• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಬಿ.ಇಡಿ ಪದವಿ ಬೇಕಿಲ್ಲ: ಸುಪ್ರೀಂ ಕೋರ್ಟ್

ಪ್ರತಿಧ್ವನಿ by ಪ್ರತಿಧ್ವನಿ
August 13, 2023
in ಇದೀಗ, ಕರ್ನಾಟಕ, ದೇಶ
0
ಬಿ.ಇಡಿ
Share on WhatsAppShare on FacebookShare on Telegram

ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಬಿ.ಇಡಿ ಪದವಿ ಹೊಂದಿರುವವರು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಈ ಹಿಂದೆ ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.

ADVERTISEMENT

ಈ ಕುರಿತು ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗೂ ನ್ಯಾಯಮೂರ್ತಿ ಸುಧಾಂಶು ದುಲಿಯಾ ಅವರನ್ನೊಳಗೊಂಡ ಪೀಠವು, ಭಾರತೀಯ ಸಂವಿಧಾನದ 21ಎ ಮತ್ತು ಶಿಕ್ಷಣ ಹಕ್ಕು ಕಾಯಿದೆ 2009ರ ಅಡಿಯಲ್ಲಿ ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದರಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣವನ್ನು ಒಳಗೊಂಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆ.

ಈ ಸುದ್ದಿ ಓದಿದ್ದೀರಾ? ಆಗಸ್ಟ್ 15ರ ಬಳಿಕ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ.!?

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಬಿ.ಇಡಿ ಪದವಿ ಪಡೆದವರು ಪ್ರಾಥಮಿಕ ತರಗತಿಗಳಿಗೆ ಬೋಧನೆಗೆ ಅಗತ್ಯವಾದ ಮೂಲಭೂತ ಶಿಕ್ಷಣದ ಮಿತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

ಈ ಹಿನ್ನಲೆಯಲ್ಲಿ ಬಿ.ಇಡಿ ಪದವೀಧರರು 1 ರಿಂದ 5ನೇ ತರಗತಿಗೆ ಬೋಧನೆ ಮಾಡಲು ಅರ್ಹರಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪ್ರಾಥಮಿಕ ಹಂತದ ತರಗತಿಗಳಲ್ಲಿ ಕಲಿಸಲು ಬಿ.ಇಡಿ ಅರ್ಹತೆಯ ಅಗತ್ಯ ಇಲ್ಲ. ಈ ತರಗತಿಗಳಲ್ಲಿ ಕಲಿಸಲು ಭಿನ್ನವಾದ ಅರ್ಹತೆ ಅಗತ್ಯ ಇದೆ. ಪ್ರಾಥಮಿಕ ತರಗತಿಗಳಿಗೆ ಬೋಧಿಸಲು ಬಿ.ಇಡಿಯ ವಿದ್ಯಾರ್ಹತೆ ಇರುವವರು ಆಯ್ಕೆ ಆಗಿದ್ದರೆ ನೇಮಕವಾಗಿ ಎರಡು ವರ್ಷಗಳೊಳಗೆ ಬೋಧನೆಗೆ ಸಂಬಂಧಿಸಿದ ಕೋರ್ಸ್ ಒಂದನ್ನು ಪೂರ್ಣಗೊಳಿಸಬೇಕು ಎಂದು ಬೋಧನಾ ಶಿಕ್ಷಣ ರಾಷ್ಟ್ರೀಯ ಪರಿಷತ್ (ಎನ್‌ಸಿಟಿಇ) ಹೇಳಿರುವುದು ಇದನ್ನು ಪುಷ್ಟೀಕರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ಹೇಳಿದೆ.

ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡುವ ಮೂಲಕ ಸರ್ಕಾರವು ಸಂವಿಧಾನ ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ. ಶಿಕ್ಷಕರಿಗೆ ಸಂಬಂಧಿಸಿದಂತೆ ಬೋಧನಾ ಕೌಶಲವು ಅತ್ಯಂತ ಮಹತ್ವದ್ದಾಗಿದೆ ಎಂದು ಕೋರ್ಟ್ ಹೇಳಿದೆ.

ಬಿ.ಇಡಿ ಅನ್ನು ಅರ್ಹತೆಯಾಗಿ ನಿಗದಿ ಮಾಡಲು ಸರ್ಕಾರ ನೀಡಿರುವ ಒಂದೇ ಒಂದು ಸಮರ್ಥನೆ ಏನೆಂದರೆ, ಇದು “ಉನ್ನತ ಅರ್ಹತೆ’ ಎಂಬುದಾಗಿದೆ. ನೀತಿಗೆ ಸಂಬಂಧಿಸಿದ ನಿರ್ಧಾರ ಎಂದು ಪರಿಗಣಿಸಿದರೂ ಇದು ಸರಿಯಾದ ಕ್ರಮ ಅಲ್ಲ ಎಂದು ಕೋರ್ಟ್ ಹೇಳಿದೆ.

ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲು ಪ್ರಾಥಮಿಕ ಶಿಕ್ಷಣ ಡಿಪ್ಲೊಮಾವೇ (ಡಿ.ಎಡ್) ಅರ್ಹತೆಯೇ ಹೊರತು ಬಿ.ಇಡಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದ್ದಾಗಿಯೂ ಪೀಠ ತಿಳಿಸಿದೆ.

Tags: B.EdEducation SystemSupreme Court of Indiateachersಬಿ.ಇಡಿಸುಪ್ರೀಂಕೋರ್ಟ್
Previous Post

ಅಂಕಣ | ಸೌಜನ್ಯ ಕೇಸ್​ಗೆ ಕೇಸರಿ ಪಾಳಯ ಎಂಟ್ರಿ.. ದಿಕ್ಕುತಪ್ಪುತ್ತಾ ಹೋರಾಟ..?

Next Post

ಎನ್‌ಸಿಇಆರ್‌ಟಿ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್‌ ಮಹಾದೇವನ್‌ ಸ್ಥಾನ

Related Posts

ಅರ್ಮಾನ್ ಮಲ್ಲಿಕ್ ದನಿಯಲ್ಲಿ “ರಾಶಿ” ಸಾಂಗ್‌ ಬಂತು
ಕರ್ನಾಟಕ

ಅರ್ಮಾನ್ ಮಲ್ಲಿಕ್ ದನಿಯಲ್ಲಿ “ರಾಶಿ” ಸಾಂಗ್‌ ಬಂತು

by ಪ್ರತಿಧ್ವನಿ
August 14, 2026
0

ಬೆಂಗಳೂರು: ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ ಅವರು ನಿರ್ಮಿಸಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್...

Read moreDetails
ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ

ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ

August 14, 2026
ಅಂದು ಕಾರ್ ಕಾರ್‌ ಹಿಟ್ ಸಾಂಗು ಇಂದು ರನ್ ರನ್ ಸಾಂಗು!

ಅಂದು ಕಾರ್ ಕಾರ್‌ ಹಿಟ್ ಸಾಂಗು ಇಂದು ರನ್ ರನ್ ಸಾಂಗು!

August 14, 2026
NAB IFFM Awards Night 2026: ಕನ್ನಡ ನಟ ರಿಷಭ್ ಶೆಟ್ಟಿಗೆ ಗೌರವ

NAB IFFM Awards Night 2026: ಕನ್ನಡ ನಟ ರಿಷಭ್ ಶೆಟ್ಟಿಗೆ ಗೌರವ

August 14, 2026
‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

August 14, 2026
Next Post
ಸುಧಾ ಮೂರ್ತಿ

ಎನ್‌ಸಿಇಆರ್‌ಟಿ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್‌ ಮಹಾದೇವನ್‌ ಸ್ಥಾನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada