• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಜೈನ ಮುನಿ ಹತ್ಯೆ ಕೇಸ್‌‌ನಲ್ಲಿ BJP ಲಾಭಕ್ಕೆ ಯತ್ನಿಸುತಿದ್ಯಾ..?

ಕೃಷ್ಣ ಮಣಿ by ಕೃಷ್ಣ ಮಣಿ
July 12, 2023
in ಅಂಕಣ, ಅಭಿಮತ
0
ಜೈನ ಮುನಿ ಹತ್ಯೆ ಕೇಸ್‌‌ನಲ್ಲಿ BJP ಲಾಭಕ್ಕೆ ಯತ್ನಿಸುತಿದ್ಯಾ..?
Share on WhatsAppShare on FacebookShare on Telegram

ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನ ಮುನಿ ಕಾಮಕುಮಾರರ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಜೈನ ಸಮುದಾಯದ ಜನರು ಮುನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೂ ಸರ್ಕಾರ ಹಾಗು ಪೊಲೀಸರ ಕೆಲಸವನ್ನು ಜೈನ ಮುನಿಗಳು ಸೇರಿದಂತೆ ಜೈನ ಸಮುದಾಯ ಮೆಚ್ಚಿಕೊಂಡಿದೆ. ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ ದೂರು ನೀಡಲಾಗಿತ್ತು. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ, ಸತ್ಯವನ್ನು ಬಹಿರಂಗ ಮಾಡಿದ್ದಾರೆ. ಪೊಲೀಸರು ಯಾವುದೇ ಸಮಸ್ಯೆ ಮಾಡ್ತಿಲ್ಲ. ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡಿದ್ದಾರೆ ಎನ್ನುವ ಮಾತನಾಡಿದ್ದಾರೆ. ಆದರೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌‌ ಕಟೀಲ್‌ ನೇತೃತ್ವದಲ್ಲಿ ಇಂದು ಜೈನಮುನಿ ಕಾಮಕುಮಾರ ಚಿಕ್ಕೋಡಿಯ ನಂದಿ ಹಿರೇಕೋಡಿ ಆಶ್ರಮಕ್ಕೆ ಭೇಟಿ ನೀಡಿ ಜೈನು ಮುನಿಗಳ ಹತ್ಯೆ, ಪೊಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ. ಜೈನ ಮುನಿಗಳ ಹತ್ಯೆ ಬಗ್ಗೆ ಬಿಜೆಪಿ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಬಟಾಬಯಲಾಗಿದೆ. ನಳೀನ್‌ ಕುಮಾರ್‌ ಕಟೀಲ್‌ ಸಮ್ಮುಖದಲ್ಲೇ ಈ ರೀತಿಯ ಘಟನೆಯೊಂದು ನಡೆದಿರುವುದು, ಬಿಜೆಪಿ ನಾಯಕರ ಮೂಗಿನ ನೇರದಲ್ಲೇ ರಾಜಕೀಯ ಲಾಭದ ಸಂಚು ಅನಾವರಣ ಆಗಿದೆ.

ADVERTISEMENT

ಕಟೀಲ್‌ ಎದುರು ಶಾಸಕ ಸಂಜಯ್‌ ಪಾಟೀಲ್‌ ಹೇಳಿದ್ದೇನು..?

ನಳೀನ್‌ ಕುಮಾರ್‌‌ ಕಟೀಲ್‌ ಜೊತೆಗೆ ಆಶ್ರಮಕ್ಕೆ ತೆರಳಿದ್ದ ಬಿಜೆಪಿ ಶಾಸಕ ಸಂಜಯ್ ಪಾಟೀಲ್‌ ಟ್ರಸ್ಟ್ ಕಮಿಟಿ ಅಧ್ಯಕ್ಷರನ್ನು ಕರೆದಿದ್ದು, ಮಾತುಕತೆ ಹೀಗಿದೆ ‘ಹೇ ಅಧ್ಯಕ್ಷರೇ.. ತನಿಖೆ ಹೇಗೆ ನಡೀತಿದೆ..?’ ‘ನಾಲ್ಕು ತಾಸಿನಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವಿಚಾರದಲ್ಲಿ ರಾಜ್ಯ ಪೊಲೀಸರು ಒಳ್ಳೇ ಕೆಲಸ ಮಾಡ್ತಿದ್ದಾರೆ. ಪಾರದರ್ಶಕವಾಗಿ ತನಿಖೆ ಆಗ್ತಿದೆ. ಏನೂ ಸಮಸ್ಯೆ ಇಲ್ಲ’ ಎಂದು ಟ್ರಸ್ಟ್‌ನ ಅಧ್ಯಕ್ಷರಾಗಿರುವ ಭೀಮಪ್ಪ ಉಗಾರೆ ಮಾತಿಗೆ ಸಿಡಿಮಿಡಿಗೊಂಡಿರುವ ಶಾಸಕ ಸಂಜಯ್‌‌ ಪಾಟೀಲ್‌, ನಿಮಗೆ ಸಮಾಧಾನ ತಂದಿದೆ ಅಂದ್ರೆ ಇಲ್ಲಿಗೆ ಬಂದು ನಾವೇನು ಮಾಡೋಣ..? ಅವರು ಹೇಗೆ ಹೇಳ್ತಾರೆ ಹಾಗೆ ಹೇಳಬೇಕು, ತನಿಖೆ ಮುಗಿಲಿ ಎಂದು ಹೇಳಬೇಕು, ಹಿಂಗೆ ಅಂದು ಬಿಟ್ರಲ್ಲಪ್ಪಾ…!? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌‌ ಕಟೀಲ್‌ ಕಡೆಗೆ ಕೈ ತೋರಿಸಿ, ಅವರು ಹೇಗೆ ಹೇಳ್ತಾರೆ ಹಾಗೆ ಹೇಳ್ಬೇಕು ಎಂದು ತಾಕೀತು ಮಾಡಿದ್ದಾರೆ. ಅಂದರೆ ಅಂದು ಸಂಜಯ ಪಾಟೀಲ್ ಮುಸ್ಲಿಂ ವ್ಯಕ್ತಿ ಬಗ್ಗೆ ಪೊಲೀಸ್ರು ಮುಚ್ಚಿಟ್ಟಿದ್ದರು, ಆ ಬಳಿಕ ಪ್ರತಿಭಟನೆ ಮಾಡ್ತೇವೆ ಎನ್ನುವ ಕಾರಣಕ್ಕೆ ಹೆಸರು ಬಿಡುಗಡೆ ಮಾಡಲಾಯ್ತು ಎಂದಿದ್ದರು ಬಿಜೆಪಿ ಶಾಸಕ. ಇನ್ನು ಹಣಕಾಸಿನ ವಿಚಾರಕ್ಕೆ ಕೊಲೆ ನಡೀತು ಎಂದಿದ್ದ ಮುನಿಗಳ ಮಾತಿಗೆ ಉಲ್ಟಾ ಹೊಡೆದಿದ್ದರು. ಹಣಕಾಸು ವಿಚಾರ ಹೇಳಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ವಿರೋಧ ಪಕ್ಷದ ನಾಯಕನ ಮುಜುಗರ ತಪ್ಪಿಸುವ ಲೆಕ್ಕ..!

ಬಿಜೆಪಿ ಹೈಕಮಾಂಡ್‌ ನಾಯಕರು ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಹಾಗು ರಾಜ್ಯ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು ಕಾಂಗ್ರೆಸ್‌ ಪಾಲಿಗೆ ವರವಾಗಿದ್ದು, ಬಿಜೆಪಿ ನಾಯಕರು ಸದನದಲ್ಲಿ ಬಾಯಿ ಬಿಡುವಂತಿಲ್ಲ ಎನ್ನುವ ಹಾಗೆ ಆಗಿದೆ. ಬಿಜೆಪಿ ನಾಯಕರು ಏನಾದರೂ ಮಾಡಲು ಮುಂದಾದರೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡೋದಕ್ಕೆ ಇನ್ನೂ ಸಾಧ್ಯವಾಗಿಲ್ಲ, ನೀವು ನಮಗೆ ಬುದ್ಧಿ ಹೇಳುತ್ತೀರಿ ಎಂದು ಹಂಗಿಸಯವ ಮಾತುಗಳು ಕಾಂಗ್ರೆಸ್‌ ಪಾಳದಿಂದ ಹೊರ ಬೀಳುತ್ತವೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಸದನದಿಂದ ಹೊರಗೆ ಹೆಚ್ಚು ಹೋರಾಟದ ಕಿಚ್ಚು ಹೊತ್ತಿಸುವ ನಿರ್ಧಾರ ಮಾಡಿದ್ದಾರೆ. ಬೆಳಗಾವಿ ಜೊತೆಗೆ ಟಿ ನರಸೀಪುರ ವಿಚಾರದಲ್ಲೂ ಸಾಧ್ಯವಾದಷ್ಟು ರಾಜಕೀಯ ಹೋರಾಟ ರೂಪಿಸುವ ಬಗ್ಗೆ ಚರ್ಚೆ ಆಗಿದೆ ಎನ್ನಲಾಗಿದೆ. ಆದರೂ ಜೈನ ಮುನಿಗಳ ವಿಚಾರದಲ್ಲಿ ಬಿಜೆಪಿ ನಡಾವಳಿಕೆ ಸರಿಯಾಗಿಲ್ಲ ಎನ್ನಬಹುದು.

ಕೃಷ್ಣಮಣಿ

Tags: basavanagouda yatnalBasavaraj BommaiBJPNalin Kumar Kateel
Previous Post

ಕರೆಂಟ್‌ ಬಿಲ್‌ ಬಗ್ಗೆ ಇದ್ದ ಅನುಮಾನ ದೂರ ಆಗುತ್ತೆ..! ಹೀಗೆ ಮಾಡಿ

Next Post

ಅಮಾನುಷ ಶೋಷಣೆಯೂ ಪಾಪಪ್ರಜ್ಞೆಯ ಪರದೆಯೂ-ಭಾಗ 1

Related Posts

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ
ಅಂಕಣ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

by ಪ್ರತಿಧ್ವನಿ
April 30, 2026
0

ಭಾರತದ ಸಾಮಾಜಿಕ ಮತ್ತು ರಾಜಕೀಯ ಭೂಪಟದಲ್ಲಿ ಕರ್ನಾಟಕವು ಸಾಮಾಜಿಕ ನ್ಯಾಯದ ಪ್ರಯೋಗಶಾಲೆ ಎಂದು ಗುರುತಿಸಲ್ಪಟ್ಟಿದೆ. ಸಹಸ್ರಾರು ವರ್ಷಗಳ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಮಾನ...

Read moreDetails
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

April 30, 2026
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಅಮಾನುಷ ಶೋಷಣೆಯೂ ಪಾಪಪ್ರಜ್ಞೆಯ ಪರದೆಯೂ-ಭಾಗ 1

ಅಮಾನುಷ ಶೋಷಣೆಯೂ ಪಾಪಪ್ರಜ್ಞೆಯ ಪರದೆಯೂ-ಭಾಗ 1

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada