ಡಾ. ಜೆ ಎಸ್ ಪಾಟೀಲ.
ಸಿಎಬಿಇ ಸಮಿತಿಯ ವರದಿಯು ವಿದ್ಯಾಭಾರತಿ ಪಠ್ಯಪುಸ್ತಕಗಳಲ್ಲಿ ಮತಾಂಧತೆಯನ್ನು ಉತ್ತೇಜಿಸುವ ಹೇಳಿಕೆಗಳನ್ನು ಕಂಡುಹಿಡಿದಿದೆ, “ಮುಹಮ್ಮದ್ ಬಿನ್ ಖಾಸಿಮ್ ನಾಯಿಯಂತೆ ಸತ್ತನೆಂತಲುˌ ಶಿವಾಜಿ ಹಿಂದೂ ಧರ್ಮ, ಸಂಸ್ಕೃತಿ, ಗೋವು ಮತ್ತು ಬ್ರಾಹ್ಮಣರ ರಕ್ಷಕ ಎಂತಲೂ ಕರೆಯಲಾಗಿದೆಯಂತೆ. ವಿನಯ್ ಸುಲ್ತಾನ್ ಎಂಬ ಹೆಸರಿನ ಮಾಜಿ ವಿದ್ಯಾರ್ಥಿಯು ತಮ್ಮ ಶಾಲೆಯಲ್ಲಿ ಅನುಸರಿಸಿದ ಪಠ್ಯಕ್ರಮದ ಕುರಿತು, “ನಾನು ಓದುತ್ತಿದ್ದ ಆ ಎಲ್ಲಾ ವರ್ಷಗಳಲ್ಲಿ, ಹಕೀಕತ್ ರಾಯ್, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿಯಂತಹ ಮುಸ್ಲಿಮರ ವಿರುದ್ಧ ಹೋರಾಡಿದ ಪಾತ್ರಗಳ ಮೇಲೆ ಹೆಚ್ಚು ಕೇಂದ್ರೀಕರಿಸಲಾಗುತ್ತಿತ್ತು. ಅಲ್ಲಿ ಮಕ್ಕಳನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ಹಿಂದುತ್ವದ ಮನಸ್ಥಿತಿಗೆ ಕರೆದೊಯ್ಯುತ್ತಾಗುತ್ತದೆ. ಭೋಧಮಾಲಾ ೧೦ ರಲ್ಲಿ ಇರಾನಿನ ಚಕ್ರವರ್ತಿˌ ಪುರುಷ ಮಹಾನ್, ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್, ಅರಬ್ಬರ ಬಹು ದಾಳಿಗಳು, ಮಹಮ್ಮದ್ ಘಜ್ನಿ, ಮುಹಮ್ಮದ್ ಘೋರಿ, ಅಲಾವುದ್ದೀನ್ ಖಿಲ್ಜಿ, ಇಬ್ರಾಹಿಂ ಲೋದಿ, ವಾಸ್ಕೊ ಡಿ ಗಾಮಾ, ಇವರ ದಾಳಿಗಳನ್ನು ಒಳಗೊಂಡ ಭಾರತದ ಮೇಲಿನ ವಿದೇಶಿ ಆಕ್ರಮಣಗಳು ಮತ್ತು ಅದಕ್ಕೆ ಪ್ರತಿದಾಳಿಗಳ ಕುರಿತು ವಿವರಿಸಲಾಗಿದೆಯಂತೆ.

