ಉತ್ತರಾಖಂಡ್‌ನ ಗರ್ವಾಲ್‌ನಲ್ಲಿಯ ದೇವಸ್ಥಾನವೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿಯರು ಶುಕ್ರವಾರ (ಆಗಸ್ಟ್ 4) ಭೇಟಿಯಾಗಿ ಮಾತನಾಡಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಶ್ರಾವಣ ಮಾಸದಲ್ಲಿ ಶಿವ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಅವರು ತಮ್ಮ ಪತಿಯೊಂದಿಗೆ ಪೌರಿ ಗರ್ವಾಲ್‌ನಲ್ಲಿರುವ ನೀಲಕಠ ಮಹಾದೇವ ದೇವಸ್ಥಾನಕ್ಕೆ ಆಗಮಿಸಿದರು.
ಬಳಿಕ ಅಲ್ಲಿಂದ ಕೊಠಾರಿ ಗ್ರಾಮದಲ್ಲಿಯ ಪಾರ್ವತಿ ದೇವಸ್ಥಾನಕ್ಕೆ ಆಗಮಿಸಿದರು. ಅಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿ ದೇವಿ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ಅವರ ಸಹೋದರಿ ವಸಂತಿಬೆನ್ ಮತ್ತು ಯೋಗಿ ಅವರ ಸಹೋದರಿ ಶಶಿ ದೇವಿ ಕೆಲಕಾಲ ಆತ್ಮೀಯ ಕ್ಷಣ ಕಳೆದಿದ್ದಾರೆ.
ವಸಂತಿಬೆನ್ ಮತ್ತು ಶಶಿ ದೇವಿ ಅವರ ಭೇಟಿಯ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ. ಇಬ್ಬರೂ ಪರಸ್ಪರ ಅಪ್ಪಿಕೊಂಡು ನಗು ಮೊಗದಿಂದ ಶುಭಾಶಯ ಕೋರಿಕೊಂಡರು. ಅಲ್ಲದೆ ಇಬ್ಬರೂ ಒಟ್ಟಿಗೆ ದೇವರ ದರ್ಶನ ಪಡೆದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಈಗ ವೈರಲ್ ಆಗಿದೆ. ಇಬ್ಬರೂ ಆತ್ಮೀಯತೆಯಿಂದ ಮಾತನಾಡಿಕೊಳ್ಳುತ್ತಿದ್ದರು. ದೇವಸ್ಥಾನಕ್ಕೂ ಒಟ್ಟಿಗೆ ತೆರಳಿ ದೇವರಿಗೆ ನಮಿಸಿದ್ದಾರೆ. ಇವರ ಈ ಆತ್ಮೀಯ ಕ್ಷಣಗಳು ವಿಡಿಯೊದಲ್ಲಿ ಸೆರೆಯಾಗಿವೆ.
ಅನೇಕ ಬಿಜೆಪಿ ನಾಯಕರು ಪ್ರಧಾನಿ ಮೋದಿ ಅವರ ಸಹೋದರಿ ಮತ್ತು ಯೋಗಿ ಅವರ ಸಹೋದರಿಯ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಾನಹಾನಿ ಪ್ರಕರಣ | ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ
ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಬಿಜೆಪಿ ನಾಯಕ ಅಜಯ್ ನಂದಾ, ವಸಂತಿಬೆನ್ ಮತ್ತು ಶಶಿ ದೇವಿ ಅವರ ಭೇಟಿ ಸರಳತೆ, ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ” ಎಂದು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಸಹೋದರಿಯರ ಬಂಧ ರಾಜಕೀಯವನ್ನು ಮೀರಿದೆ. ಇಬ್ಬರೂ ಭಾರತೀಯ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ. ಇವರ ನಡವಳಿಕೆಯು ಆದರ್ಶಪ್ರಾಯವಾಗಿದ್ದು ನಾವು ಇದಕ್ಕಾಗಿ ಹೆಮ್ಮೆಪಡುತ್ತೇವೆ” ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.