ಬಹಳ ವರ್ಷಗಳ ಬಳಿಕ ಬಾಲಿವಡ್ ನಟ ಅಕ್ಷಯ್ ಕುಮಾರ್ ಈಗ ಭಾರತೀಯ ಪೌರತ್ವ ಪಡೆದಿದ್ದಾರೆ. ಈ ವಿಷಯ ಬಹುತೇಕರ ಹುಬ್ಬೇರುವಂತೆ ಮಾಡುತ್ತದೆ. ಅಕ್ಷಯ್ ಅವರಿಗೆ ಭಾರತದ ಪೌರತ್ವ ಇರಲಿಲ್ಲವೇ? ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಾರೆ.
ಅಕ್ಷಯ್ ಕುಮಾರ್ ಅವರ ಪಂಜಾಬ್‌ನ ಅಮೃತಸನಲ್ಲಿ ಜನಿಸಿದರೂ ತಂದೆ ಹರಿ ಓಂ ಭಾಟಿಯಾ ಕೆನಡಾ ಮೂಲದವರಾಗಿದ್ದರು. ಆದ್ದರಿಂದ ಅಕ್ಷಯ್ ಕುಮಾರ್ ಕೆನಡಾ ಪೌರತ್ವ ಹೊಂದಿದ್ದರು. ಭಾರತದಲ್ಲಿ ನಟನಾಗಿದ್ದು ಅವರು ಬೇರೆ ದೇಶದ ಪೌರತ್ವ ಹೊಂದಿದ್ದಕ್ಕಾಗಿ ಹಲವಾರು ಟೀಕೆಗಳನ್ನು ಎದುರಿಸಿದರು.
ಅಕ್ಷಯ್ ಕುಮಾರ್ ಅವರಿಗೆ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವದ ದಿನ ಭಾರತದ ಪೌರತ್ವ ಪಡೆದಿರುವುದು ವಿಶೇಷ.
ಈ ಕುರಿತು ಅಕ್ಷಯ್ ಕುಮಾರ್ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಭಾರತದ ಪೌರತ್ವದ ನೋಂದಣಿ ದಾಖಲೆ ಹಂಚಿಕೊಂಡಿದ್ದಾರೆ.
“ಹೃದಯ ಮತ್ತು ಪೌರತ್ವ ಎರಡೂ ಹಿಂದೂಸ್ಥಾನವಾಗಿವೆ. ಸ್ವಾತಂತ್ರ್ಯ ದಿನದ ಶುಭಾಶಯಗಳು” ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಸುದ್ದಿವಾಹಿನಿ ಆಜ್‌ತಕ್, ರಾಷ್ಟ್ರಪ್ರೇಮ ಕುರಿತು ಕೇಳಿದ ಪ್ರಶ್ನೆಗೆ ಅಕ್ಷಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು.
“ಭಾರತ ನನಗೆ ಎಲ್ಲವೂ ಆಗಿದೆ. ನಾನು ಏನೆಲ್ಲ ಗಳಿಸಿದ್ದೇನೆಯೋ, ಏನೆಲ್ಲ ಪಡೆದಿದ್ದೇನೆಯೋ ಅದು ಇಲ್ಲಿಂದಲೇ. ಮರಳಿ ನೀಡುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ. ಆದರೆ ಜನರು ಏನನ್ನೂ ತಿಳಿಯದೆ ಈ ಬಗ್ಗೆ ಮಾತನಾಡಿದಾಗ ನಿಮಗೆ ಬೇಸರವಾಗುತ್ತದೆ” ಎಂದು ಅಕ್ಷಯ್ ಕುಮಾರ್ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ʼಕೈಲಾಸʼದಲ್ಲಿ ಕನ್ನಡ ಕಲರವ | ಜೋಗಯ್ಯ ಸಿನಿಮಾ ಹಾಡಿಗೆ ಡ್ರಮ್ಸ್ ಬಾರಿಸಿದ ನಿತ್ಯಾನಂದ ; ವಿಡಿಯೊ ವೈರಲ್
ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಅಕ್ಷಯ್ ಸಂದರ್ಶನ ನಡೆಸಿದ ನಂತರ ಅಕ್ಷಯ್ ಕುಮಾರ್ ಅವರ ಕೆನಡಾ ಪೌರತ್ವ ಚರ್ಚೆಯ ವಿಷಯವಾಗಿತ್ತು. ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ತಮ್ಮ ಕೆನಡಾ ಪಾಸ್‌ಪೋರ್ಟ್ ಬಗ್ಗೆ ಮಾತನಾಡಿದ್ದರು.
ಅಕ್ಷಯ್ ಕುಮಾರ್ ಅವರು 2019ರಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋವಿಡ್ ಪಿಡುಗಿನ ಹಿನ್ನೆಲೆ ತಡವಾಗಿತ್ತು.