ಶಕ್ತಿ ಯೋಜನೆ ಜಾರಿಯಾದಗಿನಿಂದ ಹಲವು ರೀತಿಯ ಸುದ್ದಿಗಳು ಹಬ್ಬುತ್ತಿದೆ, ಅದರಲ್ಲಿ ಪ್ರಮುಖವಾಗಿ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಗೆ ಬಹುದೊಡ್ಡ ನಷ್ಟವಾಗಲಿದೆ, ಇಲಾಖೆಯ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಅವರನ್ನ ಪ್ರಶ್ನಿಸಿದಾಗ ಅದಕ್ಕೆ ಸಚಿವರು ಸಾರಿಗೆ ಇಲಾಖೆಗೆ ನಷ್ಟವಾಗುವ ಯಾವುದೇ ಸಮಸ್ಯೆಗಳು ಸದ್ಯದ ಮಟ್ಟಿಗೆ ಇಲ್ಲ, ನಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡಲು ಪ್ರಯತ್ನವನ್ನ ಪಡುತ್ತೇವೆ. ಅಂತ ಸ್ಪಷ್ಟನೆಯನ್ನು ನೀಡಿದ್ದಾರೆ
ಈ ಕುರಿತು ಮಾತನಾಡಿರುವ ಅವರು, ಸರ್ಕಾರ ಸಂಬಳ ಕೊಡದಿದ್ದಾಗ ಸಂಬಳ ನೀಡಿಲ್ಲ ಎಂದು ಹೇಳುವುದು ಸರಿ, ಸರ್ಕಾರದಿಂದ ಈಗ ಹಣದ ಸೌಲಭ್ಯ ಸಿಗುತ್ತಿದ್ದು, ಸಾರಿಗೆ ಸಂಸ್ಥೆಯ ಸಂಪನ್ಮೂಲಗಳಿಂದ ಕೂಡ ಹಣ ಸಂಗ್ರಹವಾಗುತ್ತಿದೆ. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಸಂಸ್ಥೆಗೆ ಯಾವುದೇ ರೀತಿಯಾದ ಸಂಕಷ್ಟಗಳು ತಲೆದೂರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಸಾರಿಗೆ ಸಂಸ್ಥೆಯಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸಾರಿಗೆ ಇಲಾಖೆ ನಷ್ಟದ ಹಾದಿಯನ್ನು ಹಿಡಿದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಎಂಬ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು.. ಇಲ್ಲಿ ನಷ್ಟ ಎಂಬುದು ಇಲ್ಲವೇ ಇಲ್ಲ ಮಹಿಳೆಯರ ಉಚಿತ ಪ್ರಯಾಣಕ್ಕೆ ನಮ್ಮ ಸರ್ಕಾರ ಅನುವು ಮಾಡಿಕೊಟ್ಟಿದೆ ಯಾವುದೇ ನಷ್ಟದ ಪ್ರಮೇಯ ಇಲ್ಲಿ ಬರುವುದಿಲ್ಲ ಅಂತ ಹೇಳಿದ್ದಾರೆ
ಒಟ್ಟಾರೆಯಾಗಿ ಸದ್ಯದ ಮಟ್ಟಿಗೆ ಸಾರಿಗೆ ಸಚಿವರ ಮಾತುಗಳು ಸಾರಿಗೆ ಇಲಾಖೆಯಲ್ಲಿ ಶಕ್ತಿ ಯೋಜನೆಯಿಂದ ಯಾವುದೇ ಸಮಸ್ಯೆಗಳು ಬಂದಿಲ್ಲ ಎಂಬುದು ಮೇಲ್ನೋಟದಲ್ಲಿ ಕಂಡುಬರುತ್ತದೆ. ಆದರೆ ನಿಜವಾದ ಸಮಸ್ಯೆಗಳನ್ನು ಕಾಣಬೇಕಾದರೆ ಮೂರು ತಿಂಗಳವರೆಗೆ ಕಾಯಲೇ ಬೇಕು ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ..