ಮಂಗಳೂರು : ಕೋಮುದ್ವೇಷದಿಂದ ಕರಾವಳಿಯಲ್ಲಿ ಕೊಲೆಯಾದ ನಾಲ್ವರಿಗೆ ರಾಜ್ಯ ಸರ್ಕಾರ ನಿನ್ನೆ ಪರಿಹಾರವನ್ನು ಘೋಷಣೆ ಮಾಡಿದೆ. ಈ ವಿಚಾರವಾಗಿ ಇಂದು ಮಂಗಳೂರಿನಲ್ಲಿ ಮಾತನಾಡಿದ 2017ರಲ್ಲಿ ಕೊಲೆಯಾದ ಶರತ್ ಮಡಿವಾಳ ತಂದೆ ಮಾತನಾಡಿದ್ದು ನಮಗೆ ಇನ್ನೂ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

ಬಿ.ಸಿ ರೋಡ್ನಲ್ಲಿ ಈ ವಿಚಾರವಾಗಿ ಮಾತನಾಡಿದ ತನಿಯಪ್ಪ ಮಡಿವಾಳ, ಶರತ್ ಮಡಿವಾಳ ಆರ್ಎಸ್ಎಸ್ನವನು ಎಂಬ ಕಾರಣಕ್ಕೆ ನಮಗೆ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ಕೂಡ ನಮಗೆ ಯಾವುದೇ ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.
ನನಗೆ ಈಗ 74 ವರ್ಷ, ಆದರೆ ನಾನಿನ್ನೂ ಲಾಂಡ್ರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಎಲ್ಲಾ ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿವೆ ಎಂದು ಹೇಳಿದ್ದಾರೆ.