ಒಡಿಶಾ : ಒಡಿಶಾದ ಬಾಲಸೋರ್ ರೈಲು ದುರಂತದಲ್ಲಿ 280ಕ್ಕೂ ಅಧಿಕ ಮಂದಿ ಜೀವ ತೆತ್ತಿದ್ದು 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಹಾಗೂ ಸರಕು ಸಾಗಣೆ ರೈಲು ಡಿಕ್ಕಿಯಾದ ಪರಿಣಾಮ ಅಪಘಾತವಾಗಿತ್ತು. ಇದಾಗಿ ಕೆಲವೇ ನಿಮಿಷಗಳಲ್ಲಿ ಇದೇ ಹಳಿಯಲ್ಲಿ ಬಂದ ಯಶವಂತಪುರ – ಹೌರಾ ಎಕ್ಸ್ಪ್ರೆಸ್ ಕೂಡ ಡಿಕ್ಕಿ ಹೊಡೆದಿದ್ದು ದುರಂತ ಸಂಭವಿಸಿದೆ.
ದುರ್ಘಟನೆ ಬಗ್ಗೆ ಭಾರತೀಯ ರೈಲು ಕಾರ್ಯನಿರ್ವಾಹಕ ನಿರ್ದೇಶಕ ಅಮಿತಾಭ್ ಶರ್ಮಾ ಮಾಹಿತಿ ನೀಡಿದ್ದು, ಸಂಜೆ ಸುಮಾರು 7 ಗಂಟೆಗೆ ಈ ದುರ್ಘಟನೆ ಸಂಬವಿಸಿದೆ. ಎರಡು ಪ್ರಯಾಣಿಕ ರೈಲು ಹಾಗೂ ಒಂದು ಸರಕು ಸಾಗಣೆ ರೈಲು ಪರಸ್ಪರ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದಿದ್ದಾರೆ.
ಬಾಲಸೋರ್ ರೈಲು ನಿಲ್ದಾಣದ ಬಳಿಯಲ್ಲಿ ನಿಂತುಕೊಂಡಿದ್ದ ಗೂಡ್ಸ್ ರೈಲಿಗೆ ಚೆನ್ನೈ ಕಡೆಗೆ ತೆರಳುತ್ತಿದ್ದ ಕೋರಮಂಡಲ್ ಶಾಲಿಮಾರ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಪ್ರಯಾಣಿಕರಿದ್ದ ಬೋಗಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಇದಾಗಿ ಕೆಲವೇ ನಿಮಿಷಗಳಲ್ಲಿ ಇದೇ ಹಳಿಯಲ್ಲಿ ಬಂದ ಯಶವಂತಪುರ – ಹೌರಾ ಸೂಪರ್ಪಾಸ್ಟ್ ರೈಲು ಕೋರಮಂಡಲ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು. ರೈಲುಗಳ ವೇಗ ಹೆಚ್ಚಿದ್ದರಿಂತ ಅಪಘಾತದ ಭೀಕರತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.