• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಡಿಸಿಎಂ ವಿರುದ್ಧ ಆರೋಪ ಮಾಡಿದ್ರೆ ಬೆದರಿಸೋ ಕೆಲಸ ಮಾಡಿದ್ರಾ ಡಿ.ಕೆ ಶಿವಕುಮಾರ್​..?

ಕೃಷ್ಣ ಮಣಿ by ಕೃಷ್ಣ ಮಣಿ
August 16, 2023
in ಅಂಕಣ, ಅಭಿಮತ
0
ಗುತ್ತಿಗೆದಾರರ ಬಳಿ ಲಂಚಕ್ಕೆ ಬೇಡಿಕೆ ಇಟ್ಟರಾ ಡಿಸಿಎಂ ಡಿ.ಕೆ ಶಿವಕುಮಾರ್​..?
Share on WhatsAppShare on FacebookShare on Telegram

ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಆಗಿರುವ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಜೊತೆಗೆ ಅಧಿಕಾರಕ್ಕಾಗಿ ಫೈಟಿಂಗ್​ ಮಾಡಿ ಉಪಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ಎರಡೂವರೆ ವರ್ಷದ ಅಧಿಕಾರದ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಡಿ.ಕೆ ಶಿವಕುಮಾರ್ ಬೆಂಬಲಿಗರು ಈಗಾಗಲೇ ಪುಕಾರು ಮಾಡುತ್ತಿದ್ದಾರೆ. ಆದರೆ ಇದೀಗ ಡಿ.ಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ವಿರೋಧ ಪಕ್ಷಗಳು ಸೇರಿದಂತೆ ಗುತ್ತಿಗೆದಾರರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರಾ..? ಎಂಬ ಅನುಮಾನ ಸರ್ಕಾರದ ಮಟ್ಟದಲ್ಲೇ ಕೇಳಿಬರುತ್ತಿರುವ ಗುಸುಗುಸು. ವಿರೋಧ ಪಕ್ಷಗಳ ನಾಯಕರು ಮಾತನಾಡಿದರೆ ಏನಾಗುತ್ತೋ ಅನ್ನೋ ಆತಂಕದಲ್ಲಿದ್ದಾರೆ.

ADVERTISEMENT

ಗುತ್ತಿಗೆದಾರ ಹೇಮಂತ್ ಬೆದರಿದ್ದು ಯಾಕೆ ಗೊತ್ತಾ..?

ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರಿಗೆ ಸರ್ಕಾರ ಬಾಕಿ ಬಿಲ್​​ ಬಿಡುಗಡೆ ಮಾಡದೆ ತನಿಖೆಗೆ ಆದೇಶ ಮಾಡಿದೆ. ಒಂದು ವೇಳೆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ ಬಿಲ್​ ಪಾವತಿ ಮಾಡಲ್ಲ ಅನ್ನೋದು ಸರ್ಕಾರ ಅದರಲ್ಲೂ ಬೆಂಗಳೂರು ಅಬಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ವಾದ.

ಈ ನಡುವೆ ಹೇಮಂತ್​ ಎನ್ನುವ ಗುತ್ತಿಗೆದಾರ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ ಹೇಳಲಿ ಕಮಿಷನ್​ ಕೇಳಿಲ್ಲ ಎಂದು ಡಿ.ಕೆ ಶಿವಕುಮಾರ್​ಗೆ ನೇರ ಸವಾಲು ಹಾಕಿದ್ದರು. ಒಂದು ವಾರಗಳ ಕಾಲ ಭಾರೀ ಚರ್ಚೆ ನಡೆದ ಬಳಿಕ ಗುತ್ತಿಗೆದಾರ ಹೇಮಂತ್​ ತಮ್ಮ ಹೇಳಿಕೆ ವಾಪಸ್​ ಪಡೆದುಕೊಂಡಿದ್ದಾರೆ. ನಾನು ಭಾವೋಗ್ವೇದದಲ್ಲಿ ಹೇಳಿದ್ದೆ. ನನ್ನ ಬಳಿ ಯಾರೂ ಕಮಿಷನ್​ ಕೇಳಿಲ್ಲ, ಅಜ್ಜಯ್ಯನ ಮೇಲೆ ಆಣೆ ಮಾಡುವಂತೆ ಕರೆದಿದ್ದು ತಪ್ಪು. ನನ್ನ ಹೇಳಿಕೆಯನ್ನು ವಾಪಸ್​ ಪಡೆದುಕೊಳ್ತೇನೆ ಮುಂದೆ ಯಾರು ನನ್ನ ಹೇಳಿಕೆ ಉಲ್ಲೇಖಿಸಿ ಚರ್ಚೆ ಮಾಡಬೇಡಿ ಎಂದು ಬೇಡಿಕೊಂಡಿದ್ದರು.

ಸಿ.ಟಿ ರವಿಗೂ ಟ್ರೀಟ್​ಮೆಂಟ್​ ಬೇಕಿದೆ ಎಂದ ಡಿ.ಕೆ ಶಿವಕುಮಾರ್..!

ಬಿಜೆಪಿ

ಅಜ್ಜಯ್ಯನ ಮೇಲೆ ಆಣೆ ಮಾಡಲು ಕರೆದಿದ್ದಾರೆ. ಕಮಿಷನ್​ ಪಡೆದಿಲ್ಲ ಎನ್ನುವುದಾದರೆ ಅಜ್ಜನ ಮೇಲೆ ಪ್ರಮಾಣ ಮಾಡುವುದಕ್ಕೆ ಅಡ್ಡಿ ಏನು..? ಎಂದು ಸಿ.ಟಿ ರವಿ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಗರಂ ಆಗಿ ಉತ್ತರ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಸಿ.ಟಿ ರವಿಗೂ ಟ್ರೀಟ್​ಮೆಂಟ್​ ಬೇಕಾಗಿದೆ. ಸದ್ಯದಲ್ಲೇ ಟ್ರೀಟ್​ಮೆಂಟ್​ ಕೊಡೋಣ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದರು. ಇಂದು ಸಿ.ಟಿ ರವಿ ಮಾತನಾಡಿ, ಸಿ.ಟಿ.ರವಿಗೆ ಟ್ರೀಟ್​ಮೆಂಟ್ ಅಗತ್ಯವಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. ನಾನು ಸಂಘದ ಸ್ವಯಂ ಸೇವಕ, ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್​ಮೆಂಟ್​ ಕೊಡ್ತಾರೆ. ಕೊತ್ವಾಲ್ ಮಾದರಿಯ ಟ್ರೀಟ್​ಮೆಂಟ್​ ಕೊಡ್ತಾರಾ ಅನ್ನೋದು ನನಗೆ ಭಯ ಉಂಟು ಮಾಡಿದೆ. ಹೀಗಾಗಿ ರಕ್ಷಣೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೀನಿ ಎಂದಿದ್ದಾರೆ.

ಅಧಿಕಾರದಲ್ಲಿ ಇದ್ದವರ ಮೇಲೆ ಆರೋಪ ಸಹಜ ಅಲ್ಲವೇ..!?

ಅಧಿಕಾರದಲ್ಲಿ ಯಾರೇ ಇದ್ದರೂ ಆರೋಪಗಳು ಬರುತ್ತವೆ. ಆರೋಪಗಳನ್ನು ಸಹಿಸಿಕೊಳ್ಳುವ ಶಕ್ತಿ ಅಧಿಕಾರದಲ್ಲಿ ಇರುವ ಜನರಿಗೆ ಇರಬೇಕಾಗುತ್ತದೆ. ಒಂದು ವೇಳೆ ತಾನು ಆರೋಪದಿಂದ ಮುಕ್ತವಾಗಬೇಕು ಎನ್ನುವುದಾದರೆ ತನಿಖೆ ಮಾಡಿಸಬೇಕು, ಪೊಲೀಸರು ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿ ತಾನು ನಿರಪರಾಧಿ ಎಂದು ಸಾಬೀತು ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ಟ್ರೀಟ್​ಮೆಂಟ್​ನ ಅವಶ್ಯಕತೆ ಇದೆ ಎನ್ನುವುದು ಬೆದರಿಕೆ ಆಗುತ್ತದೆ. ಇನ್ನು ಗುತ್ತಿಗೆದಾರರು ಆರೋಪ ಮಾಡಿದ ಬಳಿಕ ಒಂದೆರಡು ದಿನದಲ್ಲಿ ಮೆತ್ತಗಾದರು. ಅವರಿಗೆ ಯಾವ ಟ್ರೀಟ್​ಮೆಂಟ್​ ನೀಡಿದ್ದಾರೆ ಎನ್ನುವುದು ಬಹಿರಂಗ ಆಗಿಲ್ಲ. ಆದರೆ ಟ್ರೀಟ್​ಮೆಂಟ್​ ಸಿಕ್ಕಿದೆ ಎನ್ನುವುದು ಎರಡನೇ ಹೇಳಿಕೆಯನ್ನು ನೋಡಿದಾಗ ಗೊತ್ತಾಗುತ್ತದೆ. ಈ ರೀತಿ ಬೆದರಿಕೆ ಹಾಕುವ ಡಿಸಿಎಂ ಡಿ.ಕೆ ಶಿವಕುಮಾರ್​ ಮುಖ್ಯಮಂತ್ರಿ ಆದರೆ ಹೇಗಿರಬಹುದು ಎಂದು ಚರ್ಚೆ ಶುರುವಾಗಿದೆ. ಡಿ.ಕೆ ಶಿವಕುಮಾರ್​ ತಿದ್ದಿಕೊಳ್ಳುವ ಅವಶ್ಯಕತೆ ಹೆಚ್ಚಿದೆ.

ಕೃಷ್ಣಮಣಿ

Tags: AICCCongress GovernmentDKShivakumarKPCCMallikarjun KhargeRahul GandhiSonia Gandhi
Previous Post

5 ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಇರ್ತಾರಾ..? ಅಭಿಮಾನಿಗಳ ಪ್ರಶ್ನೆಗೆ ಸಿದ್ದು ಉತ್ತರ..

Next Post

ಅಂಕಣ | ಸಂತ್ರಸ್ತರೊಡನೆ ನಿಲ್ಲುವ ಸಮಾಜ ಕಟ್ಟಬೇಕಿದೆ

Related Posts

Top Story

ಹೊಸ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾದ ನಮ್ ಋಷಿ ..

by ಪ್ರತಿಧ್ವನಿ
August 20, 2025
0

ಹಾಡಿನೊಂದಿಗೆ ಬಂದ "ಫ್ರಾಡ್ ಋಷಿ" ಈವರೆಗೂ ಮೂವತ್ತು ಕೋಟಿ ಜನರು ವೀಕ್ಷಣೆ ಮಾಡಿ,‌ ಇಂದಿಗೂ ಟ್ರೆಂಡಿಂಗ್ ನಲ್ಲಿರುವ "ಒಳಿತು ಮಾಡು ಮನುಸ. ನೀ ಇರೋದು ಮೂರು ದಿವಸ"...

Read moreDetails

K V Prabhakar: ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

August 20, 2025

DK Shivakumar: ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಾಕುತ್ತಿದ್ದೇವೆ..!!

August 20, 2025

CM Siddaramaiah: ಸರಳ, ಸಜ್ಜನಿಕೆಯ ಪ್ರಾಮಾಣಿಕ ಹೋರಾಟಗಾರ ಮೈಕೆಲ್ ಫರ್ನಾಂಡಿಸ್: ಸಿ.ಎಂ.ಸಿದ್ದರಾಮಯ್ಯ

August 19, 2025

DK Shivakumar: ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ..!!

August 19, 2025
Next Post
ಅಂಕಣ | ಸಂತ್ರಸ್ತರೊಡನೆ ನಿಲ್ಲುವ ಸಮಾಜ ಕಟ್ಟಬೇಕಿದೆ

ಅಂಕಣ | ಸಂತ್ರಸ್ತರೊಡನೆ ನಿಲ್ಲುವ ಸಮಾಜ ಕಟ್ಟಬೇಕಿದೆ

Please login to join discussion

Recent News

ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು
Top Story

ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

by ನಾ ದಿವಾಕರ
August 22, 2025
ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

August 22, 2025
ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada