ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಬಿರುಸು ಪಡೆದು ಹಲವು ಜಿಲ್ಲೆಗಳಲ್ಲಿ ಈಗಾಗಲೇ ಉತ್ತಮ ಮಳೆಯಾಗಿದೆ, ಇನ್ನು ಕೆಲ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯಿಂದ ಸಣ್ಣ ಪ್ರಮಾಣದ ತೊಂದರೆಗಳು ಉಂಟಾಗಿವೆ ಆದರೆ ಈ ಬಾರಿ ಮಳೆಯ ಸಮಸ್ಯೆ ಹೆಚ್ಚಾಗಿ ಕಾಡಿಲ್ಲ ಅನ್ನೋದು ಸತ್ಯ ಹಾಗೇನೇ ಮಳೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಬಿರುಸುಗೊಳ್ಳಲಿದೆ ಅಂತ ಹೇಳಲಾಗುತ್ತಿದೆ.

ಈಗಾಗಲೇ ಕರಾವಳಿ ಭಾಗದಲ್ಲಿ ( coastal area ) ಮಳೆ ( Rain ) ಹೆಚ್ಚಾಗಿದ್ದು ಮಲೆನಾಡು ಪ್ರದೇಶಗಳಲ್ಲಿ ಕೂಡ ಮಳೆಯ ಅಬ್ಬರ ಕೊಂಚಮಟ್ಟಿಗೆ ಜೋರಾಗಿದೆ ಸದ್ಯಕ್ಕೆ ಚಿಕ್ಕಮಗಳೂರಿನಲ್ಲಿ ( chikkamagaluru ) ಕೂಡ ಮಳೆ ಬಿರುಸಿ ಪಡೆದುಕೊಂಡಿರುವುದು ಜಿಲ್ಲೆಯ ಕಾಫಿ ಬೆಳೆಗಾರರಲ್ಲಿ ( coffee planters ) ಸಂತಸವನ್ನು ಉಂಟುಮಾಡಿದೆ ಇದರ ನಡುವೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಸಣ್ಣ ಪ್ರಮಾಣದ ಹಾನಿಗಳು ಉಂಟಾಗಿವೆ.

ಹೀಗೆ ಮಳೆ ಪೀಡಿತ ಪ್ರದೇಶಗಳಿಗೆ ಇಂದು ಇಂಧನ ಸಚಿವ ಕೆ.ಜೆ ಜಾರ್ಜ್ ( K. J. George, Energy Minister of Karnataka ) ಭೇಟಿ ನೀಡಿದ್ದು, ಮಳೆಯಿಂದ ತೊಂದರೆಗೆ ಈಡದವರ ಕುಟುಂಬಗಳಿಗೆ ಧೈರ್ಯವನ್ನು ಹೇಳಿದ್ದಾರೆ ಇದರ ಜೊತೆಗೆ ಸಂಕಷ್ಟಕ್ಕೆ ಸಿಲುಕಿದ ಹಲವು ಕುಟುಂಬಗಳಿಗೆ ತಕ್ಷಣಕ್ಕೆ ಸ್ಪಂಧಿಸುವಂತೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು ಮಳೆಯಿಂದ ಸಂಕಷ್ಟಗಳಿಗೆ ಒಳಗಾಗುವ ಯಾರೇ ಆಗಲಿ ಅವರಿಗೆ ತಕ್ಷಣದಲ್ಲಿ ಸ್ಪಂದಿಸಬೇಕು ಎಂದು ಇವತ್ತು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ. ಒಟರಿಯಾಗಿ ಇಂದು ಸಚಿವ ಕೆಜಿ ಜಾರ್ಜ್ ಮಳೆಯಿಂದ ಉಂಟಾಗುವ ಹಾನಿಗಳನ್ನು ತಡೆಯಲು ಸರ್ಕಾರ ಈಗಾಗಲೇ ಎಲ್ಲಾ ರೀತಿಯಾದ ತಯಾರಿಗಳನ್ನು ನಡೆಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ






