೋರಾಟದ ನಡುವೆಯು ಇಂದು ಕೂಡ ತಮಿಳುನಾಡಿಗೆ 12,631 ಕ್ಯೂಸೆಕ್ ನೀರು ಬಿಡುಗಡೆ.
ಕೆಆರ್ಎಸ್ ಡ್ಯಾಂ ನಿಂದ ಒಟ್ಟಾರೆ 15247 ಕ್ಯೂಸೆಕ್ ಹೊರಹರಿವು. ಅಷ್ಟಾಗಿ ಏರಿಕೆ ಕಾಣದ ಒಳಹರಿವು ಪ್ರಮಾಣ. KRS ಡ್ಯಾಂಗೆ ಹರಿದು ಬರುತ್ತಿದೆ 4983 ಕ್ಯೂಸೆಕ್ ನೀರು ಮಾತ್ರ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 105.70 ಅಡಿ ನೀರು ಸಂಗ್ರಹವಾಗಿದೆ.
49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 27.617 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ ಎಂದು ವರದಿಯಾಗಿದೆ.
ಕೆಆರ್ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 105.70 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 27.617 ಟಿಎಂಸಿ
ಒಳ ಹರಿವು – 4983 ಕ್ಯೂಸೆಕ್
ಹೊರ ಹರಿವು – 15,247 ಕ್ಯೂಸೆಕ್