
ಮಹತ್ವದ ಬೆಳವಣಿಗೆಗೆ ಇಂದು ಸಿಎಂ ಸಿದ್ದರಾಮಯ್ಯ ಕಾರಣರಾಗಿದ್ದಾರೆ ಹೌದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವ ಯೋಜನೆಗೆ ಈಗ ಬಹುದೊಡ್ಡ ಪೆಟ್ಟು ಬಿದ್ದಿದೆ
ಈ ಹಿಂದೆ 10 ಕೆಜಿ ಅಕ್ಕಿ ಉಚಿತ ಅಕ್ಕಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು ಆದರೆ ಇದಕ್ಕೆ ಕೇಂದ್ರ ಬಿಜೆಪಿ ಅಡ್ಡಗಾಲು ಹಾಕಿ 10 ಕೆಜಿ ಉಚಿತ ಅಕ್ಕಿಯನ್ನು ಕೊಡುವುದಕ್ಕೆ ಅಡ್ಡಗಾಲು ಹಾಕಿ ರಾಜ್ಯ ಸರ್ಕಾರವನ್ನ ಇಕ್ಕಟ್ಟೆಗೆ ಸಿಲುಕಿಸಿತು

ಹೀಗಾಗಿ ಬೇರೆ ಬೇರೆ ರಾಜ್ಯಗಳ ಮೊರೆ ಹೋದರು ಕೂಡ ಉಚಿತ ಅಕ್ಕಿಯನ್ನು ನೀಡುವ ಸಮಸ್ಯೆ ಬಗೆಹರಿದಿರಲಿಲ್ಲ ಬಳಿಕ ಸಿಎಂ ಸಿದ್ದರಾಮಯ್ಯ ಅವರೇ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ

ಹೀಗಾಗಿ ಇದೀಗ 10 ಕೆಜಿ ಅಕ್ಕಿ ಕೊಡುವ ಬದಲು ಐದು ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿಯ ಬದಲಾಗಿ ಹಣ ನೀಡುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನವನ್ನ ಮಾಡಿದೆ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿಯಾಗಿದ್ದು 5 ಕೆಜಿ ಅಕ್ಕಿ ಹಾಗೂ 170 ಹಣವನ್ನು ನೀಡಲು ತೀರ್ಮಾನವನ್ನ ಮಾಡಲಾಗಿದೆ ಇಲ್ಲಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣವನ್ನ ನೀಡಲು ನಿರ್ಧಾರ ಮಾಡಿದ್ದು 5 ಕೆಜಿಗೆ 170 ಹಣವನ್ನು ನೀಡಲಾಗುತ್ತೆ
ಒಂದು ವೇಳೆ ಒಂದು ಮನೆಯಲ್ಲಿ ಐದು ಮಂದಿ ಇದ್ರೆ ಆ ಕುಟುಂಬಕ್ಕೆ ತಲ 170 ರಂತೆ 850 ರೂಪಾಯಿಗಳನ್ನು ನೀಡುವುದಕ್ಕೆ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರವನ್ನು ಮಾಡಿದ್ದು, ಈ ಬಗ್ಗೆ ಇನ್ನೊಂದಷ್ಟು ಕ್ರಮಗಳನ್ನ ಕೈಗೊಳ್ಳಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಮಾಹಿತಿಯನ್ನು ನೀಡಿದ್ದಾರೆ