ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರಾ..? ಅಥವಾ ಎರಡೂವರೆ ವರ್ಷದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರಾ..? ಎನ್ನುವ ಬಗ್ಗೆ ಸಾಕಷ್ಟು ಜನರಲ್ಲಿ ಅನುಮಾನವಿದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ.
ಈ ಬಗ್ಗೆ ಹೈಕಮಾಂಡ್ ಈಗಾಗಲೇ ಡಿ.ಕೆ.ಶಿವಕುಮಾರ್‌ಗೆ ಸಂದೇಶ ನೀಡಿದೆ. ಆದರೆ ಈ ಬಗ್ಗೆ ಬಹಿರಂಗ ಮಾಡದೆ ಇರುವಂತೆ ಸೂಚನೆ ಕೊಟ್ಟಿದೆ ಅಷ್ಟೆ. ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಡಿಸಿಎಂ ಡಿಕೆಶಿ ಬೆಂಬಲಿಗರು ಹೇಳುತ್ತಾರೆ.
ಆದರೆ ಅಧಿಕಾರ ಹಂಚಿಕೆಯ ಸೂತ್ರ ಯಾವುದೂ ಆಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಏನೂ ಹೇಳಿಲ್ಲ ಎನ್ನುವುದು ಸಿದ್ದರಾಮಯ್ಯ ಬೆಂಬಲಿಗರ ಮಾತು. ಆದರೆ ಈ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.
ಸಿಎಂಗೆ ಕುರುಬ ಸಮುದಾಯದ ಅಭಿಮಾನಿಗಳಿಂದ ನೇರ ಪ್ರಶ್ನೆ..!
ಸೋಮವಾರ ಸಂಜೆ ಕನಕ ಗುರುಪೀಠ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯಗೆ ಕುರುಬ ಸಮುದಾಯದ ಅಭಿಮಾನಿಗಳು ನೇರವಾಗಿ ಪ್ರಶ್ನೆ ಮಾಡಿದ್ದಾರೆ. 5 ವರ್ಷಗಳ ಕಾಲವೂ ಸಿದ್ದರಾಮಯ್ಯರೇ ಸಿಎಂ ಆಗಿ ಮುಂದುವರಿತ್ತಾರಾ..? ಐದು ವರ್ಷ ನೀವೇ ಸಿಎಂ ಆಗಿರಿ ಎಂದು ಅಭಿಮಾನಿಗಳು ಕೂಗಿದ್ದಾರೆ.
ಸಿದ್ದರಾಮಯ್ಯ ಭಾಷಣ ವೇಳೆ ಅಭಿಮಾನಿಗಳ ಒತ್ತಾಯ ಮಾಡಿದ್ದು, ಕುರುಬ ಸಮುದಾಯ ಈ ಸಲ ನಮಗೆ ಸಂಪೂರ್ಣ ಬೆಂಬಲ ಕೊಟ್ಟಿದೆ. ಎಲ್ಲ ಸಮುದಾಯವರೂ ಬೆಂಬಲ ಕೊಟ್ಟಿದೀರಿ. ನಿಮ್ಮ ಆಶೀರ್ವಾದದಿಂದ ನಾನು ಎರಡನೇ ಸಲ ಮುಖ್ಯಮಂತ್ರಿ ಆಗಿದೀನಿ. ಮೊದಲ ಸಲ ಐದು ವರ್ಷ ಸಂಪೂರ್ಣ ಅಧಿಕಾರ ಮುಗಿಸಿದೆ ಎಂದಿದ್ದಾರೆ. ಈ ವೇಳೆ ಈಗಲೂ ನೀವೇ ಐದು ವರ್ಷ ಸಿಎಂ ಆಗಿರಿ ಅಂತ ಅಭಿಮಾನಿಗಳು ಕೂಗಿದ್ದಾರೆ.
ಸಿದ್ದರಾಮಯ್ಯನವರು ಪ್ರಧಾನಿ ಆಗಬೇಕು ಎಂದು ಅಭಿಮಾನಿಗಳ ಹಾರೈಕೆ..!
ಮೊದಲ ಬಾರಿ 5 ವರ್ಷ ಪೂರೈಸಿದ್ದೀನಿ. ಎರಡನೇ ಬಾರಿಗೆ ಸಿಎಂ ಆಗಿದೀನಿ, ಜನರ ನಿರೀಕ್ಷೆ ಬಹಳ ಇದೆ. ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲು ನಿಮ್ಮ ಆಶೀರ್ವಾದ ಇದೇ ರೀತಿ ಮುಂದುವರಿಯಲಿ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ವೇಳೆ ನೀವು ಪ್ರಧಾನಿ ಆಗಬೇಕು ಅಂತ ಅಭಿಮಾನಿಗಳು ಕೂಗಿದ್ದಾರೆ.
“ಈಗ ಸಿಎಂ ಆಗಿದೀನಿ, ಕೆಲಸ ಮಾಡ್ತಿದೀನಿ. ಯೇ… ಆಗದಿರುವ ವಿಷಯ ಈಗ್ಯಾಕೆ ಬಿಡಯ್ಯ ಅಂತ ಅಭಿಮಾನಿಗಳನ್ನು ಪ್ರೀತಿಯಿಂದ ಗದರಿಸಿದ ಸಿಎಂ ಸಿದ್ದರಾಮಯ್ಯ ಭಾಷಣ ಮುಗಿಸಿ ಅಲ್ಲಿಂದ ಹೊರಟಿದ್ದಾರೆ. ಅಂದರೆ ಈ ಬಾರಿಯೂ ನಾನು 5 ವರ್ಷ ಸಿಎಂ ಆಗಿಯೇ ಇರುತ್ತೇನೆ” ಎಂಬ ಸುಳಿವು ನೀಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಕನಸಿಗೆ ಕೊಕ್ಕೆ ಬೀಳುತ್ತಾ..?
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಕ್ಕೆ ಭಾರೀ ಕಸರತ್ತು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮುಖ್ಯಮಂತ್ರಿ ಆಗಬೇಕು ಅನ್ನೋ ಕಾರಣಕ್ಕೆ ಅಧಿಕಾರಲ್ಲಿ ಪ್ರಾಮಾಣಿಕತೆಯನ್ನು ತರುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಜೊತೆಗೂ ಸೌಹಾರ್ಧ ರೀತಿಯಲ್ಲಿ ನಡೆದುಕೊಳ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಜತೆಗೆ ವಿರೋಧ ಪಕ್ಷದ ಶಾಸಕರನ್ನು ತನ್ನ ಕಡೆಗೆ ಸೆಳೆಯುವ ತಂತ್ರಗಾರಿಕೆಯನ್ನು ಡಿ.ಕೆ ಶಿವಕುಮಾರ್ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಶಾಸಕರ ಪ್ರತಿಭಟನೆ
ಜೆಡಿಎಸ್ ಹಾಗು ಬಿಜೆಪಿಯಲ್ಲಿ ಸ್ವಯಂ ಗೆದ್ದು ಬಂದಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಎರಡು ವರ್ಷ ಸಿದ್ದರಾಮಯ್ಯ ಇದೇ ರೀತಿ ಖಡಕ್ ಆಡಳಿತ ಕೊಟ್ಟರೆ ಅಧಿಕಾರದಿಂದ ಕೆಳಗಿಳಿಸಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಯಡಿಯೂರಪ್ಪನನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಅನುಭವಿಸುತ್ತಿರುವ ದಿನಗಳು ಕಾಂಗ್ರೆಸ್ಗೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಕೃಷ್ಣಮಣಿ