ಈ ವರ್ಷದ ಅಂದರೆ ೨೦೨೩ ಜನೆವರಿಯಿಂದ ಜೂನ್ ತಿಂಗಳ ಕೊನೆಯ ತನಕ ಒಟ್ಟು ೮೭ˌ೦೦೦ ಜನರು ಭಾರತದ ನಾಗರಿಕತೆಯನ್ನು ತ್ಯಜಿಸಿರುವುದಾಗಿ ಶುಕ್ರವಾರ ಸಂಸತ್ತಿನ ಸದನದಲ್ಲಿ ಮೋದಿ ಸರಕಾರ ಹೇಳಿಕೆ ನೀಡಿದೆ. ಕಾಂಗ್ರೆಸ್ ಸಂಸದ ಕೆ ಚಿದಂಬರಮ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜಯಶಂಕರ್ ಅವರು ಈ ಕುರಿತ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಸಚಿವರು ತಮಗೆ ಕೇಳಲಾದ ಪ್ರಶ್ನೆಗೆ ಸುದೀರ್ಘವಾದ ಉತ್ತರವನ್ನು ಅಂಕಿಅಂಶಗಳ ಸಮೇತ ನೀಡಿದ್ದಾರೆ.

ಸಂಸತ್ತಿನಲ್ಲಿ ತಮಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಜಯಶಂಕರ ಅವರು ೨೦೨೨ ರಲ್ಲಿ ೨.೧೫ ಲಕ್ಷ ˌ ೨೦೨೧ ರಲ್ಲಿ ೧.೬೩ ಲಕ್ಷ ˌ ಮತ್ತು ೨೦೨೦ ರಲ್ಲಿ ೮೫ˌ೨೫೬ ಜನರು ತನ್ನ ಭಾರತೀಯ ನಾಗರಿಕತೆಯನ್ನು ತ್ಯಜಿಸಿರುವುದಾಗಿ ಹೇಳಿದ್ದಾರೆ. ಮುಂದುವರೆದ ಸಚಿವರು ೨೦೧೯ ರಲ್ಲಿ ೧.೪೪ ಲಕ್ಷ ˌ ೨೦೧೮ ರಲ್ಲಿ ೧.೩೪ ಲಕ್ಷ ˌ ೨೦೧೭ ರಲ್ಲಿ ೧.೩೩ ಲಕ್ಷ ˌ ೨೦೧೬ ರಲ್ಲಿ ೧.೪೧ˌ ೨೦೧೫ ರಲ್ಲಿ ೧.೩೧ ಮತ್ತು ೨೦೧೪ ರಲ್ಲಿ ೧.೨೯ ಲಕ್ಷ ಜನರು ಭಾರತಿಯ ಪೌರತ್ವ ಬಿಟ್ಟುಕೊಟ್ಟಿರುವುದಾಗಿ ತಿಳಿಸಿದ್ದಾರೆ. ಅಂದರೆ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ೨೦೧೪ ರಿಂದ ಒಟ್ಟು ೧೩.೭೫ ಲಕ್ಷ ಜನರು ಭಾರತದ ಪೌರತ್ವ ಬಿಟ್ಟಂತಾಗಿದೆ.

ಕಾನೂನಿನ ಪ್ರಕಾರ ಭಾರತೀಯರಿಗೆ ದ್ವಿಪೌರತ್ವ ನಿಷೇಧಿಸಲಾಗಿದೆ. ಪಾಸಪೋರ್ಟ್ ಅಧಿನಿಯಮದ ಅನ್ವಯ ವಿದೇಶದಲ್ಲಿ ನೆಲೆಸಿರುವ ಭಾರತಿಯರು ತಮ್ಮ ಭಾರತದ ಪೌರತ್ವವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಪಾಪಸ್ಸು ಮಾಡಬೇಕು. ಶುಕ್ರವಾರ ಸಂಸತ್ತಿನ ಸದನದಲ್ಲಿ ಉತ್ತರಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ ಅವರು ಕಳೆದ ಎರಡು ದಶಕಗಳಲ್ಲಿ ಭಾರತಿಯರ ವಿದೇಶ ಪಲಾಯನ ಅಧಿಕಗೊಂಡಿದೆ. ಭಾರತದಲ್ಲಿ ತಮಗೆ ಉತ್ತಮ ಭವಿಷ್ಯವಿಲ್ಲದ ಕಾರಣವನ್ನು ನಾವು ಊಹಿಸಬಹುದಾಗಿದೆ. ಸಚಿವರು ಭಾರತೀಯರ ಈ ವಿದೇಶ ಪಲಾಯನವನ್ನು ಸಮರ್ಥಿಸಿ ˌತಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಅಲ್ಲಿಯೆ ನೆಲೆಸಲು ಇಷ್ಟಪಡುತ್ತಾರೆ ಎಂದಿದ್ದಾರೆ.
ಅನಿವಾಸಿ ಭಾರತೀಯರು ತಾವು ಉದ್ಯೋಗಿಗಳಾಗಿರುವ ದೇಶಗಳ ಪೌರತ್ವ ಪಡೆಯುತ್ತಿದ್ದು ಭಾರತೀಯ ಪೌರತ್ವವನ್ನು ಬಿಟ್ಟುಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಹೀಗೆ ವಿದೇಶಗಳಲ್ಲಿ ತಮ್ಮ ಭವಿಷ್ಯವನ್ನು ಸುಧಾರಿಸಿಕೊಂಡಿರುವ ಅನಿವಾಸಿ ಭಾರತೀಯ ಸಮುದಾಯದಿಂದ ಭಾರತಕ್ಕೆ ಒಳ್ಳೆಯ ನೆರವು ದೊರೆಯಲಿದೆ ಎಂದು ಸಚಿವರು ಅಸಂಬದ್ಧವಾಗಿ ಈ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೋದಿಯ ಅಸಮರ್ಥ ಆಡಳಿತ ಭಾರತೀಯರು ಪೌರತ್ವ ತೊರೆಯಲು ಕಾರಣ ಎನ್ನುವುದನ್ನು ಸಚಿವರು ಮರೆಮಾಚಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
~ಡಾ. ಜೆ ಎಸ್ ಪಾಟೀಲ.