ಅಮಾವಾಸ್ಯೆ ಎಫೆಕ್ಟ್ನಿಂದಾಗಿ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಾದಪ್ಪನ ಸನ್ನಿಧಿಯಲ್ಲಿ ಜನ ಸಾಗರ ಕಂಡುಬಂದಿತ್ತು. ಚಿನ್ನದ ರಥ ವೀಕ್ಷಣೆಗೆ ಸಾಗರೋಪಾದಿಯಲ್ಲಿ ಭಕ್ತರು ನೆರೆದಿದ್ರು. ಫ್ರೀ ಬಸ್ ಎಂದಾಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬೆಟ್ಟಕ್ಕೆ ಆಗಮಿಸಿದ್ದು, ಮಾದಪ್ಪನ ಬೆಟ್ಟಕ್ಕೆ ತೆರಳುವ ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೂರು ಗಂಟೆಗೂ ಅಧಿಕ ಕಾಲ ಪ್ರಯಾಣಿಕರು ನಿಂತಲ್ಲೇ ನಿಂತಿದ್ದರು.
ಗಂಟೆಗಟ್ಟಲೇ ಕಾರಿನಲ್ಲೇ ಕುಳಿತಿದ್ದ ಯುವಕ ನಿತ್ರಾಣಗೊಂಡಿದ್ದು, ಟ್ರಾಫಿಕ್ ಜಾಮ್ನಿಂದ ಆಸ್ಪತ್ರೆಗೆ ತಲುಪದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಟವಲ್ನಿಂದ ಗಾಳಿ ಬೀಸಿ ಯುವಕನನ್ನು ರಕ್ಷಿಸಿದ್ರು. ಇನ್ನು ಜನಸಂಖ್ಯೆಗೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು ಎಂದು ಮಾದಪ್ಪನ ಭಕ್ತರು ಆಗ್ರಹಿಸಿದ್ದಾರೆ.