೧೯೪೭ ರಲ್ಲಿ ಭಾರತದ ಒಂದು ಭಾಗವಾಗಿದ್ದ ಪಾಕಿಸ್ತಾನವು ನಮ್ಮ ಶತ್ರುವಾಯಿತು. ಅದು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಬುಡಕಟ್ಟು ಹುಡುಗರ ರೂಪದಲ್ಲಿ ನಮ್ಮ ಮೇಲೆ ಅಘೋಷಿತ ಆಕ್ರಮಣ ಮಾಡಿತು. ಆಜಾದ್ ಕಾಶ್ಮೀರದ ಹೆಸರಿನಲ್ಲಿ ಅದು ಸ್ವಲ್ಪಮಟ್ಟಿಗೆ ಯಶಸ್ಸನ್ನು ಕಂಡಿದೆ, ಆದರೆ ಭಾರತೀಯ ಪಡೆಗಳು ಈ ಆಕ್ರಮಣಕಾರರನ್ನು ಓಡಿಸಿದೆ. ಬೋಧಮಾಲಾ ಪುಸ್ತಕಗಳು ಹಲ್ದಿಘಾಟಿ ಕದನದ ಘಟನೆ ತಪ್ಪಾಗಿ ಕಲಿಸುತ್ತವೆ. ಈ ಭೀಕರ ಯುದ್ಧದಲ್ಲಿ ರಾಣಾ ಪ್ರತಾಪ್ ಮೊಘಲ್ ಸೈನಿಕರನ್ನು ಸೋಲಿಸಿದ ಎಂದು ತಪ್ಪಾಗಿ ಬರೆಯಲಾಗಿದೆಯಂತೆ. ಸಿಎಬಿಇ ಸಮಿತಿ ವರದಿಯಲ್ಲಿ, “ಈ ಪಠ್ಯಪುಸ್ತಕಗಳು ಇತರರ ವಿರುದ್ಧವಾಗಿ ಕೆಲವು ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳ ಪಾತ್ರವನ್ನು ಉತ್ಪ್ರೇಕ್ಷಿಸುತ್ತವೆ ಮತ್ತು ಮೌಲ್ಯೀಕರಿಸುತ್ತವೆ. ಗಾಂಧಿ ಮತ್ತು ನೆಹರು ಅವರನ್ನು ರಾಷ್ಟ್ರೀಯ ನಾಯಕರು ಎನ್ನುವುದಕ್ಕೆ ಪರ್ಯಾಯವಾಗಿ, ಹಿಂದುತ್ವದ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ. ಹೆಚ್ಚಿನ ಪುಸ್ತಕಗಳು ಮುಸ್ಲಿಂ ಲೀಗ್ ಒಂದು ಕೋಮುವಾದಿ ಸಂಘಟನೆ ಎಂದು ಸರಿಯಾಗಿಯೆ ಉಲ್ಲೇಖಿಸುತ್ತವೆ ಆದರೆ ಆರ್‌ಎಸ್‌ಎಸ್‌ನ ಕೋಮು ದೃಷ್ಟಿಕೋನದ ಕುರಿತು ಉಲ್ಲೇಖ ಈ ಪುಸ್ತಕಗಳಲ್ಲಿ ಕಂಡುಬರುವುದಿಲ್ಲ ಎಂದು ವರದಿ ಸ್ಪಷ್ಟಪಡಿಸುತ್ತದೆ.
ವಿದ್ಯಾಭಾರತಿ ಪ್ರಕಟಿಸುವ ದೇವಪುತ್ರ ಮಾಸಪತ್ರಿಕೆಯ ಕುರಿತು ಪುಷ್ಪೇಂದ್ರ ಎಂಬ ಮಾಜಿ ವಿದ್ಯಾರ್ಥಿ: “ಪತ್ರಿಕೆಯು ಗೋಲ್ವಾಲ್ಕರ್, ಸಾವರ್ಕರ್, ಹೆಡ್ಗೆವಾರ್ ಮತ್ತು ಇತರ ಆರ್‌ಎಸ್‌ಎಸ್ ಸಿದ್ಧಾಂತವನ್ನು ಪ್ರತಿಪಾದಿಸುವ ಹಿಂದುತ್ವವಾದಿ ನಾಯಕರನ್ನು ಹೊಗಳುವ ಲೇಖನ ಪ್ರಕಟಿಸುತ್ತಿತ್ತು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ನ ಕೊಡುಗೆಯ ಬಗ್ಗೆ ಪತ್ರಿಕೆಯಲ್ಲಿ ಹೆಮ್ಮೆಯ ಲೇಖನ ಪ್ರಕಟಿಸುತ್ತಿತ್ತು. ನೆಹರೂ ಅವರು ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಿದ್ದಕ್ಕಾಗಿ ಅವರನ್ನು ದ್ವೇಷಿಸುವ ಲೇಖನಗಳು ಬಂದಿದ್ದವು ಎಂದಿದ್ದಾರೆ. ಆರ್‌ಎಸ್‌ಎಸ್ ಶಾಲೆಗಳಲ್ಲಿ ಜನಪ್ರಿಯವಾಗಿರುವ ಹಲವಾರು ವದಂತಿಗಳನ್ನು ಅವರು ಬಹಿರಂಗಪಡಿಸುತ್ತಾ: “ನಮ್ಮ ಶಿಕ್ಷಕರು ಗಾಂಧಿಜಿಯ ಬಗ್ಗೆ ಹೆಚ್ಚು ಗೌರವವಿಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದರು. ಸರ್ದಾರ್ ಪಟೇಲ್ ಇಲ್ಲದಿದ್ದರೆ ಈ ದೇಶವವನ್ನು ಗಾಂಧಿಜಿ ಮತ್ತು ನೆಹರೂ ಅವರು ಇನ್ನೂ ತುಂಡುತುಂಡಾಗಿಸುತ್ತಿದ್ದರು ಎಂದು ಸುಳ್ಳು ಹೇಳುತ್ತಿದ್ದರು. ಅಲ್ಲದೆ, ಭಗತ್ ಸಿಂಗ್ ಬದುಕುವುದು ಗಾಂಧಿಗೆ ಇಷ್ಟವಿರಲಿಲ್ಲ ಎಂದು ಅವರು ಹೇಳುತ್ತಿದ್ದರು. ಗಾಂಧಿಜಿ ಪ್ರಯತ್ನಿಸಿದ್ದರೆ, ಭಗತ್ ಸಿಂಗ್ ಅವರ ಜೀವ ಉಳಿಸಬಹುದಿತ್ತು ಎಂದು ಮಾತನಾಡುವ ಬಗ್ಗೆ ಅಲ್ಲಿನ ಬಹುತೇಕ ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರಂತೆ.

ನೆಹರೂ ಬಗ್ಗೆ ಅಲ್ಲಿನ ಶಿಕ್ಷಕರು,“ಅವರೊಬ್ಬ ದುಬಾರಿ ನಾಯಕˌ ಅವರ ಬಟ್ಟೆಗಳನ್ನು ಲಾಂಡ್ರಿಗಾಗಿ ಲಂಡನ್‌ಗೆ ಕಳಿಸಲಾಗುತ್ತಿತ್ತು ಎಂದು ಮಾತನಾಡುತ್ತಿದ್ದರಂತೆ. ನೆಹರು ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಾ ˌ ಬ್ರಿಟಿಷರು ನೆಹರು ಅವರನ್ನು ಹೆಚ್ಚು ದಿನ ಜೈಲಿನಲ್ಲಿಡದೆ ಏಕೆ ಬಿಡುಗಡೆ ಮಾಡುತ್ತಿದ್ದರು? ಅವರು ಇತರರಂತೆ ಜೈಲಿನಲ್ಲಿ ಏಕೆ ಸಾಯಲಿಲ್ಲ? ಏನಾದರೂ ಕಾರಣವಿರಬೇಕು ಎಂತಲುˌ ಅಲ್ಲದೆ, ನೆಹರೂ ಅವರ ಪೂರ್ವಜರು ಅಫ್ಘಾನಿಸ್ತಾನದ ಮುಸ್ಲಿಮರಾಗಿದ್ದರು ಎಂದು ಸುಳ್ಳು ಹೇಳುತ್ತಿದ್ದರಂತೆ. ತಿಲಕ್ ಪಾಲ್ ಎಂಬ ಹೆಸರಿನ ಮಾಜಿ ವಿದ್ಯಾರ್ಥಿಯು ತನ್ನ ಶಿಕ್ಷಕರು ಗೋಡ್ಸೆಯ ಬಗ್ಗೆ ಉನ್ನತ ಗೌರವ ಹೊಂದಿದ್ದರು ಮತ್ತು ಅತನನ್ನು ಒಬ್ಬ ಕ್ರಾಂತಿಕಾರಿ ಎಂದು ಪರಿಗಣಿಸುತ್ತಿದ್ದರು. ಗೋಡ್ಸೆ ಗಾಂಧಿಯನ್ನು ಕೊಲ್ಲದೇ ಹೋಗಿದ್ದರೆ ಗಾಂಧಿ ಹಿಂದೂಗಳಿಗೆ ಇನ್ನಷ್ಟು ಹಾನಿಯನ್ನುಂಟುಮಾಡುತ್ತಿದ್ದರು ಎಂದು ಅವರು ಹೇಳುತ್ತಿದ್ದರು. ಗೋಡ್ಸೆ ಗಾಂಧಿಜಿಯನ್ನು ಕೊಲ್ಲಲು ಸೂಕ್ತ ಕಾರಣ ಹೊಂದಿದ್ದರು. ಯಾರೂ ಸುಮ್ಮನೆ ಮತ್ತೊಬ್ಬರನ್ನು ಕೊಲ್ಲುವುದಿಲ್ಲ. ಉದ್ದೇಶಪೂರ್ವಕವಾಗಿ ಮರೆಮಾಚಲ್ಪಟ್ಟ ಅನೇಕ ಸಂಗತಿಗಳಿವೆ ಎಂದು ತರಗತಿಯಲ್ಲಿ ಹೇಳುತ್ತಿದ್ದ ಬಗ್ಗೆ ದಿ ವೈರ್‌ಗೆ ಹೇಳಿದ್ದಾರಂತೆ.
ಈ ಸುದ್ದಿ ಓದಿದ್ದೀರಾ? ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯಾದ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್
ಸಿಎಬಿಇ ಸಮಿತಿಯ ವರದಿಯು ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಒಲವು ಹೊಂದಿರುವ ಸಂಸ್ಥೆಗಳು ಕೊಳೆಗೇರಿ ಸಾಕ್ಷರತಾ ಕೇಂದ್ರಗಳಲ್ಲಿ ಪುಸ್ತಕಗಳನ್ನು ವಿತರಿಸುತ್ತವೆ, ಆದರೆ ಈ ಪುಸ್ತಕಗಳ ಮೂಲವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ (ಅವು ಸುಲಭವಾಗಿ ಲಭ್ಯವಾಗಲ್ಲ ಮತ್ತು ನೇರವಾಗಿ ವಿತರಿಸಲಾಗುತ್ತಿದೆ). ಉದಾಹರಣೆಗೆ, ಇನ್ಫೋಸಿಸ್ ಲೈಬ್ರರಿ ಕಾರ್ಯಕ್ರಮವು ಸರಕಾರಿ ಮತ್ತು ಸರಕಾರೇತರ ಶಾಲೆಗಳಲ್ಲಿ “ಶ್ರೇಷ್ಠ ಭಾರತೀಯರ” ಜೀವನಚರಿತ್ರೆಯ ಪುಸ್ತಕಗಳನ್ನು ವಿತರಿಸುತ್ತದೆ. ಈ ಪುಸ್ತಕಗಳು ಮುಖ್ಯವಾಗಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ರಾಷ್ಟ್ರೋತ್ಥಾನ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿದ್ದು, ವಿಶೇಷವಾಗಿ ಮೇಲ್ಜಾತಿ ಹಿಂದೂ ಐಕಾನ್‌ಗಳುˌ ಧಾರ್ಮಿಕ ಮತ್ತು ಪೌರಾಣಿಕ ವ್ಯಕ್ತಿಗಳ ಚರಿತ್ರೆಗಳನ್ನು ಈ ಪುಸ್ತಕಗಳು ಒಳಗೊಂಡಿವೆ. ಇದರಲ್ಲಿ ಕರ್ನಾಟಕದ ಹಿಂದೂ ಆಡಳಿತಗಾರರು ಮತ್ತು ಬೆರಳೆಣಿಕೆಯಷ್ಟು ಸುಧಾರಕರ ಕುರಿತು ಪುಸ್ತಕಗಳಿವೆ. ಈ ಸಂಸ್ಥೆಯು ಹಿಂದುತ್ವವಾದಿ ನಾಯಕರ ಕುರಿತು ಮಾತ್ರ ಪುಸ್ತಕ ಪ್ರಕಟಿಸುತ್ತಿದ್ದು ರಾಷ್ಟ್ರ ನಾಯಕರಾದ ಗಾಂಧಿ ಮತ್ತು ನೆಹರೂ ಕುರಿತು ಪುಸ್ತಕ ಬರೆಯುವುದಿಲ್ಲ ಎನ್ನುತ್ತದೆ ವರದಿ. ಒಟ್ಟಾರೆ ಇದು ಹಿಂದುತ್ವ ಬಿತ್ತುವ ಹುನ್ನಾರದ ಭಾಗವಷ್ಟೆ.
ವಿನಯ್ ಸುಲ್ತಾನ ಎಂದ ಮಾಜಿ ವಿದ್ಯಾರ್ಥಿಯು: “ನಮ್ಮ ಶಾಲೆಯ ಶಿಕ್ಷಕರು ಗೋಡ್ಸೆ ಗಾಂಧಿಯನ್ನು ಕೊಲ್ಲಿದ್ದು ಸರಿಯಾಗಿದೆ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ನೆಹರೂ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಗಾಂಧಿ ಅವರು ಬಯಸಿದ್ದರಿಂದ ದೇಶ ವಿಭಜನೆಯಾಯಿತು ಎನ್ನುತ್ತಿದ್ದರು. ‘ಮೈನೆ ಗಾಂಧಿ ಕೊ ಕ್ಯೂ ಮಾರಾ’ ಮತ್ತು ಇತರ ಆರ್‌ಎಸ್‌ಎಸ್ ರಚಿಸಿದ ಕೋಮುವಾದಿ ಸಾಹಿತ್ಯದ ಪುಸ್ತಕಗಳನ್ನು ಶಾಲೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿತ್ತು ಎನ್ನುತ್ತಾರೆ ವಿನಯ್.
ಮುಂದುವರೆಯುವುದು…


