ಎಚ್.ಡಿ.ಕೋಟೆ: ಮತ್ತೆ ಭಾನುವಾರ ರಜಾದಿನ ಮುಂದುವರೆದ ಕೆರೆ ಜಾಗ ಒತ್ತುವರಿ. ಕೆರೆಜಾಗ ಒತ್ತುವರಿಗೆ ತಡೆಗೆ ಮುಂದಾದ ಗ್ರಾಮಸ್ಥರು. ಗ್ರಾಮಸ್ಥರು ಮತ್ತು ಕೆರೆಜಾಗ ಒತ್ತುವರಿದಾರರ ನಡುವೆ ತೀವ್ರ ಮಾತಿನ ವಾಗ್ದಾಳಿ. ಕೆರೆ ಜಾಗ ಉಳುಮೆ ಮಾಡದಂತೆ ಇತ್ತೀಚೆಗಷ್ಟೆ ಸೂಚನೆ ನೀಡಿದ್ದ ತಹಶೀಲ್ದಾರ್, ಆದ್ರೆ ಅಧಿಕಾರಿಗಳ ಸೂಚನೆಯನ್ನ ಗಾಳಿಗೆ ತೂರಿದ ಗ್ರಾಮಸ್ಥರು, ಸರ್ಕಾರಿ ರಜಾ ದಿನಗಳು ರಾತ್ರಿ ವೇಳೆಯನ್ನೆ ಕೆರೆ ಒತ್ತುವರಿಗೆ ನಿಗದಿ ಪಡಿಸಿಕೊಳ್ಳುವ ಭೂಗಳ್ಳರು. 50 ವರ್ಷದ ದಾಖಲಾತಿಗಳಿದ್ದರೂ ರಾಜವಂಶಸ್ಥರ ಕಾಲದ ಕೆರೆ ಉಳಿವಿಗೆ ಮುಂದಾಗದ ಅಧಿಕಾರಿಗಳು. ಅಧಿಕಾರಿಗಳ ನಡೆಗೆ ಅನುಮಾನ ವ್ಯಕ್ತ ಪಡಿಸುವಸಾರ್ವಜನಿಕರು.

ಎಲ್ಲಿದೆ ಕೆರೆಕಟ್ಟೆ ಗೋಮಾಳ ಅರಣ್ಯ ಇಲಾಖೆ ಜಾಗ ಸಂರಕ್ಷಣೆಯ ಸರ್ಕಾರ ಆದೇಶ. ಪದೇ ಪದೇ ಟ್ರಾಕ್ಟರ್, ಜೆಸಿಬಿ ಬಳಕೆ ಮಾಡಿ ಕೆರೆಜಾಗ ಅಕ್ರಮವಾಗಿ ಉಳುಮೆ ಮಾಡುದರೂ ಭೂಗಳ್ಳರ ವಿರುದ್ದ ಕ್ರಮ ಕೈಗೊಳ್ಳದ ತಾಲೂಕು ಆಡಳಿತ. ಈಗಾಗಲೆ ಕೆರೆಯ ಬಹುತೇಕ ಜಾಗ ಉಳುಮೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಇಲಾಖಾ ಅಧಿಕಾರಿಗಳು. ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಲ್ಲಿರುವ ಮೈಸೂರು ಒಡೆಯರ್ ಚನ್ನಯ್ಯನ ಕಟ್ಟೆ ಕೆರೆ. ವನ್ಯಜೀವಿಗಳು ಜನ ಜಾನುವಾರುಗಳ ನೀರಿನ ದಾಹ ಥಣಿಸಲು ನಿರ್ಮಾಣಗೊಂಡಿದ್ದ ಕೆರೆ. ಕೆರೆ ಕಟ್ಟೆ ಸಂರಕ್ಷಿಸಬೇಕು ಅನ್ನುವ ಸರ್ಕಾರದ ನಿಯಮಕ್ಕಿಲ್ಲ ಕಿಮ್ಮತ್ತಿನ ಬೆಲೆ. ಅಧಿಕಾರಿಗಳೇ ಭೂಗಳ್ಳರೊಡನೆ ಶಾಮೀಲಾಗಿರುವ ಸಂಶಯ ವ್ಯಕ್ತಪಡಿಸುವ ಸಾರ್ವಜನಿಕರು. ಕೆಲದಿನಗಳ ಹಿಂದೆ ಅರ್ಧ ಕೆರೆ ಉಳುಮೆ ಮಾಡಿದ್ದ ಭೂಹಳ್ಳರಿಂದ ಭಾನುವಾರ ಮತ್ತೆ ಮುಂದುವರೆದ ಒತ್ತುವರಿ.

ಒತ್ತುವರಿಗೆ ಬಂದಿದ್ದ ಜೆಸಿಬಿ ತಡೆದು ತಹಶೀಲ್ದಾರ್ಉಒವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿ ಕೆರೆ ರಕ್ಷಣೆಗೆ ಮನವಿ ಮಾಡಿದ ಸಾರ್ವಜನಿಕರು. ತಡವಾಗಿ ಪೊಲೀಸರ ಜೊತೆ ಸ್ಥಳಕ್ಕಾಗಮಿಸಿ ನಾಮಪಲಕ ಇಲ್ಲದ ಜೆಸಿಬಿ ವಶಕ್ಕೆ ತೆಗೆದುಕೊಂಡ ತಹಶೀಲ್ದಾರ್ ಮಹೇಶ್. ಸಾರ್ವಜನಿಕರ ಕೆರೆ ರಕ್ಷಣೆಗೆ ಆಕ್ಷೇಪ ವ್ಯಕ್ತಪಡಿಸಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಕೆರಡ ಒತ್ತುವರಿದಾರ ಮಹಿಳೆಯರು. ಅಧಿಕಾರಿಗಳು ಮೌನವಹಿಸಿದೆ ಕೆರೆ ರಕ್ಷಿಸಿ ಇಲ್ಲದೆ ಕೃಷಿ ಭೂಮಿ ಎಂದು ಘೋಷಿಸಿ ಅದು ಬಿಟ್ಟು ಮೌನಕ್ಕೆ ಶರಣಾಗುವುದು ಎಷ್ಟು ಸರಿ ಸಾರ್ವಜನಿಕರ ವಾದ. ಸರ್ಕಾರ ಮತ್ತು ತಾಲೋಕಿನ ಶಾಸಕರು ಸರ್ಕಾರದ ಕೆರೆ ಜಾಗ ಉಳಿಸಿ ಸರ್ಕಾರದ ನಿಯಮಪಾಲಿಸುವಂತೆ ಸಲಹೆ. ತಪ್ಪಿದರೆ ಕೆರೆ ಒತ್ತುವರಿದಾರರು ಮತ್ತು ಗ್ರಾಮಸ್ಥರ ನಡುಬೆ ವೈಶಮ್ಹ ಬೆಲೆದು ಅನಾಹುತವಾಗುವಾದರೆ ಹೊಣದ ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.