ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾಮುಕ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದಂತಹ ಘಟನೆ 6 ತಿಂಗಳ ನಂತರ ಬೆಳಕಿಗೆ ಬಂದಿದೆ . ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಅತಿಥಿ ಉಪನ್ಯಾಸಕ ಸೆಕ್ಸ್ ಗೆ ಸಂಬಂಧಿಸಿದಂತೆ ಮಾತನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ .
ಗುಲ್ಬರ್ಗಾ ವಿಶ್ವವಿದ್ಯಾಲಯ ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ವಿಶ್ವವಿದ್ಯಾಲಯವಾಗಿದ್ದು 39 ವರ್ಷಗಳಲ್ಲಿ , ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡಿದೆ . ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕನೊಬ್ಬ ತನ್ನ ವಿಭಾಗದ ವಿದ್ಯಾರ್ಥಿನಿಗೆ ರಾತ್ರಿ ಸಮಯದಲ್ಲಿ ಕರೆ ಮಾಡಿ ಮಂಚಕ್ಕೆ ಕರೆದಿದ್ದಾನೆ .
ಆದರೆ ಆ ವಿದ್ಯಾರ್ಥಿನಿ ಎಷ್ಟೇ ಬಾರಿ ನೋ ಸರ್ ಎಂದು ವಿರೋಧಿಸಿದರೂ , ಬಿಡದ ಭೂಪ ನೀನು ನನ್ನ ಗರ್ಲ್ ಫ್ರೆಂಡ್ ಎಂದು ಕಿರುಕುಳ ನೀಡಿರುವ ಆಡಿಯೋ ವೈರಲಾಗಿದೆ .
ನನ್ನಿಂದ ಏನು ತೊಂದರೆ ಆಗಲ್ಲ , ನೀ ನನಗೆ ಕೋ ಆಪರೇಟ್ ಮಾಡಬೇಕು , ರೂಮಿಗೆ ಕರೀತೀನಿ , ರೂಮಿಗೆ ಬಾ ಕಿಸ್ ಮಾಡ್ತಿನಿ , ನನ್ನ ಮೇಲೆ ನಂಬಿಕೆ ಇಡು , ಮೊದಲು ನನಗೆ ಹತ್ತಿರ ಆಗು , ಮುಂದೆ ನೋಡೋಣ ಎಂದು ಪೀಡಿಸಿದ್ದಾನೆ .
ಇದನ್ನು ನಯವಾಗಿಯೇ ಎಲ್ಲದಕ್ಕೂ ನೋ ಸರ್ ಎಂದೆ ಉತ್ತರ ನೀಡಿದಾಳೆ ವಿದ್ಯಾರ್ಥಿನಿ , ವಿಶ್ವವಿದ್ಯಾಲಯ ಘನತೆ ಹಾಳು ಮಾಡಿದ ಅತಿಥಿ ಶಿಕ್ಷಕನ ವಿರುದ್ಧ ಕ್ಯಾಂಪಸ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ . ಈ ಘಟನೆ ವಿಶ್ವವಿದ್ಯಾಲಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .
