ವಿಧಾನಸೌಧದಲ್ಲಿ ( vidhana soudha ) ಪ್ರತಿಭಟನೆ ( protest ) ವೇಳೆ, ಬಿಜೆಪಿ ( BJP ) ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ರನ್ನ ( basanagouda patil yatnal ) ಆಸ್ಪತ್ರಗೆ ದಾಖಲಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ( cm siddaramaiah ) ಹಾಗೂ ಮಾಜಿ ಸಿಎಂ ಯಡಿಯೂರಪ್ಪ ( former chief minister yediyurappa ) ಆರೋಗ್ಯ ವಿಚಾರಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಕೆಲ ಶಾಸಕರು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದರು, ಹೀಗಾಗಿ ಅಗೌರವ ತೋರಿದ 10 ಮಂದಿ ಬಿಜೆಪಿ ಶಾಸಕರನ್ನ ಸ್ಪೀಕರ್ ಯು.ಟಿ. ಖಾದರ್ ( U. T. Khader ) ಅಮಾನತ್ತು ಮಾಡಿದ್ದರು, ಈ ವೇಳೆ ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳು ( marshalls ) ಶಾಸಕರನ್ನ ( MLAs ) ಹೊರ ಹಾಕುವ ಸಮಯದಲ್ಲಿ ಕೆಲ ಶಾಸಕರಿಗೂ ಹಾಗೂ ಮಾರ್ಷಲ್‌ಗಳಿಗೂ ಜಟಾಪಟಿ ಏರ್ಪಟ್ಟಿದ್ದು, ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಕುಸಿದು ಬಿದ್ದಿದ್ದಾರೆ. ಬಳಿಕ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನ ( first aid ) ವಿಧಾನಸೌಧದಲ್ಲಿ ನೀಡಿ ತದ ನಂತರ ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಆಸ್ಪತ್ರೆಗೆ ದಾಖಲಿಸಲಾಯಿತು.
ಇನ್ನು ಯತ್ನಾಳ್ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಗೆ ಭೇಟಿ ಕೊಟ್ಟ ಮಾಜಿ ಸಿಎಂ ಯಡಿಯೂರಪ್ಪ ಯತ್ನಾಳ್ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ, ಬಳಿಕ ತಮ್ಮ ಆರೋಗ್ಯದ ಕಡೆ ಗಮನ ಕೊಡುವಂತೆ ಯಡಿಯೂರಪ್ಪ ಯತ್ನಾಳ್‌ಗೆ ಸೂಚಿಸಿದ್ದಾರೆ.
ಇದಾದ ನಂತರ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ. ಈ ವೇಳೆ ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದಿರುವ ಸ್ಪೀಕರ್ ಹಾಗೂ ಸಿಎಂ ಯತ್ನಾಳ್ ಅವರಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆಯನ್ನ ಕೂಡ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ತಮ್ಮ ಆರೋಗ್ಯದ ಕುರಿತು ಟ್ವಿಟ್ ಮಾಡಿದರುವ ಯತ್ನಾಳ್ “ನಾನು ಸಂಪೂರ್ಣ ಗುಣಮುಖನಾಗಿದ್ದೆನೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ ಜೈ ಶ್ರೀರಾಮ” ಎಂದು ಉಲ್ಲೇಖಿಸಿದ್ದಾರೆ. ಒಟ್ಟಾರೆಯಾಗಿ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಧಾರಿಸಿಕೊಂಡಿದ್ದು, ಅವರಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂದು ಅವರ ಅಭಿಮಾನಿಗಳು ಸೇರಿದ ಹಾಗೆ ಹಿತೈಷಿಗಳು ಆಶಿಸುತ್ತಿದ್ದಾರೆ.
